ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು

ಪ್ರಯಾಣಿಕರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಾರಕ್ಕೊಮ್ಮೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ಮುಂದಾಗಿದೆ. ಸಿಕಂದರಾಬಾದ್ ಟು ಅರಸೀಕೆರೆ ಮತ್ತು ಹೈದರಾಬಾದ್ ಟು ಅರಸೀಕೆರೆ ನಡುವೆ ವಾರಕೊಮ್ಮೆ ಸಂಚರಿಸಲಿರುವ ವಿಶೇಷ ರೈಲುಗಳ ದಿನಾಂಕ, ವೇಳಾಪಟ್ಟಿ ಮತ್ತು ನಿಲುಗಡೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಕರ್ನಾಟಕದ ಈ ಭಾಗದಿಂದ ಸಿಕಂದರಾಬಾದ್, ಹೈದರಾಬಾದ್​ಗೆ ವಿಶೇಷ ರೈಲು
ಪ್ರಾತಿನಿಧಿಕ ಚಿತ್ರ

Updated on: Jul 09, 2025 | 9:17 AM

ಬೆಂಗಳೂರು, ಜುಲೈ 09: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸಿಕಂದರಾಬಾದ್ ಟು ಅರಸೀಕೆರೆ (Arsikere and Hyderabad) ಮತ್ತು ಹೈದರಾಬಾದ್ ಟು ಅರಸೀಕೆರೆ ನಡುವೆ ವಾರಕೊಮ್ಮೆ ವಿಶೇಷ ರೈಲುಗಳು ಸಂಚರಿಸಲಿವೆ. ಈ ಬಗ್ಗೆ ನೈರುತ್ಯ ರೈಲ್ವೆ (South Western Railway) ಟ್ವೀಟ್ ಮೂಲಕ ಮಾಹಿತಿ ನೀಡಿದೆ. ವಿಶೇಷ ರೈಲುಗಳ ಸಂಚಾರ, ದಿನಾಂಕ ಮತ್ತು ಸಮಯ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಕಂದರಾಬಾದ್ ಟು ಅರಸೀಕೆರೆ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ (07079/07080) ಸಿಕಂದರಾಬಾದ್ ಟು ಅರಸೀಕೆರೆ ಟು ಸಿಕಂದರಾಬಾದ್ ವಾರಕೊಮ್ಮೆ ಸಂಚರಿಸುವ ರೈಲು ಎರಡು ಕಡೆಗೆ ಒಟ್ಟು ಎಂಟು ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ.
  • ರೈಲು ಸಂಖ್ಯೆ (07079) ಸಿಕಂದರಾಬಾದ್ ಟು ಅರಸೀಕೆರೆ ವಿಶೇಷ ರೈಲು ಜುಲೈ 13 ರಿಂದ ಆಗಸ್ಟ್​ 31ರ ವರೆಗೆ ಭಾನುವಾರದಂದು ಕಾರ್ಯನಿರ್ವಹಿಸಲಿದೆ.
  • ರೈಲು ಸಂಖ್ಯೆ (07080) ಅರಸೀಕೆರೆ ಟು ಸಿಕಂದರಾಬಾದ್ ವಿಶೇಷ ರೈಲು ಜುಲೈ 14 ರಿಂದ ಸೆಪ್ಟೆಂಬರ್​ 01 ರ ವರೆಗೆ ಸೋಮವಾರದಂದು ಕಾರ್ಯನಿರ್ವಹಿಸಲಿದೆ.
  • ಈ ರೈಲುಗಳು 22 ಎಲ್​​ಹೆಚ್​​ಬಿ (LHB) ಕೋಚ್‌ಗಳು 2 AC ಟು ಟೈರ್, 6 AC ತ್ರೀ ಟೈರ್, 7 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್, 1 ಪ್ಯಾಂಟ್ರಿ ಕಾರ್, 1 ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 SLRD ಕೋಚ್ ಒಳಗೊಂಡಿವೆ.

ಹೈದರಾಬಾದ್ ಟು ಅರಸೀಕೆರೆ ವಿಶೇಷ ರೈಲು ವೇಳಾಪಟ್ಟಿ

  • ರೈಲು ಸಂಖ್ಯೆ (07069/07070) ಹೈದರಾಬಾದ್ ಟು ಅರಸೀಕೆರೆ ವಾರಕೊಮ್ಮೆ ಸಂಚರಿಸುವ ವಿಶೇಷ ರೈಲು ಎರಡು ದಿಕ್ಕಿನಲ್ಲಿ ಎಂಟು ಟ್ರಿಪ್‌ಗಳಲ್ಲಿ ಸಂಚಾರ ನಡೆಸಲಿದೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಘೋಷಣೆ ಬೆನ್ನಲ್ಲೇ ಕ್ರಮ

  • ರೈಲು ಸಂಖ್ಯೆ (07069) ಹೈದರಾಬಾದ್ ಟು ಅರಸೀಕೆರೆ ವಿಶೇಷ ರೈಲು ಜುಲೈ 08 ರಿಂದ ಆಗಸ್ಟ್ 26 ರ ವರೆಗೆ ಪ್ರತಿ ಮಂಗಳವಾರದಂದು ಕಾರ್ಯನಿರ್ವಹಿಸಲಿದೆ.
  • ರೈಲು ಸಂಖ್ಯೆ (07070) ಅರಸೀಕೆರೆ ಟು ಹೈದರಾಬಾದ್ ವಿಶೇಷ ರೈಲು ಜುಲೈ 09ರಿಂದ ಆಗಸ್ಟ್​ 27 ರ ವರೆಗೆ ಕಾರ್ಯನಿರ್ವಹಿಸಲಿದೆ.
  • ಈ ರೈಲುಗಳು 22 LHB ಕೋಚ್‌ಗಳು 4 AC ಟು ಟೈರ್, 8 AC ತ್ರೀ ಟೈರ್, 6 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್, 1 ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 SLRD ಕೋಚ್ ಒಳಗೊಂಡಿದೆ.

ಸಮಯ ಮತ್ತು ನಿಲುಗಡೆ ಹೀಗಿವೆ

ರೈಲು ಸಂಖ್ಯೆ (07079) ಸಿಕಂದರಾಬಾದ್ ಟು ಅರಸೀಕೆರೆ ವಿಶೇಷ ಭಾನುವಾರದಂದು 06:05 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಟು ಮರುದಿನ (ಸೋಮವಾರ) 12:45 ಗಂಟೆಗೆ ಅರಸೀಕೆರೆ ತಲುಪುತ್ತದೆ. ಮಾರ್ಗದಲ್ಲಿ ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್, ಗೂಟಿ, ಅನಂತಪುರ, ಧರ್ಮವರಂ, ಹಿಂದೂಪುರ, ಯಲಹಂಕ ಮತ್ತು ತುಮಕೂರಿನಲ್ಲಿ ನಿಲುಗಡೆ ಹೊಂದಿದೆ.

ರೈಲು ಸಂಖ್ಯೆ (07080) ಅರಸೀಕೆರೆ ಟು ಸಿಕಂದರಾಬಾದ್ ವಿಶೇಷ ರೈಲು ಸೋಮವಾರದಂದು 02 ಗಂಟೆಗೆ ಅರಸೀಕೆರೆಯಿಂದ ಹೊರಟು ಮರುದಿನ (ಮಂಗಳವಾರ) 07:45 ಗಂಟೆಗೆ ಸಿಕಂದರಾಬಾದ್‌ಗೆ ತಲುಪುತ್ತದೆ. ತುಮಕೂರು, ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಕೃಷ್ಣಾಕ್ ಗೂಟಿಯಲ್ಲಿ ನಿಲುಗಡೆ ಇರುತ್ತದೆ. ಯಾದಗಿರಿ, ತಾಂಡೂರು, ವಿಕಾರಾಬಾದ್, ಲಿಂಗಂಪಲ್ಲಿ ಮತ್ತು ಬೇಗಂಪೇಟೆಯಲ್ಲಿ ನಿಲುಗಡೆ ಹೊಂದಿದೆ.

ಇದನ್ನೂ ಓದಿ: ಇವಿ ವಾಹನಗಳಿಗೆ ಬೇಡಿಕೆ ಬೆನ್ನಲ್ಲೇ ಚಾರ್ಜಿಂಗ್ ಸ್ಟೇಷನ್​ಗಳ ಕೊರತೆ: ಮಹತ್ವದ ಯೋಜನೆ ಕೈಬಿಟ್ಟ ಇಂಧನ ಇಲಾಖೆ

ರೈಲು ಸಂಖ್ಯೆ (07069) ಹೈದರಾಬಾದ್ ಟು ಅರಸೀಕೆರೆ ವಿಶೇಷ ರೈಲು ಮಂಗಳವಾರ ಸಂಜೆ 7:20ಕ್ಕೆ ಹೈದರಾಬಾದ್‌ನಿಂದ ಹೊರಟು ಮರುದಿನ (ಬುಧವಾರ) ಮಧ್ಯಾಹ್ನ 12:45 ಕ್ಕೆ ಅರಸೀಕೆರೆಗೆ ಆಗಮಿಸುತ್ತದೆ. ಇದು ಸಿಕಂದರಾಬಾದ್, ಕಾಚೆಗುಡ, ಉಮ್ದಾನಗರ್, ಶಾದ್‌ನಗರ, ಜಡ್ಚೆರ್ಲಾ, ಮಹಬೂಬ್‌ನಗರ, ವನಪರ್ತಿ ರಸ್ತೆ, ಗದ್ವಾಲ್, ಕರ್ನೂಲ್ ಸಿಟಿ, ಧೋನೆ, ಅನಂತಪುರ, ಧರ್ಮಾವರಂ, ಹಿಂದೂಪುರ, ಯಲಹಂಕ ಮತ್ತು ತುಮಕೂರಿನಲ್ಲಿ ನಿಲುಗಡೆ ಹೊಂದಿದೆ.

ರೈಲು ಸಂಖ್ಯೆ (07070) ಅರಸೀಕೆರೆ ಟು ಹೈದರಾಬಾದ್ ವಿಶೇಷ ರೈಲು ಬುಧವಾರದಂದು ಮಧ್ಯಾಹ್ನ 02 ಗಂಟೆಗೆ ಅರಸೀಕೆರೆಯಿಂದ ಹೊರಟು ಮರುದಿನ (ಗುರುವಾರ) 07:50 ಗಂಟೆಗೆ ಹೈದರಾಬಾದ್‌ಗೆ ತಲುಪುತ್ತದೆ. ತುಮಕೂರು, ಯಲಹಂಕ, ಹಿಂದೂಪುರ, ಧರ್ಮವರಂ, ಅನಂತಪುರ, ಧೋಣೆ, ಕರ್ನೂಲ್ ಸಿಟಿ, ಜವಾನಗರ್ ಗದ್ವಾಲ್, ಜವಾನಗರ್ ಗದ್ವಾಲ್, ಮಹಬೂಬನಗರ, ಗದ್ವಾಲ್ ಉಮ್ದನಗರ, ಕಾಚೇಗೌಡ ಮತ್ತು ಸಿಕಂದರಾಬಾದ್​ನಲ್ಲಿ ನಿಲುಗಡೆ ಹೊಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:14 am, Wed, 9 July 25