ಮೈಸೂರಿನ ಫಲಾನುಭವಿಗಳಿಗೆ ಅನ್ನಭಾಗ್ಯದ ಹಣ ಸಂದಾಯ ಮಾಡಿದ ಸರ್ಕಾರ; ಸಿಎಂಗೆ ಧನ್ಯವಾದ ತಿಳಿಸಿದ ಕುಟುಂಬ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 10:46 AM

ನಿನ್ನೆ(ಜು.10) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿಯ ಹಣ ಸಂದಾಯಕ್ಕೆ ಚಾಲನೆ ನೀಡಿದ್ದರು. ಅದರಂತೆ ಚಾಲನೆ ನೀಡಿದ ದಿನವೇ ಮೈಸೂರು ಜಿಲ್ಲೆಯ ಕನಕಗಿರಿಯ ನಾಲ್ವರು ಸದಸ್ಯರಿರುವ ಹೊನ್ನಮ್ಮ ಅವರ ಕುಟುಂಬಕ್ಕೆ ಅನ್ನಭಾಗ್ಯದ ಹಣ680 ರೂಪಾಯಿ ಜಮೆಯಾಗಿದೆ.

ಮೈಸೂರಿನ ಫಲಾನುಭವಿಗಳಿಗೆ ಅನ್ನಭಾಗ್ಯದ ಹಣ ಸಂದಾಯ ಮಾಡಿದ ಸರ್ಕಾರ; ಸಿಎಂಗೆ ಧನ್ಯವಾದ ತಿಳಿಸಿದ ಕುಟುಂಬ
ಅನ್ನಭಾಗ್ಯ
Follow us on

ಮೈಸೂರು: ಕಾಂಗ್ರೆಸ್​ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಯೋಜನೆ(Anna Bhagya scheme)ಯಡಿ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಿತ್ತು. ಆದರೆ, ಅಷ್ಟೊಂದು ಅಕ್ಕಿ ಪೂರೈಕೆಯಾಗದ ಹಿನ್ನಲೆ 5 ಕೆ.ಜಿ ಅಕ್ಕಿಯನ್ನ ನೀಡಿ, ಇನ್ನುಳಿದ 5 ಕೆ.ಜಿ ಅಕ್ಕಿಯ ಹಣವನ್ನ ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲು ನಿರ್ಧರಿಸಿತ್ತು. ಅದರಂತೆ ನಿನ್ನೆ(ಜು.10) ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದಕ್ಕೆ ಚಾಲನೆ ನೀಡಿದ್ದರು. ಅದರಂತೆ ಚಾಲನೆ ನೀಡಿದ ದಿನವೇ ಮೈಸೂರು ಜಿಲ್ಲೆಯ ಕನಕಗಿರಿಯ ನಾಲ್ವರು ಸದಸ್ಯರಿರುವ ಹೊನ್ನಮ್ಮ ಅವರ ಕುಟುಂಬಕ್ಕೆ ಅನ್ನಭಾಗ್ಯದ ಹಣ680 ರೂಪಾಯಿ ಸಂದಾಯವಾಗಿದೆ.

ನಿನ್ನೆ ಹೊನ್ನಮ್ಮ ಅವರ ಬ್ಯಾಂಕ್ ಖಾತೆಗೆ ಜಮಾವಣೆಯಾದ ಹಣ

ಇನ್ನು ಅನ್ನಭಾಗ್ಯ ಯೋಜನೆಯ ಹಣ ಸಂದಾಯವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಡೀ ಕುಟುಂಬ ಧನ್ಯವಾದ ತಿಳಿಸಿದೆ. ಒಂದು ಕಡೆ ಅಕ್ಕಿ ಸೇರಿ 20 ಕೆಜಿ ಧಾನ್ಯ ನೀಡಿದ್ದಾರೆ. ಮತ್ತೊಂದು ಕಡೆ ಹಣ ಸಹ ಬ್ಯಾಂಕ್ ಖಾತೆಗೆ ಬಂದಿದೆ. ಹಣ ನೀಡಿರುವುದರಿಂದ ಇತರ ವಸ್ತುಗಳ ಖರೀದಿಗೆ ಅನುಕೂಲವಾಗಲಿದೆ. ಮುಂದೆಯೂ ಇದೇ ರೀತಿ ಧಾನ್ಯದ ಜೊತೆ ಹಣ ನೀಡಿದರೆ ಅನುಕೂಲವಾಗಲಿದೆ ಎಂದು ಫಲಾನುಭವಿ ಯೋಗೇಶ್ವರ ಹೇಳಿದರು.

ಇದನ್ನೂ ಓದಿ:ಅನ್ನಭಾಗ್ಯ ಯೋಜನೆ ಜಾರಿಯಾಗಿ 10 ವರ್ಷ ಪೂರೈಕೆ: ಟ್ವೀಟ್​ ಮೂಲಕ ಸಂತಸ ವ್ಯಕ್ತಪಡಿಸಿದ ಸಿಎಂ ಸಿದ್ಧರಾಮಯ್ಯ

ಮೈಸೂರು, ಕೋಲಾರ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಹಣ ಹಾಕುವ ಮೂಲಕ ಚಾಲನೆ ನೀಡಿದ್ದ ಸಿಎಂ, ಡಿಸಿಎಂ

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಅವರು ಮೈಸೂರು, ಕೋಲಾರ ಜಿಲ್ಲೆಯ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಹಣ ಹಾಕುವ ಮೂಲಕ ಚಾಲನೆ ನೀಡಿದ್ದರು. ಇದೇ ವೇಳೆ ಯೋಜನೆಯ ಲೋಗೋವನ್ನು ಬಿಡುಗಡೆ ಮಾಡಿದ್ದರು. ನಂತರ ರಾಜ್ಯದ ಎಲ್ಲಾ ಫಲಾನುಭವಿಗಳ ಖಾತೆಗೆ ಹಂತ ಹಂತವಾಗಿ ಜಮೆಯಾಗಲಿದೆ. ಹಂತವಾಗಿ ಇಡೀ ರಾಜ್ಯದ ಫಲಾನುಭವಿಗಳಿಗೆ ಹಣ ಜಮೆಯಾಗಲಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:46 am, Tue, 11 July 23