ಬೆಂಗಳೂರು: ಆರ್ಡಿಪಿಆರ್ನ ಎಲ್ಲಾ ಸಿಬ್ಬಂದಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸಿ ಸರ್ಕಾರ ಆದೇಶ ಹೊರಡಿಸಿದೆ. 2020ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಈ ಆದೇಶ ನೀಡಲಾಗಿರುವುದು ಮಹತ್ವದ ತೀರ್ಮಾನವಾಗಿದೆ.
ನಗರ ಮತ್ತು ಸ್ಥಳೀಯ ಸಂಸ್ಥೆಗಳು, ಜಿ.ಪಂ, ತಾ.ಪಂ ಸದಸ್ಯರು ಮತ್ತು ಗ್ರಾ.ಪಂ. ಸದಸ್ಯರನ್ನು ಕೊವಿಡ್ ವಾರಿಯರ್ಸ್ ಎಂದು ಪರಿಗಣಿಸಿ ಆದ್ಯತೆ ಮೇರೆಗೆ ಮೊದಲ ಡೋಸ್ ಕೊವಿಡ್ ಲಸಿಕೆ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದರು. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ಮೂಲಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿಯನ್ನು ಸಿಎಂ ಯಡಿಯೂರಪ್ಪ ಪುರಸ್ಕರಿಸಿದಂತಾಗಿತ್ತು.
ಶಿಕ್ಷಕರನ್ನು ಫ್ರಂಟ್ ಲೈನ್ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ, ವಿಮಾ ಸೌಲಭ್ಯದೊಂದಿಗೆ ಆದೇಶ ಹೊರಡಿಸಬೇಕು. ಕೊರೊನಾ ವಾರಿಯರ್ಸ್ ಸಹಿತವಾಗಿ ಕೊವಿಡ್ನಿಂದ ಮೃತಪಟ್ಟ ಎಲ್ಲಾ ಶಿಕ್ಷಕರಿಗೂ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಕೊವಿಡ್ ಕರ್ತವ್ಯಕ್ಕೆ ನಿಯೋಜಿಸುವಾಗ 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ, ಗಂಭೀರ ಖಾಯಿಲೆ ಉಳ್ಳ, ಗರ್ಭಿಣಿ/ ಚಿಕ್ಕ ಮಕ್ಕಳುಳ್ಳ ಶಿಕ್ಷಕಿಯರನ್ನು ಹೊರತುಪಡಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡಬೇಕು. ಕೊವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಲ್ಪಟ್ಟ ಶಿಕ್ಷಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಒದಗಿಸಬೇಕು. ಮತ್ತು ವಾಸವಿರುವ ಸ್ಥಳದಲ್ಲಿಯೇ ನಿಯೋಜಿಸಬೇಕು ಎಂದು ಈ ಮೊದಲು ಆಗ್ರಹ ಕೇಳಿಬಂದಿತ್ತು.
ಕೊವಿಡ್ ಆರ್ಥಿಕ ಸಂಕಷ್ಟ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ಕೊವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಹೀಗಾಗಿ ಖಾಸಗಿ ಶಾಲೆಯ ಶಿಕ್ಷಕರಿಗೆ ಒಂದು ದಿನದ ವೇತನವನ್ನು ಸರ್ಕಾರಿ ಶಾಲಾ ಶಿಕ್ಷಕರು ನೀಡುವಂತೆ ಈ ಮುನ್ನ ಕೇಳಲಾಗಿತ್ತು. ಆದರೆ ಖಾಸಗಿ ಶಾಲೆಗಳ ಒಕ್ಕೂಟ ಇಂದು ಆನ್ಲೈನ್ ಸಭೆ ಮಾಡಿ ಈ ಮನವಿಗೆ ವಿರೋಧ ಹೊರಹಾಕಿತ್ತು. ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮತ್ತು ರಾಜ್ಯದ ಎಲ್ಲಾ ಪದಾಧಿಕಾರಿಗಳು ಸರ್ಕಾರದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Viral Video: ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸಲು ಐಟಿಬಿಪಿ ಕಾನ್ಸ್ಟೇಬಲ್ ಭಾವ ಪೂರ್ಣರಾಗ
(Govt Announces RDPR Rural Development Panchayat Raj workers as Corona Warriors)
Published On - 8:23 pm, Mon, 2 August 21