Property Tax: ಆಸ್ತಿ ತೆರಿಗೆ ರಿಯಾಯಿತಿ ಮತ್ತು ವಿಳಂಬದ ದಂಡದ ಕಾಲಾವಧಿ ಸೆಪ್ಟೆಂಬರ್​ವರೆಗೆ ವಿಸ್ತರಣೆ

Property Tax: ಆಸ್ತಿ ತೆರಿಗೆ ರಿಯಾಯಿತಿ ಮತ್ತು ವಿಳಂಬದ ದಂಡದ ಕಾಲಾವಧಿ ಸೆಪ್ಟೆಂಬರ್​ವರೆಗೆ ವಿಸ್ತರಣೆ
ಪ್ರಾತಿನಿಧಿಕ ಚಿತ್ರ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾವತಿಸಲಾಗುವ ಆಸ್ತಿ ತೆರಿಗೆ ಮೇಲಿನ ಶೇಕಡಾ 5ರಷ್ಟು ರಿಯಾಯಿತಿ ಹಾಗೂ ವಿಳಂಬದ ಅವಧಿಗೆ ವಿಧಿಸುವ ದಂಡದ ಕಾಲಾವಧಿಯನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ.

TV9kannada Web Team

| Edited By: guruganesh bhat

Aug 02, 2021 | 7:56 PM

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾವತಿಸಲಾಗುವ ಆಸ್ತಿ ತೆರಿಗೆ ಮೇಲಿನ ಶೇಕಡಾ 5ರಷ್ಟು ರಿಯಾಯತಿ ಹಾಗೂ ವಿಳಂಬದ ಅವಧಿಗೆ ವಿಧಿಸುವ ದಂಡದ ಕಾಲಾವಧಿಯನ್ನು ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸಲಾಗಿದೆ. ಈಕುರಿತು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಪ್ರಕಟಿಸಿದೆ.

ಈಮುನ್ನ ಕೊವಿಡ್ 2ಅಲೆ ಹಿನ್ನೆಲೆಯಲ್ಲಿ 2021-22ನೇ ಆರ್ಥಿಕ ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್​ಗಳಿಗೆ ಶೇ. 50 ರಷ್ಟು ಆಸ್ತಿ ತೆರಿಗೆ ವಿನಾಯಿತಿ ನೀಡಲಾಗಿದೆ. ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ವಿದ್ಯುಚ್ಛಕ್ತಿ ಬೇಡಿಕೆ ಶುಲ್ಕ ಪಾವತಿಗೂ ವಿನಾಯಿತಿಯನ್ನು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಘೋಷಿಸಿದ್ದರು.

ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ 5000 ರೂ. ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾಯಿಸಲಾಗುವುದು. ಅಬಕಾರಿ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕದ ಶೇ. 50ರಷ್ಟು ಮೊತ್ತ ಪಾವತಿಸಬೇಕು, ಉಳಿದ ಶೇ. 50 ರಷ್ಟು ಶುಲ್ಕ ಮೊತ್ತ ಡಿಸೆಂಬರ್ 31 ರೊಳಗೆ ಪಾವತಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಮಾಧ್ಯಮ ಪ್ರಕಟಣೆಯಲ್ಲಿತಿಳಿಸಿದ್ದರು.

ಇದನ್ನೂ ಓದಿ: 

ತೆರಿಗೆ ಪಾವತಿಸದ 6 ಐಷಾರಾಮಿ ಬಸ್‌ಗಳು ಜಪ್ತಿ, ನಂಜನಗೂಡು RTO ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ

ಆಫ್ರಿಕನ್ ಪ್ರಜೆ ಸಾವು, ಪ್ರತಿಭಟನೆ ಮಾಡುತ್ತಿದ್ದ ಆಫ್ರಿಕನ್ ಪ್ರಜೆಗಳಿಂದ ಬೆಂಗಳೂರು ಪೊಲೀಸರ ಮೇಲೆ ಹಲ್ಲೆ

(Expansion of property tax deduction and delayed penalty period till September)

Follow us on

Related Stories

Most Read Stories

Click on your DTH Provider to Add TV9 Kannada