AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಪಾಂತರಿ ವೈರಸ್ ವಿರುದ್ಧ ಹೋರಾಟಕ್ಕೆ ಸರ್ಕಾರದಿಂದ ಕಮಿಟಿ ರೆಡಿ! ಬೆಂಗಳೂರಿನಲ್ಲಿ ತಲೆ ಎತ್ತಲಿವೆ 10 ಲ್ಯಾಬ್​ಗಳು

ಕೊರೊನಾ ತೋರಿಸಿದ ಒಂದು ಮುಖಕ್ಕೆ ಇಡೀ ಜಗತ್ತು ತಲ್ಲಣಿಸಿ ಹೋಗಿತ್ತು. ಈ ಮಧ್ಯೆ ಮತ್ತೊಂದು ಅವತಾರವನ್ನ ಎತ್ತಿರುವ ಡೆಡ್ಲಿ ಕೊರೊನಾ ಮನುಕುಲವನ್ನ ಕಾಡಲು ಶುರುಮಾಡಿದೆ. ಇಂತಹ ಹೊತ್ತಲ್ಲೇ ರೂಪಾಂತರಿ ಕೊರೊನಾಗೆ ಆರಂಭದಲ್ಲೇ ಒಂದು ಗತಿ ಕಾಣಿಸಲು ಕೇಂದ್ರ ಸರ್ಕಾರ ಬಿಗ್ ಪ್ಲ್ಯಾನ್ ಮಾಡಿದೆ.

ರೂಪಾಂತರಿ ವೈರಸ್ ವಿರುದ್ಧ ಹೋರಾಟಕ್ಕೆ ಸರ್ಕಾರದಿಂದ ಕಮಿಟಿ ರೆಡಿ! ಬೆಂಗಳೂರಿನಲ್ಲಿ ತಲೆ ಎತ್ತಲಿವೆ 10 ಲ್ಯಾಬ್​ಗಳು
ಆಯೇಷಾ ಬಾನು
|

Updated on: Dec 31, 2020 | 6:30 AM

Share

ಬೆಂಗಳೂರು: ಕಳೆದ ವರ್ಷ ಚೀನಾದ ವುಹಾನ್​ನಲ್ಲಿ ಪತ್ತೆಯಾದ ಡೆಡ್ಲಿ ಕೊರೊನಾ ವೈರಸ್, ಇಡೀ ಜಗತ್ತನ್ನು ಕಾಡ್ತಿದೆ. ಆದ್ರೆ ಈ ಹೊತ್ತಲ್ಲೇ ಕೊರೊನಾ ರೂಪಾಂತರ ಹೊಂದಿದೆ. ಅಂದರೆ ಕೊರೊನಾ ವೈರಸ್​ನ ಹೊಸ ತಳಿ ಭಾರತವನ್ನು ಬೆಚ್ಚಿ ಬೀಳಿಸಿದೆ.

ಕೆಲವು ದಿನಗಳಿಂದ ಭಾರತದಲ್ಲಿ ಕೊರೊನಾ ಕಂಟ್ರೋಲ್​ಗೆ ಬರ್ತಿದೆ ಬಿಡು ಅಂತಾ ಹ್ಯಾಪಿಯಾಗಿ ಇದ್ದ ಭಾರತೀಯರಿಗೆ ಇದು ಶಾಕ್ ನೀಡಿದೆ. ಕೊರೊನಾ ಇತರ ತಳಿಗಳಿಗಿಂತ ವೇಗವಾಗಿ ಹರಡುವ ಸಾಮರ್ಥ್ಯ ಬ್ರಿಟನ್ ಮೂಲದ ಕೊರೊನಾ ವೈರಸ್ ತಳಿಗೆ ಇದೆ. ಹೀಗಾಗಿಯೇ ಕೇಂದ್ರ ಸರ್ಕಾರ ಫುಲ್ ಅಲರ್ಟ್ ಆಗಿದೆ.

ಊಸರವಳ್ಳಿಯ ಬಣ್ಣ ಪತ್ತೆಹಚ್ಚಲು ಮಾಸ್ಟರ್ ಪ್ಲ್ಯಾನ್! ಹೌದು ಊಸರವಳ್ಳಿಯಂತೆ ಬಣ್ಣ ಬದಲಾಯಿಸಿ ಬಂದಿರುವ ಕೊರೊನಾ ವಿರುದ್ಧ ಕೇಂದ್ರ ಸರ್ಕಾರದ ಇದೀಗ ಯುದ್ಧವನ್ನೇ ಸಾರಿದೆ. ರೂಪಾಂತರಿ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೇಂದ್ರ ಸರ್ಕಾರ ಕಮಿಟಿ ರಚಿಸಿದ್ದು, ಕಮಿಟಿ ರೂಪಾಂತರಿ ವಿರುದ್ಧ ರಣವ್ಯೂಹ ರೂಪಿಸಲಿದೆ.

ಇನ್ಮುಂದೆ ಕೊರೊನಾ ಅದೆಷ್ಟೇ ಬಾರಿ ಬಣ್ಣ ಬದಲಿಸಿ, ರೂಪ ಬದಲಿ ಬಂದರೂ ಚಿಗುರಿನಲ್ಲೇ ರೂಪಾಂತರಿ ಕೊರೊನಾ ವೈರಸ್ ಚಿವುಟಲು ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದೆ. ಕೇಂದ್ರ ಸರ್ಕಾರದ ಈ ಮಹತ್ವಕಾಂಕ್ಷೆ ನಿರ್ಧಾರ ಸಕಾರಗೊಳಿಸಲು ಸುಸ್ಸಜ್ಜಿತ ಲ್ಯಾಬ್​ಗಳನ್ನ ಗುರುತಿಸಲಾಗಿದೆ. ಕೇಂದ್ರ ಈಗ ಮಾಡಿರುವ ಪ್ಲ್ಯಾನ್​ನ ಕಂಪ್ಲೀಟ್ ಡೀಟೇಲ್ಸ್ ನೋಡೋದಾದ್ರೆ.

ರೂಪಾಂತರಿ ‘ಕೊರೊನಾ’ ಲಾಕ್! ರೂಪಾಂತರಿ ಕೊರೊನಾ ವೈರಸ್ ಪತ್ತೆಗೆ ದೇಶಾದ್ಯಂತ 10 ಲ್ಯಾಬ್​ಗಳನ್ನ ಆಯ್ಕೆ ಮಾಡಲಾಗಿದೆ. 10 ಲ್ಯಾಬ್​ಗಳ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ 2 ಲ್ಯಾಬ್ ಸೆಲೆಕ್ಟ್ ಆಗಿವೆ. ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಜಿಕೆವಿಕೆ ಲ್ಯಾಬ್​ಗಳಿಂದಲೂ ಸಾಥ್ ಸಿಗಲಿದೆ.

ದೇಶದ ಮೂಲೆ ಮೂಲೆಯಿಂದಲೂ ಸ್ಯಾಂಪಲ್ಸ್ ಸಂಗ್ರಹ ಮಾಡಲಾಗುವುದು. ರೂಪಾಂತರಿ ಕೊರೊನಾ ವೈರಸ್ ಪತ್ತೆಯಾದರೆ ಸೂಕ್ತ ಮುಂಜಾಗ್ರತ ಕ್ರಮ. ರೂಪಾಂತರಿ ವೈರಸ್ ಪೈಕಿ ಯಾವುದು ಪ್ರಬಲ ಎಂಬುದರ ಬಗ್ಗೆ ಮಾಹಿತಿ ನೀಡುವುದು. ರೂಪಾಂತರಿ ವೈರಸ್ ಪತ್ತೆಯಾಗುವ ರಾಜ್ಯಗಳಿಗೆ ಕಮಿಟಿಯಿಂದ ಸೂಕ್ತ ಸಲಹೆಗಳನ್ನ ನೀಡುವುದು. ಐಸಿಎಂಆರ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯಾಚರಣೆಗೆ ಇನ್ನೂ ಹಲವು ಇಲಾಖೆಗಳು ಸಾಥ್ ನೀಡಲಿವೆ.

ಒಟ್ಟಾರೆ ಕೊರೊನಾ ರೂಪಾಂತರಿಯಿಂದ ಮುಂದೆ ಸೃಷ್ಟಿಸಬಹುದಾದ ಸಂಕಷ್ಟವನ್ನ ತಕ್ಷಣ ಅರಿತಿರುವ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಮೊಳಕೆಯಲ್ಲೇ ಕೊರೊನಾ ರೂಪಾಂತರಿ ವೈರಸ್ ಚಿವುಟಿ ಹಾಕಲು ಕಮಿಟಿಯ ರಚನೆಯಾಗಿದೆ. ಆದರೆ ಇದು ಎಷ್ಟರವಮಟ್ಟಿಗೆ ಎಫೆಕ್ಟಿವ್ ಆಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

ಕೊವಿಡ್​ ಇದ್ದರೂ ಭಾರತದಲ್ಲಿ ಅತ್ಯಧಿಕ ಬುಕ್ಕಿಂಗ್​ ಕಂಡ ಒಯೋ; ಹೊಸದಾಗಿ 85 ಲಕ್ಷ ಗ್ರಾಹಕರು ಸೇರ್ಪಡೆ