ಗ್ರಾ.ಪಂ. ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರ ಪರದಾಟ!

| Updated By: ರಾಜೇಶ್ ದುಗ್ಗುಮನೆ

Updated on: Dec 30, 2020 | 9:41 PM

ಮಹಾರಾಣಿ ಕಾಲೇಜಿನ ಮತ ಎಣಿಕೆಯಲ್ಲಿ ಭದ್ರತೆಗೆಂದು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಅವರಿಗೆ, ಬಾತು, ಮೊಸರನ್ನವನ್ನು ಪೊಟ್ಟಣದಲ್ಲಿ ನೀಡಲಾಗಿದೆ. ಆದರೆ, ಊಟ ಮಾಡಲು ತಟ್ಟೆಯನ್ನೂ ಸಹ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.

ಗ್ರಾ.ಪಂ. ಚುನಾವಣೆ ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರ ಪರದಾಟ!
Follow us on

ಮೈಸೂರು: ಮಹಾರಾಣಿ ಕಾಲೇಜಿನಲ್ಲಿ ನಡೆಯುತ್ತಿದ್ದ ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆಗೆ  ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಅವರಿಗೆ ಅಲ್ಲೇ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಕಳಪೆ ಗುಣ ಮಟ್ಟದ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ಆಹಾರ ಸರಬರಾಜು ಗುತ್ತಿಗೆ ಪಡೆದವರ ಮೇಲೆ ಆರೋಪ ಮಾಡಿದ್ದಾರೆ.

ಮಹಾರಾಣಿ ಕಾಲೇಜಿನ ಮತ ಎಣಿಕೆಯಲ್ಲಿ ಭದ್ರತೆಗೆಂದು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಅವರಿಗೆ, ರೈಸ್ ಬಾತ್​, ಮೊಸರನ್ನವನ್ನು ಪೊಟ್ಟಣದಲ್ಲಿ ನೀಡಲಾಗಿದೆ. ಆದರೆ, ಊಟ ಮಾಡಲು ತಟ್ಟೆಯನ್ನೂ ಸಹ ನೀಡಿಲ್ಲ ಎಂದು ಆರೋಪ ಮಾಡಿದ್ದಾರೆ.

ಚುನಾವಣಾ ಅಧಿಕಾರಿಗಳಿಗೆ ಅನ್ನ, ಸಾಂಬಾರ್, ಸೇರಿದಂತೆ ಸ್ವೀಟ್​ಗಳನ್ನು ಸ್ಥಳದಲ್ಲೇ ಬಡಿಸುವ ಊಟದ ವ್ಯವಸ್ಥೆ ಮಾಡಲಾಗಿದೆ. ಆಹಾರ ಸರಬರಾಜು ಗುತ್ತಿಗೆದಾರರು ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ