AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gruha Jyothi Scheme: ಗೃಹಜ್ಯೋತಿ ಯೋಜನೆಯ ಲಾಭ ಪಡೆದವರೆಷ್ಟು, ವಂಚಿತರಾದವರೆಷ್ಟು? ಇಲ್ಲಿದೆ ಮಾಹಿತಿ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ ಜಾರಿಯಾಗಿ ಒಂದು ತಿಂಗಳಾಗಿದೆ. ಹೆಚ್ಚಿನ ಜನರು ಇದರ ಲಾಭ ಪಡೆಯುತ್ತಿದ್ದಾರೆ. ಅದಾಗ್ಯೂ, ಕೆಲವರು ಉಚಿತ ಎಂದು ಬೇಕಾಬಿಟ್ಟಿಯಾಗಿ ವಿದ್ಯುತ್ ಬಳಕೆ ಮಾಡಿ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಹಾಗಾದರೆ, ಈ ಯೋಜನೆಯ ಲಾಭ ಪಡೆದವರೆಷ್ಟು? ಉಚಿತ ಬಿಲ್​ನಿಂದ ವಂಚಿತರಾದ ನೋಂದಾಯಿತ ಜನರೆಷ್ಟು ಎಂಬುದು ಇಲ್ಲಿದೆ.

Gruha Jyothi Scheme: ಗೃಹಜ್ಯೋತಿ ಯೋಜನೆಯ ಲಾಭ ಪಡೆದವರೆಷ್ಟು, ವಂಚಿತರಾದವರೆಷ್ಟು? ಇಲ್ಲಿದೆ ಮಾಹಿತಿ
ಗೃಹಜ್ಯೋತಿ ಯೋಜನೆ
Poornima Agali Nagaraj
| Edited By: |

Updated on: Aug 18, 2023 | 7:07 PM

Share

ಬೆಂಗಳೂರು, ಆಗಸ್ಟ್ 18: ಕರ್ನಾಟಕ ಕಾಂಗ್ರೆಸ್ ಸರ್ಕಾರವು ತನ್ನ ಮಹತ್ವದ ಗೃಹಜ್ಯೋತಿ ಯೋಜನೆ (Gruha Jyothi Scheme) ಜಾರಿ ಮಾಡಿ ಒಂದು ತಿಂಗಳಾಗಿದೆ. ಲಕ್ಷಾಂತರ ಗ್ರಾಹಕರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಒಂದಷ್ಟು ನೋಂದಾಯಿತ ಗ್ರಾಹಕರು ನಿಗದಿತ ಮಿತಿಗಿಂದ ಹೆಚ್ಚುವರಿ ಯುನಿಟ್ ವಿದ್ಯುತ್ ಬಳಕೆ ಮಾಡಿ ಉಚಿತ ವಿದ್ಯುತ್​ ಲಾಭ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹಾಗಿದ್ದರೆ, ಈ ಯೋಜನೆಯ ಲಾಭ ಪಡೆದವರೆಷ್ಟು? ವಂಚಿತರಾದ ನೋಂದಾಯಿತ ಜನರೆಷ್ಟು? ಇಲ್ಲಿದೆ ಮಾಹಿತಿ.

ಗೃಹಜ್ಯೋತಿ ಯೋಜನೆಗೆ 1,40,31,320 ಗ್ರಾಹಕರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 74,08,769 ಮಂದಿಗೆ ಶೂನ್ಯ ಬಿಲ್ ನೀಡಲಾಗಿದೆ. ಆದರೆ, 45,29,633 ಜನರು ಸರಾಸರಿಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡಿದ್ದಾರೆ. ಸುಮಾರು 21 ಲಕ್ಷ ಜನರು 200 ಯೂನಿಟ್​ಗಿಂತ ಹೆಚ್ಚು ಬಳಕೆ ಮಾಡಿ ಗೃಹ ಜ್ಯೋತಿ ಯೋಜನೆಯಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಉಚಿತ ವಿದ್ಯುತ್ ಬೇಡ, ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿ: ರಾಜ್ಯ ಸರ್ಕಾರಕ್ಕೆ ಪ್ರಜ್ವಲ್‌ ರೇವಣ್ಣ ಮನವಿ

ರಾಜ್ಯ ಸರ್ಕಾರವು 1 ಕೋಟಿ 19 ಲಕ್ಷ ಜನರಿಗೆ ಗೃಹಜ್ಯೋತಿ ಬಿಲ್ ನೀಡಿದ್ದು, ಇದರಲ್ಲಿ ಶೇ.62.06 ರಷ್ಟು ಅಂದರೆ, 74 ಲಕ್ಷದ 8 ಸಾವಿರ ಜನರು ಸರ್ಕಾರ ನೀಡಿರುವ ಸರಾಸರಿ ಹಾಗೂ ಅದಕ್ಕಿಂತ ಕಡಿಮೆ ಯೂನಿಟ್ ಬಳಸಿದ್ದಾರೆ.

ಇನ್ನು, ಈಗಾಗಲೇ ಜುಲೈ ತಿಂಗಳ‌ ಶೂನ್ಯ ಬಿಲ್​​ಗಾಗಿ ಸರ್ಕಾರದಿಂದ ಎಲ್ಲಾ ಎಸ್ಕಾಂಗಳಿಗಾಗಿ ಒಟ್ಟು 650 ಕೋಟಿ ರೂ. ಹಣ ಬಿಡುಗಡೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ