ಬೆಂಗಳೂರು, ಜುಲೈ 29: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವದ ಗೃಹಜ್ಯೋತಿ ಯೋಜನೆ(Gruha Jyothi Scheme) ಜುಲೈ ತಿಂಗಳಿನಿಂದ ಆರಂಭವಾಗಲಿದ್ದು, ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಲು ಗ್ರಾಹಕರು ಕಾತರರಾಗಿದ್ದಾರೆ. ಜೂನ್ 25 ರ ಒಳಗಾಗಿ ಅರ್ಜಿ ಸಲ್ಲಿಕೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಉಚಿತ ವಿದ್ಯುತ್ನ ಲಾಭ ದೊರೆಯಲಿದೆ.
ಗೃಹಜ್ಯೋತಿ ಯೋಜನೆಗೆ 1,18,50, 474 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಎರಡೂವರೆ ಕೋಟಿ ಫಲಾನಿಭವಿಗಳ ಪೈಕಿ ಶೇ.60 ರಷ್ಟು ಮಾತ್ರ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಶೇ.40 ರಷ್ಟು ಗ್ರಾಹಕರು ಅರ್ಜಿ ಸಲ್ಲಿಸಲು ಬಾಕಿ ಉಳಿದಿದ್ದರು. ಜುಲೈ 25 ರ ನಂತರ ಅರ್ಜಿ ಸಲ್ಲಿದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ಸೆಪ್ಟೆಂಬರ್ ತಿಂಗಳಲ್ಲಿ ಸಿಗಲಿದೆ.
ಗೃಹಜ್ಯೋತಿ ಅರ್ಜಿ ಸಲ್ಲಿಸಲು ಆಗುತ್ತಿರುವ ಸಮಸ್ಯೆಗಳು
ಆರ್.ಆರ್ ನಂಬರನಲ್ಲಿರುವ ಹೆಸರು, ಆಧಾರ್ ಹೆಸರು ಹೊಂದಾಣಿಕೆ ಆಗದೇ ಇರುವುದು
ಶೇಕಡಾ 25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಲ್ಲಿರಲಿದ್ದು, ಈ ಪೈಕಿ ಸಾವನ್ನಪ್ಪಿದವರ ಹೆಸರಿನ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಮೀಟರ್ ಹೆಸರು ಬದಲಾಯಿಸಲು ಅರ್ಜಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ
ಆಧಾರ್ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯವಾಗಿರುವುದು
ಬಹುತೇಕ ಜನರು ಮಾಲೀಕರು ಅಂತನೇ ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದಾರೆ
ಎಸ್ಕಾಂಗಳಿಗೆ ಕೊಡಲೇ ಗ್ರಾಹಕರ ಹೆಸರು ಬದಲಾವಣೆಗೆ ಅಸಾಧ್ಯ
ಉಚಿತ ವಿದ್ಯುತ್ ಪಡೆಯಲು ಹೋಗಿ ಮನೆ ಮಾಲೀಕರಿಗೆ ಅನುಮಾನ ಬಂದರೇ ಎಂಬ ಆತಂಕ
ಕೆಲವು ಗ್ರಾಹಕರು 200 ಯೂನಿಟ್ಗಿಂತ ಹೆಚ್ಚು ಬಳಕೆ ಮಾಡುತ್ತಿದ್ದಾರೆ
ಸರ್ಕಾರಿ ಅಧಿಕಾರಿಗಳು ಹಾಗೂ ಶ್ರೀಮಂತರು ಅರ್ಜಿ ಸಲ್ಲಿಸಲ್ಲ
40 ಯೂನಿಟ್ ಒಳಗೆ ಬಳಸುವ ಅತಿ ಕಡು ಬಡವರಿಗೆ ಈಗಾಗಲೇ ಸರ್ಕಾರದ ಉಚಿತ ಕರೆಂಟ್ ನೀಡಲಾಗಿದೆ