ಮೆಕ್ಕಾ ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಸಾವು: ಸಚಿವ ರಹಿಂಖಾನ್ ಹೇಳಿದ್ದಿಷ್ಟು
ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಹಜ್ ಖಾತೆ ಸಚಿವ ರಹಿಂಖಾನ್, ಘಟನೆ ಬಗ್ಗೆ ಮಾಹಿತಿ ಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸುತ್ತೇನೆ. ಮೃತದೇಹ ತರಲು ಎಲ್ಲಾ ಪ್ರಯತ್ನ ಶೀಘ್ರದಲ್ಲೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರು, ಜೂನ್ 20: ಮುಸ್ಲಿಂರ ಪವಿತ್ರ ಹಜ್ ಯಾತ್ರೆ (Hajj Pilgrimage) ವೇಳೆ ಮೆಕ್ಕಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿಗೆ ದಾಖಲಾದ ಪರಿಣಾಮ ಸುಮಾರು 600ಕ್ಕೂ ಯಾತ್ರಿಗಳ ಪೈಕಿ 68 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ (death). ಆ ಪೈಕಿ ಬೆಂಗಳೂರು ಮೂಲದ ಇಬ್ಬರು ಯಾತ್ರಿಕರೂ ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಬಕ್ರೀದ್ ಹಬ್ಬ ಪ್ರಯುಕ್ತ ಹಜ್ ಯಾತ್ರೆಗೆ ಹೋಗಿದ್ದರು ಎನ್ನಲಾಗಿದೆ.
ಬೆಂಗಳೂರು ಮೂಲದ ಇಬ್ಬರು ಯಾತ್ರಿಕರೂ ಮೆಕ್ಕಾದಿಂದ 8 ಕಿ.ಮೀ ದೂರವಿರುವಾಗಲೇ ಸಾನ್ನಪ್ಪಿದ್ದಾರೆ. ಮೃತರನ್ನು ಕೌಸರ್ ರುಕ್ಸಾನ್ (69) ಮತ್ತು ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ.
ಹಜ್ ಖಾತೆ ಸಚಿವ ರಹಿಂಖಾನ್ ಹೇಳಿದ್ದಿಷ್ಟು
ದುರಂತದ ಬಗ್ಗೆ ಬೆಂಗಳೂರಿನಲ್ಲಿ ಹಜ್ ಖಾತೆ ಸಚಿವ ರಹಿಂಖಾನ್ ಪ್ರತಿಕ್ರಿಯಿಸಿದ್ದು, ಹಜ್ ಯಾತ್ರೆಗೆ ತೆರಳಿದ್ದ ಬೆಂಗಳೂರು ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ. ದುರಂತದ ಬಗ್ಗೆ ಮಾಹಿತಿ ಬಂದಿದೆ. ಸಚಿವ ಸಂಪುಟ ಸಭೆಯ ಬಳಿಕ ಅಧಿಕಾರಿಗಳ ಸಭೆ ನಡೆಸುತ್ತೇನೆ. ಮೃತದೇಹ ತರಲು ಎಲ್ಲಾ ಪ್ರಯತ್ನ ಶೀಘ್ರದಲ್ಲೇ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: Hajj Pilgrimage: ಹಜ್ ಯಾತ್ರೆಗೆ ತೆರಳಿದ್ದ 68 ಮಂದಿ ಭಾರತೀಯರು ಸಾವು
ಈ ಭಾರಿ ಹಜ್ ಯಾತ್ರೆಗೆ ಕರ್ನಾಟಕದಿಂದ 10,300 ಮಂದಿ ತೆರಳಿದ್ದಾರೆ. ಮಹಾರಾಷ್ಟ್ರ ಹಜ್ ಕಮಿಟಿಯಿಂದ ಇನ್ನೂ ಮಾಹಿತಿ ಬರಬೇಕಿದೆ. ಕೇಂದ್ರ ಸರ್ಕಾರ, ಸ್ಥಳೀಯ ಸರ್ಕಾರದಿಂದಲೂ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಇಂತಹ ದುರಂತ ಇದೇ ಮೊದಲ ಬಾರಿಗೆ ಆಗಿರೋದು. ಸಮರೋಪಾದಿಯಲ್ಲಿ ನಾವು ಪರಿಹಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Hajj Yatra: ಮೆಕ್ಕಾದಲ್ಲಿ 50 ಡಿಗ್ರಿ ಸೆಲ್ಸಿಯಸ್ ದಾಟಿದ ತಾಪಮಾನ, ಹಜ್ ಯಾತ್ರೆಗೆ ತೆರಳಿದ್ದ 550 ಮಂದಿ ಯಾತ್ರಿಕರು ಸಾವು
ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾ ಮತ್ತು ಇರಾಕ್ ದೇಶಗಳು ಕೂಡ ಸಾವುನೋವುಗಳನ್ನು ದೃಢಪಡಿಸಿವೆ. ಆದರೂ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳು ದುರಂತಕ್ಕೆ ಸ್ಪಷ್ಟ ಕಾರಣವನ್ನು ನೀಡಿಲ್ಲ. ಎಎಫ್‌ಪಿ ಲೆಕ್ಕಾಚಾರದ ಪ್ರಕಾರ ಇದುವರೆಗೆ ಒಟ್ಟು 645 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.