ದಾವಣಗೆರೆ, ಡಿಸೆಂಬರ್ 06: ಅಪ್ರಾಪ್ತ ಬಾಲಕಿ ಅಪರಹಣ ಹಾಗೂ ಅತ್ಯಾಚಾರಕ್ಕೆ ಸಹಕರಿಸಿದ ಪ್ರಮುಖ ಆರೋಪಿಯ ಸ್ನೇಹಿತನಿಗೆ (friend) ಮೂರು ವರ್ಷ ಜೈಲು ಶಿಕ್ಷೆ ಹಾಗೂ 60 ಸಾವಿರ ರೂ. ದಂಡವನ್ನು ಕೋರ್ಟ್ ವಿಧಿಸಿದೆ. ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021 ಡಿಸೆಂಬರ್ 4ರಂದು ಘಟನೆ ನಡೆದಿತ್ತು.
ಪ್ರಮುಖ ಆರೋಪಿಯಿಂದ ಬಾಲಕಿಯನ್ನು ಅಪಹರಣ ಮಾಡಲಾಗಿದೆ. ಬಳಿಕ ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಮಾಡಲಾಗಿದೆ. ಈ ಅತ್ಯಾಚಾರ ನಡೆಸಲು ಸ್ನೇಹಿತನಿಗೆ ಸಹಕಾರ ನೀಡಿದ ಆರೋಪಿಗೆ ಇದೀಗ ದಾವಣಗೆರೆ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರು ದಾರುಣ ಸಾವು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಹೊನ್ನಾಳಿ ಇನ್‌ಸ್ಪೆಕ್ಟರ್ ಟಿವಿ ದೇವರಾಜ್ ನ್ಯಾಯಾಲಯಕ್ಕೆ ಆರೋಪನ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮನಾರಾಯಣ ಹೆಗಡೆ, ಸಂತ್ರಸ್ತ ಬಾಲಕಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದೆ. ಬಾಲಕಿ ಪರ ಸರ್ಕಾರಿ ವಕೀಲೆ ಸುನಂದಾ ಮಡಿವಾಳರ ವಾದ ಮಂಡನೆ ಮಾಡಿದ್ದಾರೆ.
ಇನ್ನು ದಾವಣಗೆರೆಯಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸ್, ಐಟಿ, ಸಿಬಿಐ ಹೆಸರು ಹೇಳಿ ವಂಚಕರು ಸುಲಿಗೆ ಮಾಡುತ್ತಿರುವಂತಹ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಓರ್ವ ವ್ಯಕ್ತಿಯಿಂದ 20 ಲಕ್ಷ ರೂ., ಇನ್ನೊಬ್ಬ ಹರಿಹರದ ಇಂಜಿನಿಯರ್ನಿಂದ 3 ಲಕ್ಷ ರೂ. ವಂಚಿಸಲಾಗಿದೆ.
ನಾನು ಆದಾಯ ತೆರಿಗೆ ಕಚೇರಿಯಿಂದ, ಇಡಿ ಕಚೇರಿಯಿಂದ ಎಂದು ಹೇಳಿ ಹಿಂದಿ, ಇಂಗ್ಲಿಷ್ ನಲ್ಲಿ ಮಾತಾಡಿ ಅವರ ಖಾತೆಗೆಗಳಿಗೆ ವಂಚಕರು ಹಣ ಹಾಕಿಸಿಕೊಳ್ಳುತ್ತಿದ್ದಾರೆ. ಪೊಲೀಸ್, ಐಟಿ, ಇಡಿ ಸೇರಿದಂತೆ ಯಾರು ಕೂಡ ಪೋನ್ ಮಾಡಿ ಹಣಕ್ಕೆ ಬೇಡಿಕೆ ಇಡಲ್ಲ. ಅಂತಹ ವ್ಯಕ್ತಿಗಳ ಖಾತೆಗೆ ಹಣ ಹಾಕಬೇಡಿ ಎಂದು ಸಾರ್ವಜನಿಕರಿಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ: ಬರೋಬ್ಬರಿ 1.5 ಮಾಂಸ ಪತ್ತೆ!
ಯಾರೇ ಫೋನ್ ಮೂಲಕ ಹಣ ಕೇಳಿದರೆ ಅದರ ಹಿಂದೆ ವಂಚನೆ ಇರುತ್ತದೆ ಎಂಬುದನ್ನ ಅರಿಯಬೇಕು. ಮೇಲಾಗಿ ಇಂತಹ ವಂಚನೆಗಳಾದರೆ ಭಯಗೊಳ್ಳದೆ ದಾವಣಗೆರೆ ವಿದ್ಯಾನಗರದಲ್ಲಿ ಇರುವ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿ ಎಂದಿದ್ದಾರೆ. ಆದರೆ ವಂಚನೆಗೊಳಗಾದವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಸಾರ್ವಜನಿಕರು ಇಂತಹ ಫೋನ್ ಕರೆಗಳನ್ನ ನಂಬಿ ಹಣ ಹಾಕಬೇಡಿ ಎಂದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.