ಅರಸೀಕೆರೆ ರಾಜಕೀಯ: ನಿಗೂಢ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಮೂವರು ಜೆಡಿಎಸ್ ನಗರಸಭೆ ಸದಸ್ಯರು

ಭ್ರಷ್ಟಾಚಾರದ ಹಣದಲ್ಲಿ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಬಿಜೆಪಿ ಬರುವವರೆಗೂ ಕುದುರೆ ವ್ಯಾಪಾರ ಪದ ಇರಲಿಲ್ಲ. ಹಣ ಕೊಟ್ಟು ಪ್ರಜಾಪ್ರಭುತ್ವ ಖರೀದಿಸಲು ಹೊರಟಿದ್ದಾರೆ. ಇವರಿಗೆ ನೈತಿಕತೆ ಇಲ್ಲ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಸೀಕೆರೆ ರಾಜಕೀಯ: ನಿಗೂಢ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಮೂವರು ಜೆಡಿಎಸ್ ನಗರಸಭೆ ಸದಸ್ಯರು
ವಿಡಿಯೋದ ದೃಶ್ಯ
Follow us
TV9 Web
| Updated By: guruganesh bhat

Updated on:Jun 29, 2021 | 9:03 PM

ಹಾಸನ: ಅರಸೀಕೆರೆ ನಗರಸಭೆಯ 6 ಜೆಡಿಎಸ್ ಸದಸ್ಯರ ಬಂಡಾಯ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ನಿಗೂಢ ಸ್ಥಳದಲ್ಲಿ ಕುರಿತು ವಿಡಿಯೋ ಮಾಡಿ ಬಿಡುಗಡೆ ಮಾಡಿರುವ ಅರಸೀಕೆರೆ ನಗರಸಭೆಯ ಮೂವರು  ಜೆಡಿಎಸ್ ಸದಸ್ಯರು ನಾವು ಯಾವುದೇ ರೀತಿಯ ಹಣದ ಆಮಿಷಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆಮಿಷಕ್ಕೆ ಒಳಗಾಗುವಂತಹ ದುಸ್ಥಿತಿಯೂ ನಮಗೆ ಬಂದಿಲ್ಲ. ನಮ್ಮ ವಿರುದ್ಧ ಇಲ್ಲಸಲ್ಲದ ಆರೋಪ‌ಗಳನ್ನು ಮಾಡುತ್ತಿದ್ದಾರೆ. ನಾವು ಮತದಾರರಿಗೆ ಕೊಟ್ಟ ಭರವಸೆ ಈಡೇರಿಸಲು ಆಗಿಲ್ಲ. ಅರಸೀಕೆರೆ ಶಾಸಕರು ನಮ್ಮ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದರು. ಹೀಗೆ ಆದರೆ ಅಭಿವೃದ್ಧಿ ಆಗುವುದಿಲ್ಲ, ಜನರು ನಮ್ಮನ್ನು ಬೈಯ್ಯುತ್ತಿದ್ದಾರೆ. ಹಾಗಾಗಿ ನಾವು 7 ಸದಸ್ಯರು ಒಟ್ಟಿಗೆ ಕೂತು ಮಾತನಾಡಿದೆವು. ಹಾಗಾಗಿ ಪಕ್ಷದಲ್ಲಿದ್ದೇ ಅಭಿವೃದ್ಧಿ ಪರ ಕೆಲಸಕ್ಕೆ ನಿರ್ಧಾರ ಮಾಡಿದ್ದೇವೆ. ಅದರಂತೆ ಜಿಲ್ಲಾಧಿಕಾರಿಯವರಿಗೆ ಪ್ರತ್ಯೇಕ ಆಸನಕ್ಕೆ ಮನವಿ ಮಾಡಿದೆವು ಎಂದು ವಿಡಿಯೋದಲ್ಲಿ ಮೂವರು ಜೆಡಿಎಸ್ ಸದಸ್ಯರು ಆರೋಪ ಮಾಡಿದ್ದಾರೆ.

ವಾಪಸ್ ಹೋದ‌ಬಳಿಕ ಸದಸ್ಯ ಕಲೈ ಅರಸಿ ಪತಿ ಸುಧಾಕರ್​ರನ್ನು ಶಾಸಕರ ಕಡೆಯವರು ಅಪಹರಣ ಮಾಡಿಅವರಿಗೆ ಬೆದರಿಸಿ ಮತ್ತೆ ರಾಜಿನಾಮೆ‌ ವಾಪಸ್ ಪಡೆಯೋದಾಗಿ‌ ಪತ್ರ ಕೊಡಿಸಿದ್ದಾರೆ. ಈಗಲೂ ಅವರನ್ನ ಮುಕ್ತವಾಗಿ ಬಿಡಲಿ, ಕಲೈ ಅರಸಿ ಪತಿ ಸುಧಾಕರ್ ನಡೆದ ವಿಚಾರವನ್ನು ಹೇಳುತ್ತಾರೆ. ಹೆದರಿಸಿ ಬೆದರಿಸಿ ತಮ್ಮ ಪರವಾಗಿ ಹೇಳಿಕೆ‌ ಕೊಡಿಸಿದ್ದಾರೆ. ನಮ್ಮ ಸಹೋದರಂತೆ ಇರೋ ಇಬ್ಬರ ಮೇಲೆ ಕೇಸ್ ಮಾಡಿಸಿದ್ದಾರೆ. ಹೀಗೆ ಮಾಡುತ್ತಾ ಹೋದರೆ ಜನರು ದಂಗೆ ಏಳುತ್ತಾರೆ. ಶಾಸಕರೇ ದಯವಿಟ್ಟು ಇಂತಹ ಕೆಲಸ ಮಾಡಬೇಡಿ. ಹೀಗೆ ಆದ್ರೆ ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ವಿಡಿಯೋದಲ್ಲಿ ಜೆಡಿಎಸ್ ಸದಸ್ಯರು ಎಂದು ಅರಸೀಕೆರೆ ಕ್ಷೇತ್ರದ ಶಾಸಕ‌ ಶಿವಲಿಂಗೇಗೌಡಗೆ ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ಅರಸೀಕೆರೆ ನಗರಸಭೆಯಲ್ಲಿ ಆಪರೇಷನ್ ಕಮಲಕ್ಕೆ ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ಹಣದಲ್ಲಿ ಸದಸ್ಯರನ್ನು ಖರೀದಿ ಮಾಡಿದ್ದಾರೆ. ಬಿಜೆಪಿ ಬರುವವರೆಗೂ ಕುದುರೆ ವ್ಯಾಪಾರ ಪದ ಇರಲಿಲ್ಲ. ಹಣ ಕೊಟ್ಟು ಪ್ರಜಾಪ್ರಭುತ್ವ ಖರೀದಿಸಲು ಹೊರಟಿದ್ದಾರೆ. ಇವರಿಗೆ ನೈತಿಕತೆ ಇಲ್ಲ, ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹಾಸನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಅರಸೀಕೆರೆ ನಗರಸಭೆಯಲ್ಲಿ ಆಪರೇಶನ್ ಕಮಲ? ಜೆಡಿಎಸ್​ ಸದಸ್ಯರಿಂದ ಬಿಜೆಪಿಗೆ ಒಕ್ಕೊರಲ ಬೆಂಬಲ

MRPL: ಎಂಆರ್​ಪಿಎಲ್​ನಲ್ಲಿ ಕನ್ನಡಿಗರಿಗಿಲ್ಲ ಕೆಲಸ: ಮಂಗಳೂರಿನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಭಟಿಸಿ ಎಚ್ಚರಿಕೆ

(Hassan Arsikere Municipality Operation Kamala issue Video released by 3 JDS members of Arasikere Municipality sitting in mysterious location)

Published On - 8:28 pm, Tue, 29 June 21

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್