ಯಾವುದೇ ಕಾರಣಕ್ಕೂ ಹಾಸನದಲ್ಲಿ ವೈದ್ಯಕೀಯ ಆಕ್ಸಿಜನ್​ ಕೊರತೆ ಆಗಲು ಬಿಡುವುದಿಲ್ಲ: ಪ್ರೀತಂ ಗೌಡ

|

Updated on: May 04, 2021 | 11:19 PM

ನಾಳೆಯೇ ಹಿಮ್ಸ್ ಆಸ್ಪತ್ರೆಯನ್ನು 600 ಬೆಡ್​​ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಅದಕ್ಕಾಗಿ ಹಳೇ ಕೋರ್ಟ್ ಕಟ್ಟಡದಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಹಾಸನದಲ್ಲಿ ವೈದ್ಯಕೀಯ ಆಕ್ಸಿಜನ್​ ಕೊರತೆ ಆಗಲು ಬಿಡುವುದಿಲ್ಲ: ಪ್ರೀತಂ ಗೌಡ
ಪ್ರೀತಂ ಗೌಡ
Follow us on

ಹಾಸನ: ರೆಮ್​ಡಿಸಿವರ್​ ಇಂಜೆಕ್ಷನ್​ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರನ್ನು ರಸ್ತೆಯಲ್ಲಿ ನಿಲ್ಲಿಸಿ ಶೂಟ್ ಮಾಡಬೇಕು ಎಂದು ಶಾಸಕ ಪ್ರೀತಂ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನ ಕಷ್ಟಪಡುತ್ತಿದ್ದಾರೆ. ಕೊರೊನಾ ಸೋಂಕಿತರು ಔಷಧ ಸಿಗದೆ ಪರದಾಡುತ್ತಿರುವಾಗ ಹೀಗೆ ಕಾಳಸಂತೆಯಲ್ಲಿ ಆಕ್ಸಿಜನ್ ಮಾರಿ, ಹಣ ಮಾಡುವವರು ಮನುಷ್ಯರೇ ಅಲ್ಲ ಎಂದು ಅವರು ಹೇಳಿದರು.

ಇಂಜೆಕ್ಷನ್​ನ್ನು ಬ್ಲಾಕ್ ಮಾರ್ಕೆಟ್​​ನಲ್ಲಿ ಮಾರಾಟ ಮಾಡಲು ಯಾವ ಕಾರಣಕ್ಕೂ ಅವಕಾಶ ಕೊಡೋದಿಲ್ಲ. ನಾಳೆಯೇ ಹಿಮ್ಸ್ ಆಸ್ಪತ್ರೆಯನ್ನು 600 ಬೆಡ್​​ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಅದಕ್ಕಾಗಿ ಹಳೇ ಕೋರ್ಟ್ ಕಟ್ಟಡದಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಈಗಿರುವ ಆಸ್ಪತ್ರೆಯಲ್ಲಿ 400 ಬೆಡ್​ಗಳಿಗೆ ಆಕ್ಸಿಜನ್ ಇದೆ. ಆಕ್ಸಿಜನ್ ಅಗತ್ಯ ಇಲ್ಲದವರನ್ನು ಹಳೇ ಕೋರ್ಟ್ ಕಟ್ಟಡಕ್ಕೆ ಸ್ಥಳಾಂತರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಹಾಗೇ, ನಾಳೆಯಿಂದಲೇ ಹಳ್ಳಿಹಳ್ಳಿಗಳಲ್ಲಿ ತಪಾಸಣೆ ಆಗಲಿದೆ. ಯಾರಲ್ಲಾದರೂ ಜ್ವರ ಕಂಡುಬಂದರೆ ಅವರನ್ನು ಕೊವಿಡ್​ ಕೇಂದ್ರಕ್ಕೆ ಕರೆದುಕೊಂಡು ಬರಲಾಗುವುದು. ಅದೇನೇ ಆಗಲಿ ಹಾಸನದಲ್ಲಿ ಆಕ್ಸಿಜನ್​ ಕೊರತೆ ಆಗಲು ಬಿಡುವುದಿಲ್ಲ ಎಂದು ಪ್ರೀತಂ ಗೌಡ ತಿಳಿಸಿದರು.

ಇದನ್ನೂ ಓದಿ: ಅಂತಾರಾಜ್ಯ ಪ್ರಯಾಣಕ್ಕೆ ಆರ್​ಟಿ-ಪಿಸಿಆರ್​ ರಿಪೋರ್ಟ್ ಕಡ್ಡಾಯವಲ್ಲ; ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಐಸಿಎಂಆರ್​

Television price hike: 2021ರಲ್ಲಿ ಮತ್ತೆ ಏರಿಕೆ ಆಗಲಿದೆ ಟಿವಿ ಬೆಲೆ; ಏಕೆ ಹೀಗೆ ಅನ್ನೋದನ್ನು ತಿಳಿಯಿರಿ