Television price hike: 2021ರಲ್ಲಿ ಮತ್ತೆ ಏರಿಕೆ ಆಗಲಿದೆ ಟಿವಿ ಬೆಲೆ; ಏಕೆ ಹೀಗೆ ಅನ್ನೋದನ್ನು ತಿಳಿಯಿರಿ

ಓಪನ್ ಸೆಲ್ ಪ್ಯಾನೆಲ್​ಗಳ ಮೇಲೆ ಆಮದು ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿರುವುದರಿಂದ ಟೀವಿಗಳ ಬೆಲೆಯಲ್ಲಿ ಏರಿಕೆ ಆಗಲಿದೆ. ಇದೊಂದು ವೇಳೆ ಆದಲ್ಲಿ ಈ ವರ್ಷ ಮೂರನೇ ಬಾರಿಗೆ ಹೆಚ್ಚಿದಂತಾಗುತ್ತದೆ.

Television price hike: 2021ರಲ್ಲಿ ಮತ್ತೆ ಏರಿಕೆ ಆಗಲಿದೆ ಟಿವಿ ಬೆಲೆ; ಏಕೆ ಹೀಗೆ ಅನ್ನೋದನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 04, 2021 | 10:08 PM

ಈ ವರ್ಷದ ಅಕ್ಟೋಬರ್​ ಹೊತ್ತಿಗೆ ಟೆಲಿವಿಷನ್​ಗಳ (ಟೀವಿ) ಬೆಲೆಯಲ್ಲಿ ಶೇಕಡಾ 3ರಿಂದ 5ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಓಪನ್ ಸೆಲ್​ ಪ್ಯಾನೆಲ್​ಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಅದು 2021ರ ಎರಡನೇ ಭಾಗದ ಶುರುವಿನಲ್ಲಿ ಆಗಬಹುದು. ಓಪನ್ ಸೆಲ್ ಪ್ಯಾನಲ್​ಗಳನ್ನ ಟೀವಿಯ ಸ್ಕ್ರೀನ್ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಮತ್ತು ಅವುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಮುಂದಿನ ಮೂರು ವರ್ಷಗಳಲ್ಲಿ ಆಮದು ಸುಂಕವನ್ನು ಶೇ 10ರಿಂದ ಶೇ 12ಕ್ಕೆ ಏರಿಕೆ ಮಾಡುವುದು ಯೋಜನೆ. ಸದ್ಯಕ್ಕೆ ಶೇ 5ರಷ್ಟಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮನಿಕಂಟ್ರೋಲ್ ವರದಿ ಮಾಡಿದೆ.

2019ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಇನ್​ಡೈರೆಕ್ಟ್ ಟ್ಯಾಕ್ಸಸ್ ಮತ್ತು ಕ್ಸಟಮ್ಸ್​ಗೆ (CBIC) ಟೀವಿ ತಯಾರಿಸುವವರು ಮನವಿ ಮಾಡಿದ ಮೇಲೆ, ಓಪನ್ ಸೆಲ್ ಪ್ಯಾನೆಲ್​ಗಳ ಮೇಲೆ ಯಾವುದೇ ಸೀಮಾ ಸುಂಕ ವಿಧಿಸುವುದಿಲ್ಲ ಎಂದು ಘೋಷಿಸಲಾಗಿತ್ತು. ದೇಶೀಯವಾಗಿಯೇ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುವುದಕ್ಕೆ ಒಂದು ವರ್ಷದ ಸಮಯ ನೀಡಲಾಗಿತ್ತು. ಆದರೆ ಸ್ಥಳೀಯವಾಗಿ ಈ ತನಕ ಪ್ಯಾನೆಲ್​ಗಳ ತಯಾರಿಕೆಯನ್ನು ಸ್ಥಳೀಯವಾಗಿ ಮಾಡುವುದಕ್ಕೆ ಟೀವಿ ತಯಾರಕರಿಗೆ ಸಾಧ್ಯವಾಗಿಲ್ಲ. ಕೊರೊನಾ ಬಿಕ್ಕಟ್ಟು ಮತ್ತು ಅದರ ಬೆನ್ನಿಗೆ ಜಾರಿಯಾದ ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗಲಿಲ್ಲ.

ಪ್ರತಿ ವರ್ಷವೂ ನಿಧಾನವಾಗಿ ಏರಿಕೆ ಮಾಡಲಾಗುತ್ತದೆ. ಇದರ ಹಿಂದಿನ ಯೋಜನೆ ಏನೆಂದರೆ, ಈ ಬಿಡಿಭಾಗವನ್ನು ಟೀವಿ ಬ್ರ್ಯಾಂಡ್​ಗಳೇ ಸ್ಥಳೀಯವಾಗಿ ತಯಾರಿಸಬೇಕು. ಅವರಿಗೆ 2019ರಿಂದ ಸಮಯಾವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 2021ರಲ್ಲಿ ಇದು ಮೂರನೇ ಬಾರಿಗೆ ಟೀವಿಗಳ ಬೆಲೆ ಮೇಲೇರಲಿದೆ. ಪ್ಯಾನೆಲ್​ಗಳ ಬೆಲೆ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಜನವರಿ ಮತ್ತು ಏಪ್ರಿಲ್​ನಲ್ಲಿ ಟೀವಿಗಳ ಬೆಲೆ ಮೇಲೇರಿದೆ. “ಓಪನ್ ಸೆಲ್ ಪ್ಯಾನೆಲ್​ಗೆ ಶೂನ್ಯ ಸುಂಕ ಇಡುವಂತೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಮೇಕ್ ಇನ್ ಇಂಡಿಯಾ ಉದ್ದೇಶಕ್ಕೆ ಒತ್ತು ನೀಡಬೇಕು ಎಂಬ ಗುರಿ ಅವರದು. ಈ ಭಾವನೆ ಸರಿಯಿದೆ. ಆದರೆ ಹಣಕಾಸಿನ ಪ್ರೋತ್ಸಾಹ ನೀಡಬೇಕು,” ಎಂದು ಜಾಗತಿಕ ಮಟ್ಟದ ಸಂಸ್ಥೆಯೊಂದರ ಉಪಾಧ್ಯಕ್ಷ ಹೇಳಿದ್ದಾರೆ.

ಸೀಮಾ ಸುಂಕವನ್ನು ಹೊರತುಪಡಿಸಿದಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೂಡ ಇದೆ. 32 ಇಂಚು ತನಕ ಟೀವಿಗೆ ಶೇ 18 ಜಿಎಸ್​ಟಿ ಮತ್ತು ಅದರ ಮೇಲ್ಪಟ್ಟ ಅಳತೆಗೆ ಗರಿಷ್ಠ ಶೇ 28ರಷ್ಟಿದೆ.

ಇದನ್ನೂ ಓದಿ: ಏಸಿ, ಟೀವಿ ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆ ಏಪ್ರಿಲ್​ನಲ್ಲಿ ಏರಿಕೆ ಸಾಧ್ಯತೆ

(Due to government increased import duty on open panel cell television prices likely to hike by 3 to 5% in the second half beginning of 2021)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ