Pradhan Mantri Suraksha Bima Yojana: ವರ್ಷಕ್ಕೆ 12 ರೂ. ಪ್ರೀಮಿಯಂ ಪಾವತಿಸಿ 2 ಲಕ್ಷ ರೂ. ತನಕ ವಿಮೆ ಪಡೆಯಿರಿ

ಪಿಎಂ ಸುರಕ್ಷಾ ಬಿಮಾ ಯೋಜನೆ ಎಂಬುದೊಂದು ವಿಮೆ ಇದ್ದು, ವಾರ್ಷಿಕವಾಗಿ ರೂ. 12 ಪಾವತಿಸಿದರೆ 2 ಲಕ್ಷ ರೂಪಾಯಿ ತನಕ ಇನ್ಷೂರೆನ್ಸ್ ಕವರ್ ಆಗುತ್ತದೆ.

Pradhan Mantri Suraksha Bima Yojana: ವರ್ಷಕ್ಕೆ 12 ರೂ. ಪ್ರೀಮಿಯಂ ಪಾವತಿಸಿ 2 ಲಕ್ಷ ರೂ. ತನಕ ವಿಮೆ ಪಡೆಯಿರಿ
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 04, 2021 | 7:09 PM

ಅವಘಡಗಳಿಂದ ಕುಟುಂಬವನ್ನು ಸುರಕ್ಷಿತವಾಗಿಡಲು ವಿಮೆ ಪಡೆಯುವುದು ಬಹಳ ಮುಖ್ಯ, ಆದರೆ ಬಡವರಿಗೆ ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸಲು ಸಾಧ್ಯವಿಲ್ಲ. ಅಂತಹವರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಸರ್ಕಾರವು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ನಡೆಸುತ್ತಿದೆ. ಇದರಲ್ಲಿ ಒಂದು ವರ್ಷಕ್ಕೆ (ವಾರ್ಷಿಕವಾಗಿ) ಕೇವಲ 12 ರೂ. ಪ್ರೀಮಿಯಂ ಪಾವತಿಸುವ ಮೂಲಕ 2 ಲಕ್ಷದವರೆಗೆ ವಿಮೆ ಪಡೆಯಬಹುದು.

ಇತರ ಪಾಲಿಸಿಗಳಿಗೆ ಹೋಲಿಸಿದರೆ ಈ ಅಪಘಾತ ವಿಮಾ ಯೋಜನೆ ತುಂಬಾ ಅಗ್ಗವಾಗಿದೆ. ದುರ್ಬಲ ವರ್ಗದ ಜನರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಮುಖ್ಯ ಸದಸ್ಯರು ತೀರಿಕೊಂಡ ಸಂದರ್ಭದಲ್ಲಿ ಕುಟುಂಬದವರಿಗೆ ಸಹಾಯ ಮಾಡಲು ಸರ್ಕಾರ 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು. ಈ ಪಾಲಿಸಿಯ ಪ್ರಯೋಜನವೇನು ಮತ್ತು ಸಂಪೂರ್ಣ ವಿವರಗಳನ್ನು ತಿಳಿಯಿರಿ.

ಅಪಘಾತದಿಂದ ಸಾವಿನವರೆಗೆ ಇನ್ಷೂರೆನ್ಸ್ ಕ್ಲೇಮ್ ಪಿಎಂ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ, ವಿಮೆ ಮಾಡಿದವರು ಅಪಘಾತದಲ್ಲಿ ಸಾವನ್ನಪ್ಪಿದರೆ, ಅವರ ಕುಟುಂಬ ಮತ್ತು ನಾಮಿನಿಗಳು ಎರಡು ಲಕ್ಷ ರೂಪಾಯಿಗಳ ತನಕ ಪಡೆಯುತ್ತಾರೆ. ಇನ್ನು ಅಪಘಾತದಲ್ಲಿ ವ್ಯಕ್ತಿಯು ಭಾಗಶಃ ಅಂಗವಿಕಲನಾಗಿದ್ದರೆ, ಒಂದು ಲಕ್ಷ ರೂಪಾಯಿ ನೀಡಲಾಗುತ್ತದೆ. ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೆ ಪೂರ್ತಿ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುವುದು.

ಪಾಲಿಸಿಯನ್ನು ಯಾರು ತೆಗೆದುಕೊಳ್ಳಬಹುದು 18 ರಿಂದ 70 ವರ್ಷದೊಳಗಿನವರು ಈ ಪಾಲಿಸಿಯ ಲಾಭವನ್ನು ಪಡೆಯಬಹುದು. ಇದರಲ್ಲಿ, ಪ್ರತಿ ವರ್ಷ 12 ರೂಪಾಯಿಗಳ ಪ್ರೀಮಿಯಂ ಅನ್ನು ವಿಮಾದಾರರ ಬ್ಯಾಂಕ್ ಖಾತೆಯಿಂದ ತಾನಾಗಿಯೇ ಕಡಿತಗೊಳಿಸಲಾಗುತ್ತದೆ (ಆಟೋ ಡೆಬಿಟ್). ನೀವು ಈ ಪಾಲಿಸಿಯನ್ನು ಸರೆಂಡರ್ ಮಾಡಲು ಬಯಸಿದರೆ, ನೀವು ಖಾತೆಯನ್ನು ಹೊಂದಿರುವ ಬ್ಯಾಂಕ್​ನಲ್ಲಿ ಅರ್ಜಿಯನ್ನು ನೀಡುವ ಮೂಲಕ ಅದನ್ನು ಕ್ಲೋಸ್ ಮಾಡಬಹುದು.

ಅರ್ಜಿ ಹಾಕೋದು ಹೇಗೆ? ಪಿಎಂ ಸುರಕ್ಷಾ ಬಿಮಾ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು, ಪಾಲಿಸಿದಾರರು ಸಕ್ರಿಯವಾದ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅರ್ಜಿಯ ಯೋಜನೆಯ ಫಾರ್ಮ್ ಅನ್ನು ಭರ್ತಿ ಮಾಡಿ, ಜೊತೆಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಪಾಸ್​ಬುಕ್, ವಯಸ್ಸಿನ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣಪತ್ರದ ನಕಲು ಮಾಡಿ ಮತ್ತು ಪಾಸ್​ಪೋರ್ಟ್ ಗಾತ್ರದ ಫೋಟೋವನ್ನು ಇರಿಸಿ. ವಿವರವಾದ ಮಾಹಿತಿಗೆ  https://jansuraksha.gov.in/Forms-PMSBY.aspx ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: PMJJBY Explainer: ಏನಿದು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ?

(Pradhan Mantri Suraksha Bima Yojana is offering Rs 2 lakh coverage of Insurance for Rs 12 premium)

Published On - 7:00 pm, Tue, 4 May 21