ಸೂರಜ್​ಗೆ ಮತ್ತೊಂದು ಸಂಕಷ್ಟ: ಆಪ್ತನೇ ಸಂತ್ರಸ್ತ ಈಗ ಸ್ಫೋಟಕ ಹೇಳಿಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 25, 2024 | 11:02 PM

ಸೂರಜ್ ರೇವಣ್ಣ(Suraj Revanna)​ನಿಂದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಇಂತಹುದೇ ಆರೋಪ ಕೇಳಿಬಂದಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಎಫ್​ಐಆರ್ ದಾಖಲಾಗಿದೆ.

ಸೂರಜ್​ಗೆ ಮತ್ತೊಂದು ಸಂಕಷ್ಟ: ಆಪ್ತನೇ ಸಂತ್ರಸ್ತ ಈಗ ಸ್ಫೋಟಕ ಹೇಳಿಕೆ
ಸೂರಜ್​ ರೇವಣ್ಣ
Follow us on

ಹಾಸನ, ಜೂ.25: ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ(Suraj Revanna)​ನಿಂದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಇಂತಹುದೇ ಆರೋಪ ಕೇಳಿಬಂದಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377,342,506 ಅಡಿ ಎಫ್​ಐಆರ್ ದಾಖಲಾಗಿದೆ. ಪೊಲೀಸ್ ಠಾಣೆ ಗೆ ದೂರು ನೀಡಿ ದ ಬಳಿಕ ಮಾತನಾಡಿದ ಸಂತ್ರಸ್ಥ, ‘ ನಾಲ್ಕು ವರ್ಷಗಳ ಹಿಂದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನನ್ನ ಮನಸ್ಸಿನಲ್ಲೆ ನೋವು ಇಟ್ಟುಕೊಂಡು ಸುಮ್ಮನಿದ್ದೆ. ಈಗ ಸಮಯ ಬಂದಿದೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ.

ನಾನು ಈಗಲೂ ಜೆಡಿಎಸ್ ಕಾರ್ಯಕರ್ತ, ಲೋಕಸಭಾ ಚುನಾವಣಾ ವೇಳೆಯಲ್ಲೂ ಅವರ ಜೊತೆ ಓಡಾಡಿದ್ದೇನೆ. ನಾನು ದೂರು ನೀಡಿರುವುದರ ಹಿಂದೆ ಬೇರೆ ಯಾರೂ ಇಲ್ಲ. ನಾನೇ ಸ್ವ ಇಚ್ಚೆ ಬಂದು ದೂರು ಕೊಟ್ಟಿದ್ದೇನೆ. ನಾನು ಹಾಗೂ ಮೊದಲ ಸಂತ್ರಸ್ಥ ಇಬ್ಬರೂ ಸಹೊದ್ಯೋಗಿಗಳು. ಮೊದಲ ಸಂತ್ರಸ್ಥನನ್ನು ನಾನು ಸೂರಜ್ ಗೆ ಪರಿಚಯ ಮಾಡಿಕೊಟ್ಟಿಲ್ಲ. ಅವನೇ ಸೂರಜ್ ಅವರಿಗೆ ಪರಿಚಯ ಇದ್ದ. ಜೂನ್ 16 ರಂದು ದೌರ್ಜನ್ಯ ಆದಾಗ ನನ್ನೊಟ್ಟಿಗೆ ಹೇಳಿಕೊಂಡಿದ್ದ.

ಇದನ್ನೂ ಓದಿ:ಜೆಡಿಎಸ್ ಫ್ಲೆಕ್ಸ್​ಗಳಲ್ಲಿ ದೇವೇಗೌಡರ ಹಿರಿಯ ಮಗ ಹೆಚ್​ಡಿ ರೇವಣ್ಣ ಫೋಟೋಗೆ ಕೋಕ್

ಅವನ ವಿರುದ್ಧ ದೂರು ನೀಡಬೇಕು ಎಂದು ನನ್ನನ್ನು ಹೆದರಿಸಿದ್ರು. ಅವರ ಮಾತು ಕೇಳಿ ನಾನು ಮೊದಲ ಸಂತ್ರಸ್ಥ ನನ್ನು ಕೂಡಿ ಹಾಕಿದ್ದು ನಿಜ, ಈಗ ಸೂರಜ್ ಮತ್ತು ಅವರ ಸಹಚರರ ವಿರುದ್ಧ ದೂರು ಕೊಟ್ಟಿದ್ದೇನೆ. ನಾನು ಈಗ ಎಲ್ಲವನ್ನೂ ಮಾತನಾಡಲು ಆಗುತ್ತಿಲ್ಲ. ಆಗಿರವ ನೋವಿನ ಬಗ್ಗೆ ಪೊಲೀಸರ ಎದುರು ಎಲ್ಲವನ್ನೂ ಹೇಳಿಕೊಂಡಿದ್ದೇನೆ. ನನಗೆ ನ್ಯಾಯ ಸಿಗಬೇಕು, ನನ್ನ ಮೇಲೆ ನಡೆದ ದೌರ್ಜನ್ಯ ನಾನು ಯಾರ ಬಳಿಯು ಹೇಳಿಕೊಂಡಿಲ್ಲ. ಎಲ್ಲವನ್ನೂ ಸಹಿಸಿಕೊಂಡು ಅವರಿಂದ ಅಂತರ ಕಾಯ್ದುಕೊಂಡಿದ್ದೆ. ನಾನು ಜೂನ್ 21 ರಂದು ಕೊಟ್ಟ ದೂರಿನ ಬಗ್ಗೆಯೂ ಪೊಲೀಸರಿಗೆ ಹೇಳಿದ್ದೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ