ಜಮೀನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ , ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ವಿರುದ್ಧ ವೃದ್ಧ ದಂಪತಿ ಆರೋಪ

| Updated By: ವಿವೇಕ ಬಿರಾದಾರ

Updated on: May 15, 2022 | 10:20 AM

ಜಮೀನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ವೃದ್ಧ ದಂಪತಿ ಆರೋಪ ಮಾಡಿದ್ದಾರೆ

ಜಮೀನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ , ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ವಿರುದ್ಧ ವೃದ್ಧ ದಂಪತಿ ಆರೋಪ
ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ ಸುರೇಶ
Follow us on

ಹಾಸನ: ಜಮೀನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆಂದು ಹಾಸನ (Hassan) ಬಿಜೆಪಿ (BJP) ಜಿಲ್ಲಾಧ್ಯಕ್ಷರ ವಿರುದ್ಧ ವೃದ್ಧ ದಂಪತಿ ಆರೋಪ ಮಾಡಿದ್ದಾರೆ. ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ವಿರುದ್ಧ ವೃದ್ಧ ದಂಪತಿ ರಾಮಗುಪ್ತಾ ಮತ್ತು ಸುಧಾ ಆರೋಪ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಕೆ.ಸುರೇಶ್ ಬೇಲೂರು ಪಟ್ಟಣದ ಕೋಟೆ ಬೀದಿಯಲ್ಲಿ ಮನೆ ಖರೀದಿ ಮಾಡಿದ್ದಾರೆ. ಖರೀದಿಸಿರುವ ಮನೆ ಹಿಂಬದಿಯಿರುವ ಖಾಲಿ ನಿವೇಶನ ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ನಿವೇಶನ ವಿವಾದಕ್ಕೆ ಸಂಬಂಧಪಟ್ಟಂತೆ ವೃದ್ಧ ದಂಪತಿ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ (court) ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಡೆಯಾಜ್ಞೆ ನೀಡಿತ್ತು. ಆದರೆ ತಡೆಯಾಜ್ಞೆ ನಡುವೆಯೂ ಭೂಮಿ ಅತಿಕ್ರಮಣ ಮಾಡಿದ್ದಾರೆ ಎಂದು ವೃದ್ಧ ದಂಪತಿ ಆರೋಪ ಮಾಡಿದ್ದಾರೆ. ಈ ಸಂಬಂಧ ವೃದ್ಧ ದಂಪತಿ ರಾಮಗುಪ್ತಾ ಮತ್ತು ಸುಧಾ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ. ವಿಡಿಯೋದಲ್ಲಿ ಹೆಚ್.ಕೆ.ಸುರೇಶ್ ಬೆಂಬಲಿಗರು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ.

ಇದನ್ನೂ ಓದಿ
ಗುರಿ ಸಾಧನೆಗೆ ಹಣಕಾಸಿನ ಚಿಂತೆಯೇ? ಹಾಗಿದ್ದರೆ ಹಣಕಾಸಿನ ಯೋಜನೆ ರೂಪಿಸಿಕೊಳ್ಳಲು ನೆರವಾಗುವ ಈ ಅಂಶಗಳನ್ನು ಫಾಲೋ ಮಾಡಿ
ಟಿಸಿಎಸ್​ ವಿಶ್ವ 10ಕೆ ಓಟಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ: 19 ಸಾವಿರಕ್ಕಿಂತ ಹೆಚ್ಚು ಅಥ್ಲೀಟ್​ಗಳು ಭಾಗಿ
ಹೊನ್ನಾವರದ ಗೇರುಸೊಪ್ಪಾ ಸರ್ಕಲ್ ಬಳಿ ವ್ಯಕ್ತಿ ಮೇಲೆ ಹರಿದ ಲಾರಿ, ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನ ಬಂಧನ, ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ನಮ್ಮ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್, ರೂಮ್ ನಿರ್ಮಾಣ ಮಾಡಿದ್ದಾರೆ. ಹುಲಹಳ್ಳಿ ಸುರೇಶ್, ಕೃಷ್ಣಮೂರ್ತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಬೇಲೂರು ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಅತಿಕ್ರಮ ಪ್ರವೇಶಿಸಿ ದಬ್ಬಾಳಿಕೆಯಿಂದ ಕಟ್ಟಡ ನಿರ್ಮಾಣ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ದೌರ್ಜನ್ಯ ಆಗುತ್ತಿದೆ ಯಾರೂ ರಕ್ಷಣೆಗೆ ಬರ್ತಿಲ್ಲ ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡಿದ್ದಾರೆ.

Published On - 10:20 am, Sun, 15 May 22