ಕಾಂಗ್ರೆಸ್ ಹಿಂದೂ ಸಮಾಜವನ್ನು ಒಡೆಯುವ ಉದ್ದೇಶದಿಂದ ಪಠ್ಯ ಪುಸಕ್ತ ಪರಿಷ್ಕರಣೆಗೆ ಆಕ್ಷೇಪ ಮಾಡುತ್ತಿದೆ: ಬಿ.ಸಿ ನಾಗೇಶ್
ಪಠ್ಯ ಪುಸಕ್ತ ಪರಿಷ್ಕರಣೆ (Book review) ಸಂಪೂರ್ಣ ಮುಗಿದಿದೆ. ಅಂತಿಮ ನಿರ್ಣಯ ತೆಗೆದುಕೊಂಡೂ ಆಗಿದೆ. ಸಣ್ಣಪುಟ್ಟ ಆಕ್ಷೇಪ ಬಂದಿದ್ದರಿಂದ ಸರಿಪಡಿಸುತ್ತಿದ್ದೇವೆ. ಈಗಾಗಲೇ ಪಠ್ಯ ಪುಸ್ತಕ ವಿತರಣೆಯಾಗಿದೆ. ಕಲಿಕಾ ಚೇತರಿಕೆ ಆದಮೇಲೆ ಶುರುವಾಗುತ್ತೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಹಾಸನ: ಪಠ್ಯ ಪುಸಕ್ತ ಪರಿಷ್ಕರಣೆ (Book review) ಸಂಪೂರ್ಣ ಮುಗಿದಿದೆ. ಅಂತಿಮ ನಿರ್ಣಯ ತೆಗೆದುಕೊಂಡೂ ಆಗಿದೆ. ಸಣ್ಣಪುಟ್ಟ ಆಕ್ಷೇಪ ಬಂದಿದ್ದರಿಂದ ಸರಿಪಡಿಸುತ್ತಿದ್ದೇವೆ. ಈಗಾಗಲೇ ಪಠ್ಯ ಪುಸ್ತಕ ವಿತರಣೆಯಾಗಿದೆ. ಕಲಿಕಾ ಚೇತರಿಕೆ ಆದಮೇಲೆ ಶುರುವಾಗುತ್ತೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಹೇಳಿದ್ದಾರೆ. ವಿಶೇಷವಾಗಿ ಸುಳ್ಳು ಹೇಳುವ ಕಾಂಗ್ರೆಸ್‌ನವರು ಬಸವಣ್ಣನವರ (Basavanna) ಪಾಠ ತಿರುಚಿದ್ದೇವೆ ಅಂದರು. ಮೂರು ಪಾಠ ತೆರೆದಿಟ್ಟಿವು, ಏನು ಇಲ್ಲಾ ಅಂದರು. ಪಂಡಿತ ಆರಾಧ್ಯ ಅವರು ಸರಿಯಲ್ಲ ಅಂದರು. ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಮುಂದುವರಿಸುತ್ತೇವೆ ಅಂದೆವು, ಅದು ಸರಿಯಲ್ಲ ಅಂದರು. ಮುಂದೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದನ್ನ ಸಿಎಂಗೆ ಬಿಟ್ಟಿದ್ದೇವೆ. ಶಿಕ್ಷಣ ತಜ್ಞರು, ಗುರು ಹಿರಿಯರ ಜೊತೆ ಮಾತನಾಡಿ ತೀರ್ಮಾನ ಮಾಡುತ್ತಾರೆ. ಹೊಸದಾಗಿ ಪಠ್ಯ ಪ್ರಿಂಟ್ ಮಾಡಲ್ಲ, ಮೂರ್ನಾಲ್ಕು ಪುಟ ಪ್ರಿಂಟ್ ಮಾಡ್ತಾರೆ ಅಷ್ಟೇ. ಸಂವಿಧಾನ ಶಿಲ್ಪಿ ಅನ್ನೋ ಪದ ತೆಗೆದಿದ್ದಾರೆ, ಆ ಪದ ಪ್ರಿಂಟ್ ಮಾಡುತ್ತಾರೆ ಎಂದು ಸಚಿವರು ಮಾಹಿತಿ ನೀಡಿದರು.
ಶಾಲಾ ಪಠ್ಯ ಪರಿಷ್ಕರಣೆ ಬಗ್ಗೆ ವಿಪಕ್ಷಗಳಿಂದ ಆಕ್ಷೇಪ ವಿಚಾರವಾಗಿ ಮಾತನಾಡಿದ ಅವರು ಹಿಂದೂ ಸಮಾಜವನ್ನು ಒಡೆಯುವ ಉದ್ದೇಶದಿಂದ ಆಕ್ಷೇಪ ಮಾಡುತ್ತಿದ್ದಾರೆ. ಇದುವರೆಗೂ ಹಿಂದೂ ಸಮಾಜವನ್ನು ಒಡೆದು ಒಂದು ಸಮುದಾಯದ ಓಲೈಕೆ ಮಾಡಿಕೊಂಡಿರುವ ಪಕ್ಷ ಯಾವುದು ಇದೇ ಅದೇ ಈ ಕಾರ್ಯವನ್ನು ಮಾಡುತ್ತಿರೊದು. ಇದಕ್ಕೆ ಒಂದಿಷ್ಟು ಜನ ಸಹಕಾರ ಕೊಟ್ಟಿದ್ದಾರೆ. ಎಡಪಂಥೀಯ ಅನ್ನಿಸಿಕೊಳ್ಳಯವವರು ಹಿಂದಿನಿಂದ ಮಾಡಿರುವುದು ಅದುನ್ನೆ. ಭಾರತೀಯ ಸಂಸ್ಕೃತಿಗೆ ಬೇಕಾದ ಪುಸ್ತಕಗಳು ಯಾವತ್ತು ಬಂದರು ಅದುನ್ನ ವಿರೋಧಿಸುತ್ತಾರೆ. ಇದು ಈಗಿನಿಂದ ಅಲ್ಲ, ಪಾಪ ಇಂದಿರಾಗಾಂಧಿ ಅವರು ಇದ್ದಾಗಲು ಇದೆ ಕಥೆ ಎಂದು ಕಿಡಿಕಾರಿದ್ದಾರೆ.
ಟೆಕ್ನಿಕಲ್, ಪ್ರಿಂಟಿಂಗ್ ಮಿಸ್ಟೇಕ್ ಇದ್ದರೆ ಅದನ್ನು ಸರಿಮಾಡಿಕೊಡುತ್ತೇವೆ. ನಾವು ಓಪನ್ ಮೈಂಡ್‌ಲಿ ಇದಿವಿ, ಅವರ ರೀತಿ ಕ್ಲೋಸ್ ಮೈಂಡ್‌ಲ್ಲ. ಕೆಂಪೇಗೌಡರ ಬಗ್ಗೆ ಮೇಲೆ ತಂದಿರುವುದು ಅವರಿಗೆ ಬೇಜಾರು ಅನ್ನಿಸಿರಬೇಕು. ಟಿಪ್ಪು ಸುಲ್ತಾನ್ ಬಗ್ಗೆ ಕಡಿಮೆಯಾಗಿ, ಮೈಸೂರು ಮಹಾರಾಜರ ಬಗ್ಗೆ ಜಾಸ್ತಿ ಆಯ್ತು ಅಂತ ಕಾಂಗ್ರೆಸ್‌ನವರಿಗೆ ಬೇಜಾರ್ ಇರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ನಾರ್ವೆ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದ 16 ವರ್ಷದ ಜೂ. ಚೆಸ್ ಮಾಸ್ಟರ್ ಆರ್ ಪ್ರಗ್ನಾನಂದ
ಸಚಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಒತ್ತಾಯ ವಿಚಾರವಾಗಿ ಮಾತನಾಡಿದ ಅವರು ಯಾಕೆ ಉನ್ನಿಕೃಷ್ಣನ್ ಪಾಠ ತೆಗೆದರು, ಯಾಕೆ ಕುವೆಂಪು ಅವರ ಪಾಠ ಕಡಿಮೆ ಮಾಡಿದರು. ದೇವರ ಆತ್ಮ ಕಂಡವರಿಲ್ಲ, ವೇದ ಪುರಾಣ ಸುಳ್ಳಿನ ಕಂತೆ, ಅರಮನೆ ಮೋಸದ ಜಾಲ ಅಂತ ಪಾಠ ಹೇಳಿ ಕೊಟ್ಟರಲ್ಲಾ. ಮಠ, ಅರಮನೆ, ದೇವರ ಬಗ್ಗೆ ಯಾಕೆ ಹೇಳಿಕೊಟ್ಟರು ಅಂತ ಸಿದ್ದರಾಮಯ್ಯ ಉತ್ತರ ಹೇಳಲಿ. ನೈಜ ಸಾಹಿತ್ಯದಲ್ಲಿ ಬಸವಣ್ಣ, ಬುದ್ದ, ಕೃಷ್ಣ ಬಗ್ಗೆ ತೆಗದು ಹಾಕಿ ಅಲ್ಲಾ, ಜೀಸಸ್ ಹೇಳಿಕೊಟ್ರಲಾ, ಯಾಕೆ ಅಂಥ ಅವರು ಹೇಳಲಿ ಎಂದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:47 pm, Sat, 11 June 22