ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮತ್ತು ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರ ಲಾಂಛನ ಬಳಸಿದ ಹಿನ್ನಲೆ ಬಸವರಾಜ ಹೊರಟ್ಟಿ ವಿರುದ್ಧ ನೋಟಿಸ್ ಜಾರಿ
ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ಬೆಳಗಾವಿ: ಬಸವರಾಜ ಪಥ ಎಂಬ ಪುಸ್ತಕದ (Book) ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪ ಮತ್ತು ಪರಿಷತ್ ಸಭಾಪತಿ (Vidhan Parishta) ಪೀಠದ ದುರ್ಬಳಕೆ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ (Basavaraj Horatti) ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ. ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಪ್ರಕಟಿಸಿದ್ದ ಬಸವರಾಜ ಪಥ ಎಂಬ ಪುಸ್ತಕದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಆರೋಪದ ಮೇಲೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದ್ದಾರೆ.
ಬಸವರಾಜ ಹೊರಟ್ಟಿ ಅವರ ವಿರುದ್ಧ ರಿಪ್ರೆಸೆಂಟ್ ಆಫ್ ಪಿಫಲ್ ಆಕ್ಟ್ ಅಡಿಯಲ್ಲಿ 123 ಎ ಮತ್ತು 127 ಎ ಆಕ್ಟ್ ಅಡಿಯಲ್ಲಿ ನೋಟಿಸ್ ಜಾರಿಗೆ ಮಾಡಲಾಗಿದೆ. 123 ಎ ಆಕ್ಟ್ ಪ್ರಕಾರ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರ ಲಾಂಛನ ಬಳಕೆ ಮಾಡ ಮಾಡಬಾರದು. ಮತ್ತು ಜಿಲ್ಲಾಧಿಕಾರಿ ಪರವಾನಿಗೆ ಇಲ್ಲದೆ ಪುಸ್ತಕ ಪ್ರಿಂಟ್ ಮಾಡಿಸಬಾರದು ಎಂದು ಹೇಳುತ್ತದೆ. ಈ ಸಂಬಂಧ ಬಸವರಾಜ ಹೊರಟ್ಟಿ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ.
ಧಾರವಾಡ: ನೀವೆಲ್ಲ ಶಿಕ್ಷಕರು ಬಂದಿದ್ದೀರಿ. ಇಷ್ಟು ಸಂಖ್ಯೆಯಲ್ಲಿ ನಿಮ್ಮನ್ನು ಒಂದೇ ಕಡೆ ನೋಡೋದು ದೇವರನ್ನು ನೋಡಿದಂತೆ. ಶಿಕ್ಷಕರು ದೇವರಿದ್ದಂತೆ. ಇಂಥ ವೃತ್ತಿಯಲ್ಲಿರೋದು ಪುಣ್ಯ. ಹೊರಟ್ಟಿ ಅವರು ನಾಲ್ಕು ದಶಕದಿಂದ ಸೇವೆ ಮಾಡುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ಹೊರಟ್ಟಿ ಸೋಲಿಸಲು ಪ್ರಯತ್ನ ಮಾಡುತ್ತಿದ್ದೆವು. ಅವರು ಸೋಲುವ ಪಕ್ಷದಲ್ಲಿದ್ದು ಗೆದ್ದು ಬಿಡುತ್ತಿದ್ದರು. ಏನೂ ಮಾಡಿದರೂ ಅವರು ಸೋಲುತ್ತಿರಲಿಲ್ಲ. ಇದೇ ಕಾರಣಕ್ಕೆ ನಮ್ಮ ಪಕ್ಷಕ್ಕೆ ಬಂದು ಬಿಡಿ ಅನ್ನುತ್ತಿದ್ದೆವು. ಈ ಬಾರಿ ಗೆಲ್ಲುವ ಕುದುರೆ, ಗೆಲ್ಲಿಸೋ ಪಕ್ಷ ಎರಡೂ ಒಂದಾಗಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡದಲ್ಲಿ ಹೊರಟ್ಟಿ ಪರ ಪ್ರಚಾರದಲ್ಲಿ ಹೇಳಿದ್ದಾರೆ.
ಹೊರಟ್ಟಿ ಅವರು 42 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಹೊರಟ್ಟಿ ಅವರಲ್ಲಿ ಎರಡು ಗುಣಗಳಿವೆ. ಅದು ಒಂದು ಛಲ, ಮತ್ತೊಂದು ಸಕಾರಾತ್ಮಕವಾಗಿ ಚಿಂತಿಸುವುದು. ನಿಜವಾದ ಶಿಕ್ಷಕರ ಪ್ರತಿನಿಧಿ ಎಂದರೆ ಹೊರಟ್ಟಿ. ಶಿಕ್ಷಕರು-ಹೊರಟ್ಟಿ ಅವರದ್ದು ತಾಯಿ-ಮಕ್ಕಳ ಸಂಬಂಧವಿದ್ದಂತೆ. ಶಿಕ್ಷಕರ ಅನೇಕ ಕೆಲಸವನ್ನು ಹೊರಟ್ಟಿ ಮಾಡಿದ್ದಾರೆ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಅವರು ಗೆಲ್ಲಬೇಕು ಎಂದು ಶಿಕ್ಷಕರಿಗೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ಮತ ನೀಡಿ ಗೆಲ್ಲಿಸಿ. ಆಡಳಿತ ಸರಿಯಾಗಿ ನಡೆಯಬೇಕಾದ್ರೆ ಬಿಜೆಪಿ ಗೆಲ್ಲಿಸಿ. ಎಲ್ಲ ಭಾಗದಲ್ಲೂ ಹೊರಟ್ಟಿ ಅವರ ಪರ ಅಲೆ ಇದೆ. ಈ ಹಿಂದೆ ನಾಲ್ಕೈದು ಬಾರಿ ಹೊರಟ್ಟಿ ಅವರನ್ನ ಸೋಲಿಸುವ ಪ್ರಯತ್ನ ಮಾಡಿದ್ವಿ. ಆದರೆ ಅವರು ಸೋಲಲಿಲ್ಲ ನಾವು ಗೆಲ್ಲಲಿಲ್ಲ. ಈ ಹಿಂದೆ ಹೊರಟ್ಟಿ ವಿರುದ್ಧ ಬಿಜೆಪಿ ಅಂತಾ ಇತ್ತು. ಆದ್ರೆ ಈಗ ಹೊರಟ್ಟಿ ಜೊತೆಗೆ ಬಿಜೆಪಿಯಾಗಿದೆ. ಹೊರಟ್ಟಿ ಅವರ ಮೇಲೆ ಶಿಕ್ಷಕರಿಗೆ ಸಾಕಷ್ಟು ವಿಶ್ವಾಸವಿದೆ. ಹೀಗಾಗಿ ಹೊರಟ್ಟಿ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಶಿಕ್ಷಕ ಮತದಾರರಲ್ಲಿ ಜಗದೀಶ ಶೆಟ್ಟರ್ ಮನವಿ ಮಾಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ ಪ್ರತಿ ಚುನಾವಣೆಯಲ್ಲಿ ಬಿಜೆಪಿ ಮತ್ತು ನನಗೆ ನೇರ ಫೈಟ್ ನಡೆಯುತ್ತಿತ್ತು. ಈಗ ಎಲ್ಲಾ ಮತಗಳು ಒಂದಾಗಿವೆ. ಅತಿ ಹೆಚ್ಚು ಮತಗಳು ನನಗೆ ಬರುತ್ತವೆ. ಎಲ್ಲರೂ ಬಂದು ಮತ ಚಲಾವಣೆ ಮಾಡಿ. ನಾನು ಏಳು ಬಾರಿ ಗೆದ್ದು ಬಂದಿದ್ದೆನೆ. ಗೆದ್ದು ಬಂದಿದ್ದು ನಿಮ್ಮಿಂದ. ನಾನು ಶಿಕ್ಷಕರ ನಂಬಿಕೆಯನ್ನ ಉಳಿಸಿಕೊಂಡು ಬಂದಿದ್ದೇನೆ. ನನಗೆ ನೀವು ಈಗ ಮತ್ತೊಮ್ಮೆ ಬೆಂಬಲಿಸಿ ಎಂದು ಶಿಕ್ಷಕರಿಗೆ ಹೊರಟ್ಟಿ ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Sat, 11 June 22