AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಬಸವರಾಜ ಹೊರಟ್ಟಿ; ಮಾಜಿ ಸಭಾಪತಿ ವಿರುದ್ಧ ಆರೋಪಗಳ ಸರಮಾಲೆ
ಬಸವರಾಜ್ ಹೊರಟ್ಟಿ
TV9 Web
| Edited By: |

Updated on:Jun 11, 2022 | 3:38 PM

Share

ಧಾರವಾಡ: ಮಾಜಿ ಸಭಾಪತಿ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಅಭ್ಯರ್ಥಿಯಾಗಿರುವ ಬಸವರಾಜ ಹೊರಟ್ಟಿ (Basavaraj Horatti) ವಿರುದ್ಧ ಆರೋಪಗಳು ಕೇಳಿಬಂದಿವೆ. ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ಇಂದು (ಜೂನ್ 11) ಸುದ್ದಿಗೋಷ್ಠಿ ನಡೆಸಿ, 1980ರಲ್ಲಿ ಎಂಎಲ್ಸಿ ಆಗಿದ್ದರು. 19 ವರ್ಷ ಎಂಎಲ್​ಸಿ ವೇತನ, ಭತ್ಯೆ ಜೊತೆಗೆ ಶಿಕ್ಷಕರ (Teachers) ವೇತನವನ್ನೂ ಪಡೆದಿದ್ದಾರೆ. 18 ವರ್ಷ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರು. ಮತ್ತೋರ್ವ ಶಿಕ್ಷಕನಿಗೆ ನೌಕರಿ ಸಿಗುವುದನ್ನು ತಪ್ಪಿಸಿದರು. ಸಚಿವರಾದ ಬಳಿಕ ಲ್ಯಾಮಿಂಗ್ಟನ್ ಶಾಲೆಗೆ ಶಾಲಾ ಸುಧಾರಣಾ ಸಮಿತಿ ಮಾಡಿಕೊಂಡಿದ್ದರು. ಆಗ ಪಾಲಿಕೆ ಆಯುಕ್ತರು ಸಮಿತಿ ಮಾಡಲು ಬರೋಲ್ಲ ಅಂತಾ ಆಗಲೇ ಹೇಳಿದ್ದರು. ಆಗ ಶಾಲಾ ಸುಧಾರಣಾ ಸಮಿತಿ ವಿಸರ್ಜನೆ ಅಂತಾ ಹೇಳಿಕೊಂಡಿದ್ದರು. ಆದರೆ ಇಂದಿಗೂ ಆ ಶಾಲೆಗೆ ನಾನೇ ಚೇರ್ಮನ್ ಅಂತಾ ಹೇಳಿಕೊಳ್ಳುತ್ತಾರೆ ಅಂತ ಆರೋಪಿಸಿದೆ.

ರಾಷ್ಟ್ರೀಯ ಮತ್ತು ರಾಜ್ಯ ಲಾಂಛನ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಚಾಲಕ ಎಂ. ಭರತ್, ತಮ್ಮ ಸಾಧನೆಯ ಕೈಪಿಡಿಗೆ ಲಾಂಛನ ಬಳಸಿಕೊಂಡಿದ್ದಾರೆ. ಸಭಾಪತಿ ಆಸನ ಸಹ ಬಳಸಿಕೊಂಡಿದ್ದಾರೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇವೆ. ಅವರಿಗೆ ಆಯೋಗ ನೋಟಿಸ್ ಸಹ ನೀಡಿದೆ. ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ತಮ್ಮ ಹಿಡಿತ ಸಾಧಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಏನೇ ಅಕ್ರಮ, ಅನ್ಯಾಯ ನಡೆದರೂ ಅದಕ್ಕೆಲ್ಲ ಪಿತಾಮಹ ಹೊರಟ್ಟಿ ಹೇಳಿದರು.

ಇದನ್ನೂ ಓದಿ: ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ

ಇದನ್ನೂ ಓದಿ
Image
ಸೀರೆಗಳನ್ನು ಹೀಗೂ ಕಳುವು ಮಾಡಬಹುದಾ? ವಿಡಿಯೊ ನೋಡಿ ದಂಗಾಗುತ್ತೀರಿ ಮಾರಾಯ್ರೇ!
Image
IND vs SA: ಭಾರತ- ಆಫ್ರಿಕಾ ಪಂದ್ಯದ ನಡುವೆ ಪರಸ್ಪರ ಬಡಿದಾಡಿಕೊಂಡ ಫ್ಯಾನ್ಸ್..! ವಿಡಿಯೋ ವೈರಲ್
Image
ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶಿಸುವ ಮುನ್ನವೆ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ NDRF ತಂಡ
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ಸರ್ವೋದಯ ಶಿಕ್ಷಣ ಸಂಸ್ಥೆ ಉಳ್ಳಾಗಡ್ಡಿ ಎನ್ನುವವರಿಂದ ಪಡೆದಿದ್ದಾರೆ. ಬಿಳಿ ಹಾಳೆ ಮೇಲೆ ಬರೆಯಿಸಿಕೊಂಡು ಅದನ್ನು ಪಡೆದಿದ್ದಾರೆ. ಈಗಾಗಲೇ ಕೋರ್ಟ್ ಈ ಸಂಸ್ಥೆಗೂ ಉಳ್ಳಾಗಡ್ಡಿಗೆ ಸಂಬಂಧ ಇಲ್ಲ ಅಂತಾ ಹೇಳಿದೆ. ಸರ್ವೋದಯ ಶಿಕ್ಷಣ ಸಂಸ್ಥೆ ನಮಗೆ ಬರೆದುಕೊಡಿ ಅಂತಾ ನಾವು ಎಂದೂ ಕೇಳಿಲ್ಲ. ಮ್ಯಾನೇಜ್​ಮೆಂಟ್ ಸಂಬಂಧಿತ ವ್ಯಾಜ್ಯ ಇದ್ದಿದ್ದಕ್ಕೆ ಸರ್ಕಾರದ ಆಡಳಿತಾಧಿಕಾರಿ ಕೊಡಿ ಅಂತಾ ಕೇಳಿದ್ದೇವೆ ಎಂದು ರಾಷ್ಟ್ರೀಯ ಸ್ವಾಭಿಮಾನಿ ಶಿಕ್ಷಕರ ಸಂಘ ತಿಳಿಸಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Sat, 11 June 22

Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ
ಮಾನವೀಯತೆ ಮರೆತ್ರಾ ವೈದ್ಯರು?: ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ