HD Revanna: ಶಾಲೆ ಶುರುವಾಗಿ‌ 3‌ ತಿಂಗಳಾಯ್ತು, ಬೆಳಗ್ಗೆ ಎದ್ರೆ ಬರೀ ರೋಹಿತ್ ಚಕ್ರತೀರ್ಥ ಅಂತಾವ್ರೆ! ಅವರು ಯಾರಿಗೆ ತೀರ್ಥ ಬಿಡ್ತಾವ್ರೋ!? ಹೆಚ್ ಡಿ ರೇವಣ್ಣ ಲೇವಡಿ

south graduates constituency election 2022: ಗುಬ್ಬಿ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ ರೇವಣ್ಣ ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತಾಡಲ್ಲ. ದೇವರೇ ಶಿಕ್ಷೆ ಕೊಡ್ತಾನೆ. ಈ‌ ಕುಮಾರಸ್ವಾಮಿ‌ ಎಲ್ಲೋ ಕರ್ಕೊಂಡ್ ಬಂದು ಎಂಎಲ್‌ಎ ಮಾಡ್ತಾರೆ. ಅಂತಹವರೇ ಕಡೆಗೆ ಬೆನ್ನಿಗೆ ಚೂರಿ ಹಾಕಿ ಹೋಗ್ತಾರೆ ಎಂದಿದ್ದಾರೆ.

HD Revanna: ಶಾಲೆ ಶುರುವಾಗಿ‌ 3‌ ತಿಂಗಳಾಯ್ತು, ಬೆಳಗ್ಗೆ ಎದ್ರೆ ಬರೀ ರೋಹಿತ್ ಚಕ್ರತೀರ್ಥ ಅಂತಾವ್ರೆ! ಅವರು ಯಾರಿಗೆ ತೀರ್ಥ ಬಿಡ್ತಾವ್ರೋ!? ಹೆಚ್ ಡಿ ರೇವಣ್ಣ ಲೇವಡಿ
ಶಾಸಕ ಹೆಚ್ ಡಿ ರೇವಣ್ಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 11, 2022 | 4:29 PM

ಹಾಸನ: ದಕ್ಷಿಣ ಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದಿಂದ (south graduates constituency election 2022) ಜೂನ್ 13ರಂದು ಚುನಾವಣೆ ನಡೆಯಲಿದೆ. ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ. ಬಿಜೆಪಿಯ ಮೈ.ವಿ. ರವಿಶಂಕರ್‌, ಜೆಡಿಎಸ್‌ ಪರ ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್‌.ಕೆ. ರಾಮು, ಕಾಂಗ್ರೆಸ್‌ ಮಧು ಜಿ. ಮಾದೇಗೌಡ ಹಾಗೂ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು, ಪ್ರಗತಿಪರ ಸಂಘಟನೆಗಳು, ಆಮ್‌ ಆದ್ಮಿ ಪಕ್ಷದ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್‌. ಗೌಡ ಅವರ ನಡುವೆಯೇ ಸೆಣಸಾಟ ಏರ್ಪಟ್ಟಿದೆ. ಜೆಡಿಎಸ್‌ ಸ್ಥಾನ ಉಳಿಸಿಕೊಳ್ಳುವ ಹಪಾಹಪಿಯಲ್ಲಿದೆ. ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಜನಸಂಘ, ಬಿಜೆಪಿ, ಜನತಾ ಪರಿವಾರದ್ದೇ ಗೆಲುವು. ಕಾಂಗ್ರೆಸ್‌ ಜಯದ ಮುಖವನ್ನೇ ಕಂಡಿಲ್ಲ.

ದಕ್ಷಿಣ ಪದವೀಧರ ಕ್ಷೇತ್ರದ ವ್ಯಾಪ್ತಿಯ ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು 1,41,961 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಇವರಲ್ಲಿ 82,505 ಪುರುಷ, 59,432. ಮಹಿಳಾ ಹಾಗೂ 24 ಮಂದಿ ಇತರೆ ಮತದಾರರುಗಳು ಇದ್ದಾರೆ. ಜೂನ್ 15ರಂದು ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆಯಲಿದೆ.

ಈ ಮಧ್ಯೆ, ಹಾಸನದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ (JDS HD Revanna) ಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ್ದು, ಸೋಮವಾರ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ನಡೀತಾ ಇದೆ. ನಮ್ಮ ಪಕ್ಷದ ಅಭ್ಯರ್ಥಿ ರಾಮು ಸ್ಪರ್ಧಿಸಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಬಹಳ ಒತ್ತು ಕೊಟ್ಟಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಿದ್ದರೆ ಅದು ನಮ್ಮ ಸರ್ಕಾರದಲ್ಲಿ ಮಾತ್ರ. ಬಡಮಕ್ಕಳಿಗೆ ಶಿಕ್ಷಣ ಕೊಡುವುದರಲ್ಲಿ ರಾಷ್ಟ್ರೀಯ ಪಕ್ಷಗಳು ವಿಫಲವಾಗಿವೆ. ಶಾಲೆಗಳಿಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲು ಬಿಜೆಪಿಯಿಂದ ಸಾಧ್ಯವಾಗಿಲ್ಲ ಎಂದು ರೇವಣ್ಣ ಕಟಕಿಯಾಡಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿಯಿಂದ ಅಸಡ್ಡೆಯಿದೆ. ಬೆಳಗ್ಗೆ ಎದ್ರೆ ಬರೀ ರೋಹಿತ್ ಚಕ್ರತೀರ್ಥ ಅಂತಾವ್ರೆ. ಅವರು ಯಾರಿಗೆ ತೀರ್ಥ ಬಿಡ್ತಾವ್ರೋ… ಶಾಲೆಗಳು ಶುರುವಾಗಿ‌ ಮೂರು‌ ತಿಂಗಳಾಯ್ತು. ಇನ್ಯಾವಾಗ್ರಿ ಪುಸ್ತಕ‌ ಕೊಡೋದು, ಅವ್ನು ಎಲ್ಲರಿಗೂ ತೀರ್ಥ‌ ಬಿಡ್ತಾವ್ನನೇನೋ. ನಾನೇನು ಅಷ್ಟು ಸಾಹಿತ್ಯ ಓದಿಲ್ಲ. ಕುವೆಂಪು, ರಾಮಚಂದ್ರಪ್ಪ‌ ಸೇರಿದಂತೆ ಹಲವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುಂದುವರೆಸಿಕೊಂಡು ಹೋಗೋದು ಒಳ್ಳೆಯದು. ಮತಕ್ಕೋಸ್ಕರ ಧರ್ಮದ ವಿಚಾರದಲ್ಲಿ ಗಲಾಟೆ ಮಾಡಿಸಬಾರದು. ಇವೆಲ್ಲಾ ಓಟ್ ಬ್ಯಾಂಕ್ ರಾಜಕಾರಣ. ನಾನು ವಿನಂತಿ ಮಾಡ್ತೀನಿ ವಿದ್ಯಾಕ್ಷೇತ್ರಕ್ಕೆ ರಾಜಕೀಯ ತರಬೇಡಿ ಎಂದು ರೇವಣ್ಣ ಕೋರಿದರು.

2023 ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರೋದಕ್ಕೆ ಶತಸಿದ್ದ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಗುಬ್ಬಿ ಶ್ರೀನಿವಾಸ್ ಏಕವಚನದಲ್ಲಿ ವಾಗ್ದಾಳಿ ವಿಚಾರವಾಗಿ ಮಾತನಾಡಿದ ರೇವಣ್ಣ ಅವಕ್ಕೆಲ್ಲಾ ನಾನು ಮಾತಾಡಲ್ಲ. ಅವರು ಎಷ್ಟು ದುಡ್ಡು ಈಸ್ಕೊಂಡು ಓಟ್ ಹಾಕಿದ್ದಾರೆ ಅಂತಾ ಮಂತ್ರಿ ಒಬ್ಬರು ಹೇಳಿದ್ದಾರೆ. ಅವರು ಬಿಜೆಪಿಗೇ ಓಟ್ ಹಾಕಿದ್ದಾರೆ ಅಂತಾ ನನಗೆ ಗೊತ್ತಿದೆ. ಓಟ್ ಹಾಕಿದ ಮೇಲೆ ನಾನು ಯಾರಿಗೂ ಓಟ್ ಹಾಕಿಲ್ಲ ಅಂತಾ ತೋರಿಸಿದ್ರು. ಅವರ ಹೆಬ್ಬೆಟ್ಟು ಮುಚ್ಕೊಂಡಿದ್ರು, ಅದನ್ನ ಅಲ್ಲಿ ತೆಗೆದು ನೋಡೋದಕ್ಕೆ ಹೋಗ್ಲಾ..? ಅವರು ದೊಡ್ಡವರಿದ್ದಾರೆ, ಅವರ ಬಗ್ಗೆ ಮಾತಾಡಲ್ಲ. ದೇವರೇ ಶಿಕ್ಷೆ ಕೊಡೋ ಕಾಲ‌ ಬರುತ್ತದೆ. ಈ‌ ಕುಮಾರಸ್ವಾಮಿ‌ ಎಲ್ಲೋ ಕರ್ಕೊಂಡ್ ಬಂದು ಎಂಎಲ್‌ಎ ಮಾಡ್ತಾರೆ. ಅಂತಹವರೇ ಕಡೆಗೆ ಬೆನ್ನಿಗೆ ಚೂರಿ ಹಾಕಿ ಹೋಗ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಅವರೊಂದಿಗೆ ಮಾತಾಡಿಕೊಂಡು‌ ಕ್ಯಾಂಡಿಟೇಟ್ ಹಾಕಿದ್ದಾರೆ. ಅವರೆಲ್ಲಾ ಮಾತಾಡಿದ‌ ಮೇಲೆಯೇ ಮುಸ್ಲಿಂ ಅಭ್ಯರ್ಥಿಯನ್ನು ಹಾಕಿದ್ರು. ನಿನ್ನೆ ಈಶ್ವರಪ್ಪನವರೇ ಹೇಳಿಲ್ವೇನ್ರಿ.. ಜೆಡಿಎಸ್ ಅನ್ನ ಸೋಲಿಸೋದಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೀಗೆ ಮಾಡಿದ್ದಾರೆ. ಮುಸ್ಲಿಂ ಕ್ಯಾಂಡಿಡೇಟ್ ಹಾಕಿ ಅವರನ್ನೂ ಸೋಲಿದ್ರು ಅಂತಾ ಹೇಳಿದ್ದಾರೆ ಎಂದು ರೇವಣ್ಣ ಒಳಸುಳಿವು ಬಿಚ್ಚಿಟ್ಟರು.

ಸೋಮವಾರ ನಡೆಯುವ ಚುನಾವಣೆಯ ವಿಶೇಷತೆಗಳು ಹೀಗಿವೆ: ಸರ್ಕಾರದ ಅಧಿಸೂಚನೆ ಅನ್ವಯ ಸರ್ಕಾರಿ ಉದ್ಯೊಗದಲ್ಲಿರುವ ಪದವೀಧರ ಮತದಾರರಿಗೆ ಜೂನ್13ರ ಸೋಮವಾರ ಸಾಂದರ್ಭಿಕ ರಜೆ ಘೋಷಿಸಲಾಗಿದೆ. ಮತದಾನ ನಡೆಯುವ ಹಾಸನ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 150 ಮತಗಟ್ಟೆ ನಿರ್ಮಿಸಲಾಗಿದ್ದು, ಜೂ.11 ಶನಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ಕೊನೆಗೊಳ್ಳಲಿದೆ. ಮತದಾನವು ಆಯಾ ತಾಲ್ಲೂಕು ಕೇಂದ್ರಗಳ ತಾಲ್ಲೂಕು ಕಚೇರಿಗಳಲ್ಲಿ ನಡೆಯಲಿದ್ದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಮತದಾರರು ನೋಂದಣಿಯಾಗಿರುವ ನಂಬರ್ ಜೊತೆಗೆ ಗುರುತಿನ ಚೀಟಿ ಹೊಂದಿರಬೇಕು. ಚುನಾವಣಾ ವ್ಯಾಪ್ತಿಯ ಜಿಲ್ಲೆಗಳ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಯಲಿದ್ದು. ಅಂತಿಮವಾಗಿ ಎಲ್ಲಾ ಮತಪೆಟ್ಟಿಗೆಗಳನ್ನು ಮೈಸೂರಿನ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಸ್ಟ್ರಾಂಗ್ ರೂಮ್ ನಲ್ಲಿ ಭದ್ರಪಡಿಸಲಾಗುವುದು.

Published On - 4:26 pm, Sat, 11 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್