ಪೊಲೀಸ್ ಠಾಣೆ ಆವರಣದಲ್ಲಿ ಗಿಡ ತಿಂದ ಹಸುಗಳನ್ನು ಬಂಧಿಸಿದ ಬೇಲೂರು ಪೊಲೀಸ್​: ಇದೇನಿದೆ ವಿಚಿತ್ರ ಕ್ರಮ

ಪೊಲೀಸ್ ಠಾಣೆ ಆವರಣದಲ್ಲಿ ಗಿಡ ತಿಂದ ಹಸುಗಳನ್ನು ಬಂಧಿಸಿದ ಬೇಲೂರು ಪೊಲೀಸ್​: ಇದೇನಿದೆ ವಿಚಿತ್ರ ಕ್ರಮ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 12, 2022 | 1:21 PM

ಹಸುಗಳನ್ನ ವಶಕ್ಕೆ ಪಡೆದು ಠಾಣೆ ಕಾಂಪೌಂಡ್ ಒಳಗೆ ಪೊಲೀಸರು ಕಟ್ಟಿಹಾಕಿದ್ದಾರೆ. ಪಿಐ ಯೋಗೀಶ್ ಆದೇಶದಂತೆ ಹಸವನ್ನು ಕಟ್ಟಿ ಹಾಕಿರೋ ಆರೋಪ ಮಾಡಲಾಗಿದೆ.

ಹಾಸನ: ಪೊಲೀಸ್ ಠಾಣೆ ಆವರಣದಲ್ಲಿ ಗಿಡ ತಿಂದ ಹಸುಗಳನ್ನು ಬಂಧಿಸಿರುವಂತಹ ವಿಚಿತ್ರ ಘಟನೆಯೊಂದು ಜಿಲ್ಲೆಯ ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಸುಗಳನ್ನ ವಶಕ್ಕೆ ಪಡೆದು ಠಾಣೆ ಕಾಂಪೌಂಡ್ ಒಳಗೆ ಪೊಲೀಸರು ಕಟ್ಟಿಹಾಕಿದ್ದಾರೆ. ಪಿಐ ಯೋಗೀಶ್ ಆದೇಶದಂತೆ ಹಸವನ್ನು ಕಟ್ಟಿ ಹಾಕಿರೋ ಆರೋಪ ಮಾಡಲಾಗಿದ್ದು, ವೃದ್ಧೆಯರಿಬ್ಬರಿಗೆ ಸೇರಿರುವ ಜರ್ಸಿ ಹಸುಗಳನ್ನ ಪೊಲೀಸರು ಬಂಧಿಸಿಟ್ಟಿದ್ದಾರೆ. ಜೀವನಕ್ಕೆ ಆಧಾರವಾಗಿರುವ ಹಸುಗಳನ್ನ ಬಿಡಿಸಿಕೊಡಿ ಎಂದು ವೃದ್ಧೆಯರಿಂದ ಕಣ್ಣೀರು ಹಾಕಿದ್ದಾರೆ. ಒಂದು ಹೊತ್ತಿಗೆ ಹತ್ತು ಲೀಟರ್ ಹಾಲು ಕೊಡುತ್ತವೆ. ಇದನ್ನೇ ನಂಬಿ ನಾವು ಜೀವನ ಮಾಡುತ್ತಿದ್ದೇವೆ. ನಮ್ಮ ಕಣ್ತಪ್ಪಿ ಹಸು ಗಿಡ ತಿಂದಿರಬಹುದು, ಹಸುಗಳನ್ನು ಬಿಡಿ ಎಂದು ವೃದ್ದೆಯರು ಅಂಗಲಾಚುತ್ತಿದ್ದಾರೆ. ಬೇಕಂತಾ ಈ ರೀತಿ ಮಾಡಿಲ್ಲ‌. ಮುಂದೆ ಈ ರೀತಿ ಮಾಡುವುದಿಲ್ಲ. ದಯವಿಟ್ಟು ನಮ್ಮ ಹಸುಗಳನ್ನ ಬಿಡಿ ಎಂದು ವೃದ್ಧೆಯರು ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನ ಯೋಗ ಆಚರಣೆಗೆ ಮನವಿ; ಮೈದಾನದಲ್ಲಿ ನಿನ್ನೆ ನೆಟ್ಟಿದ್ದ ಕಂಬ ಏಕಾಏಕಿ ನೆಲಸಮ!

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.