ನಂದಿ ಹಿಲ್ಸ್ಗೆ ಬಂದ ಪ್ರವಾಸಿಗರು ಪರದಾಟ! ಕಿಲೋಮೀಟರ್ ಗಟ್ಟಲೆ ವಾಹನ ಸಂದಣಿ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ 300 ಕಾರುಗಳಿಗೆ ಮಾತ್ರ ಪ್ರವೇಶ ನಿಗದಿ ಮಾಡಿದೆ. ಮೇಲೆ ಹೋದ ಕಾರುಗಳು ಕೆಳಗೆ ಬಂದರೆ ಮಾತ್ರ ಕೆಳಗೆ ಇರುವ ಕಾರುಗಳಿಗೆ ಮೇಲೆ ಹೋಗಲು ಪ್ರವೇಶ ಇರುತ್ತದೆ.
ಚಿಕ್ಕಬಳ್ಳಾಪುರ: ಇಂದು ವೀಕೆಂಡ್ (Weekend) ಆಗಿರುವ ಕಾರಣ ಬೆಂಗಳೂರಿನ ಜನರು ನಂದಿ ಬೆಟ್ಟದ ಕಡೆ ಹೆಚ್ಚು ಆಗಮಿಸುತ್ತಾರೆ. ಬೆಳಿಗ್ಗೆ ಬೆಳಿಗ್ಗೆ ನಂದಿ ಹಿಲ್ಸ್ (Nandi Hills) ವೀಕ್ಷಿಸುವುದೇ ಅದ್ಭುತ ಅನುಭವ. ಹೀಗೆ ಭಾನುವಾರ ಎಂಜಾಯ್ ಮಾಡಲು ಬಂದಿದ್ದ ಪ್ರವಾಸಿಗರು ಬೆಟ್ಟದ ಕೆಳಗೆ ಪರದಾಡುವಂತಾಗಿದೆ. ನಂದಿಗಿರಿಧಾಮಕ್ಕೆ ನಿಗದಿತ ವಾಹನಗಳಿಗೆ ಮಾತ್ರ ಪ್ರವೇಶ ಇರುವ ಹಿನ್ನೆಲೆ ತಡವಾಗಿ ಬಂದ ಪ್ರವಾಸಿಗರು ಪ್ರವೇಶವಿಲ್ಲದೆ ಗೋಳಾಡುತ್ತಿದ್ದಾರೆ. ನಂದಿಗಿರಿಧಾಮದ ಬಳಿ ಕೀಲೋಮೀಟರ್ ಗಟ್ಟಲೆ ವಾಹನ ನಿಂತಿವೆ. ಪ್ರವಾಸಿಗರು ಬೆಟ್ಡದ ಮೇಲೆ ಹೊಗಲಾಗದೆ ಕೆಳಗೂ ಬರಲಾಗದೆ ಮಕ್ಕಳು, ಮಹಿಳೆಯರು ಸೇರಿ ವೃದ್ಧರು ರಸ್ತೆ ಮದ್ಯೆ ಪರದಾಡುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ 300 ಕಾರುಗಳಿಗೆ ಮಾತ್ರ ಪ್ರವೇಶ ನಿಗದಿ ಮಾಡಿದೆ. ಮೇಲೆ ಹೋದ ಕಾರುಗಳು ಕೆಳಗೆ ಬಂದರೆ ಮಾತ್ರ ಕೆಳಗೆ ಇರುವ ಕಾರುಗಳಿಗೆ ಮೇಲೆ ಹೋಗಲು ಪ್ರವೇಶ ಇರುತ್ತದೆ.
ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos