ಹಾಸನ: ತುಮಕೂರು ಬಳಿ ಮೊನ್ನೆ ನಡೆದ ಭೀಕರ ಅಪಘಾತದ ನೆನಪು ಮಾಸುವ ಮುನ್ನವೇ ಹಾಸನ ಜಿಲ್ಲೆ ಬೇಲೂರು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಸಂಕೇನಹಳ್ಲಿ ತಿರುವಿನಲ್ಲಿ ಸಾರಿಗೆ ಬಸ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ 4 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರೆ ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆ ಗೆ ಸಾಗಿಸೋ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮೃತರು ಬೇಲೂರಿನ ವಿದ್ಯಾ ವಿಕಾಸ ಕಾಲೇಜಿನ ಪಿಯು ಕಾಲೇಜು ವಿದ್ಯಾರ್ಥಿಗಳು. ಇವರು ಬೇಲೂರು ಪಟ್ಟಣದ ನಿವಾಸಿಗಳು. ಇವರೆಲ್ಲ ಕಾಲೇಜು ಮುಗಿಸಿ ಕಾರಿನಲ್ಲಿ ಹಾಸನದತ್ತ ಹೊರಟಿದ್ದರು. ಈ ವೇಳೆ ಚಿಕ್ಕಮಗಳೂರಿನತ್ತ ಹೊರಟಿದ್ದ ಸಾರಿಗೆ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮೊಹಮ್ಮದ್ ಜಲಾನಿ, ಅಕ್ಮಲ್ ಖಾನ್, ಕೈಫ್ ಸೇರಿ ಐವರು ಅಸುನೀಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಜ್ಜಿ ಹೋಗಿದೆ. ಇನ್ನು ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ (belur road accident).
ಶಾಲೆ ಬಂಕ್ ಮಾಡಿ, ಮೀನು ಹಿಡಿಯಲು ನಾಲ್ವರು ಹೋಗಿದ್ದರು – ಇಬ್ಬರು ಜಲಸಮಾಧಿಯಾದರು:
ಯಾದಗಿರಿ: ಮೀನು ಹಿಡಿಯಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಬಾವಿಯಲ್ಲಿ ಮುಳುಗಿ ನೀರುಪಾಲಾಗಿದ್ದಾರೆ. ಯಾದಗಿರಿ ನಗರದ ಅಮರ್ ಲೇಔಟ್ನಲ್ಲಿ ಈ ಕಹಿ ಘಟನೆ ನಡೆದಿದೆ. ಶಾಲೆಗೆ ಬಂಕ್ ಹಾಕಿ ನಾಲ್ವರು ಸ್ನೇಹಿತರು ಮೀನು ಹಿಡಿಯಲು ಹೋಗಿದ್ದರು. ನಾಲ್ವರಲ್ಲಿ ಇಬ್ಬರು, ನೀರಿನಲ್ಲಿ ಇಳಿದು ಮೃತಪಟ್ಟಿದ್ದಾರೆ. ನಕುಲ್ (11) ಮತ್ತು ನಿಹಾಲ್ ಸಿಂಗ್(11) ಜಲಸಮಾಧಿಯಾದವರು. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವಿದ್ಯುತ್ ಸ್ಪರ್ಶ: ಕೂಡ್ಲಿಗಿಯ ಶಿವಪುರ ಗ್ರಾಮ ಪಂಚಾಯತ್ ಸದಸ್ಯ ಸಾವು
ವಿಜಯನಗರ: ಮನೆಯ ಹತ್ತಿರದಲ್ಲಿ ನೀರು ಬಿಡುವಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಶಿವಪುರ ಗ್ರಾಮ ಪಂಚಾಯಿತಿ ಸದಸ್ಯ ಮನೆಯ ಮುಂದೆ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಇಂದು ಬೆಳಿಗ್ಗೆ ಶಿವಪುರ ಗ್ರಾಮ ಪಂಚಾಯಿತಿ ಸದಸದ್ಯ ಕೃಷ್ಣಮೂರ್ತಿ (35) ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದ್ದಾರೆ.
ಶಿವಪುರ ಗ್ರಾಮಪಂಚಾಯಿತಿ ಹಾಲಿ ಸದಸ್ಯನಾಗಿದ್ದ
ದಾಳಿ ಕೃಷ್ಣಮೂರ್ತಿ ಇಂದು ಬೆಳಿಗ್ಗೆ ಮೋಟಾರ ಅಳವಡಿಸಿ ಪೈಪಿನಿಂದ ನೀರು ಬಿಡುವಾಗ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತನು ಇಬ್ಬರು ಪತ್ನಿಯರು ಮತ್ತು ಇಬ್ಬರು ಮಕ್ಕಳು, ಅಪಾರ ಬಂಧು ಮಿತ್ರರು, ಗ್ರಾಮಪಂಚಾಯಿತಿ ಸದಸ್ಯರ ಬಳಗವನ್ನು ಅಗಲಿದ್ದಾರೆ. ಈತನ ಆಕಸ್ಮಿಕ ಸಾವಿಗೆ ಕೂಡ್ಲಿಗಿ ತಾಲೂಕಿನ ಗ್ರಾಮಪಂಚಾಯಿತಿ ಸದಸ್ಯರ ಒಕ್ಕೂಟದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ:
ಪಾವಗಡ ಬಸ್ ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಜಾಮೀನು ಮಂಜೂರು
ಇದನ್ನೂ ಓದಿ:
ತುಮಕೂರು ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು: ಹೆಚ್ಡಿ ಕುಮಾರಸ್ವಾಮಿ
Published On - 2:06 pm, Tue, 22 March 22