ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳ್ಳತನ; ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಗಂಡು ಮಗು ಕಳ್ಳತನ, 6 ಮಂದಿ ಅರೆಸ್ಟ್
ಮದುವೆಯಾಗಿ ಐದು ವರ್ಷ ಆದರೂ ಸುಮಾಗೆ ಮಕ್ಕಳಾಗದಿದ್ದಕ್ಕೆ ಸಂಸಾರದಲ್ಲಿ ಜಗಳ ಶುರುವಾಗಿತ್ತು. ಇದನ್ನು ತಪ್ಪಿಸಲು, ಮಗಳಿಗೆ ಮಗು ಕೊಡಿಸೋ ಸಲುವಾಗಿ ತಾಯಿ ಶೈಲಜಾ ಹಾಗೂ ಸುಮಾ ಸಹೋದರ ಯಶ್ವಂತ್ ಪ್ಲಾನ್ ಮಾಡಿ ಮಗು ಕಳ್ಳತನ ಮಾಡಿದ್ದಾರೆ.
ಹಾಸನ: ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕದ್ದೊಯ್ದಿದ್ದ(Baby Theft) ಪ್ರಕರಣಕ್ಕೆ ಸಂಬಂಧಿಸಿ ನಡು ರಾತ್ರಿಯಲ್ಲಿ ಹಸುಗೂಸನ್ನು ಅಪಹರಿಸಿದ್ದ ಖತರ್ನಾಕ್ ಖದೀಮರು ಅರೆಸ್ಟ್ ಆಗಿದ್ದಾರೆ. ಮಕ್ಕಳಿಲ್ಲದ ಮಗಳಿಗೆ ಗಂಡು ಮಗು ಕೊಡಿಸಲು ಕಳ್ಳತನದ ಪ್ಲಾನ್ ಮಾಡಿದ ಕುಟುಂಬವೊಂದು ಸಿಕ್ಕಿಬಿದ್ದಿದೆ. ಹಾಸನ ಜಿಲ್ಲೆ ಕಣಿಯಾರು ಸುಮಾ(22) ಯಶ್ವಂತ್(28), ಅರ್ಪಿತಾ(24) ಶೈಲಜಾ(42) ಸುಶ್ಮಾ(24), ಪ್ರಕಾಶ್ ಬಂಧಿತರು.
ಮದುವೆಯಾಗಿ ಐದು ವರ್ಷ ಆದರೂ ಸುಮಾಗೆ ಮಕ್ಕಳಾಗದಿದ್ದಕ್ಕೆ ಸಂಸಾರದಲ್ಲಿ ಜಗಳ ಶುರುವಾಗಿತ್ತು. ಇದನ್ನು ತಪ್ಪಿಸಲು, ಮಗಳಿಗೆ ಮಗು ಕೊಡಿಸೋ ಸಲುವಾಗಿ ತಾಯಿ ಶೈಲಜಾ ಹಾಗೂ ಸುಮಾ ಸಹೋದರ ಯಶ್ವಂತ್ ಪ್ಲಾನ್ ಮಾಡಿ ಮಗು ಕಳ್ಳತನ ಮಾಡಿದ್ದಾರೆ. ನರ್ಸ್ ವೇಷಧಾರಿಯಾಗಿ ಆಸ್ಪತ್ರೆಗೆ ಎಂಟ್ರಿಯಾಗಿದ್ದ ಅರ್ಪಿತಾ ಆಸ್ಪತ್ರೆಯ ಪರಿಸ್ಥಿತಿ ಅವಲೋಕಿಸಿ ಕಳ್ಳತನಕ್ಕೆ ಪ್ಲಾನ್ ಮಾಡಲು ಯಶ್ವಂತ್ಗೆ ಸಹಾಯ ಮಾಡಿದ್ದಳು. ಕಡೆಗೆ ನಡು ರಾತ್ರಿ ಆಸ್ಪತ್ರೆ ಸಿಬ್ಬಂದಿ ಕಣ್ತಪ್ಪಿಸಿ ಮಗು ಕದ್ದು ಪರಾರಿಯಾಗಿದ್ದರು. ಆಸ್ಪತ್ರೆ ಸಿಸಿ ಕ್ಯಾಮರಾಗಳ ದೃಶ್ಯಾವಳಿ, ಮೊಬೈಲ್ ಲೊಕೇಷನ್ ಆಧರಿಸಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಯಾಸ್ಮಿನ್ ಹಾಗು ಸಿರಾಜ್ ದಂಪತಿಯ ನವಜಾತ ಗಂಡು ಮಗುವನ್ನು ಖದೀಮರು ಕದ್ದೊಯ್ದಿದ್ದರು. ಕೇಸ್ ದಾಖಲಿಸಿಕೊಂಡು ಆರು ಜನ ಆರೋಪಿಗಳನ್ನ ಅರಕಲಗೂಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಘಟನೆ ಹಿನ್ನೆಲೆ ವಾರದ ಹಿಂದಷ್ಟೇ ಇಡೀ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿದ್ದ ಮಗು ಕಳ್ಳತನದ ಅಸಲಿ ಕಹಾನಿ ಸದ್ಯ ಅಂತ್ಯ ಕಂಡಿದೆ. ಯಾಸ್ಮಿನ್ ಹಾಗೂ ಸೀರಾಜ್ ದಂಪತಿ ಅಸ್ಸಾಂನಿಂದ ಕೂಲಿ ಕೆಲಸಕ್ಕೆಂದು 3 ವರ್ಷಗಳ ಹಿಂದೆ ಹಾಸನದ ಅರಕಲಗೂಡಿಗೆ ಬಂದು ಜೀವನ ಕಟ್ಕೊಂಡಿದ್ರು. ಇಬ್ಬರು ಮಕ್ಕಳಿರುವ ಈ ದಂಪತಿಗೆ ಮಾರ್ಚ್ 14ರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ ಮುದ್ದಾದ ಗಂಡು ಮಗುವೊಂದು ಜನಿಸಿತ್ತು. ಆದ್ರೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ನರ್ಸ್ ವೇಷದಲ್ಲಿ ಕಳ್ಳಿಯೊಬ್ಬಳು ಬಂದು ಮಗು ಉಸಿರಾಟಕ್ಕೆ ಸಮಸ್ಯೆ ಆಗ್ತಿದೆ ಬೇಗ ಹೋಗಿ ಔಷಧಿ ತನ್ನಿ ಅಂತ ತಂದೆಯನ್ನ ಹೊರಗೆ ಕಳಿಸಿದ್ಳು. ಬಳಿಕ ತಾಯಿಗೂ ಸುಳ್ಳು ಹೇಳಿ ಮಗುವನ್ನು ಕದ್ದು ಪರಾರಿಯಾಗಿದ್ರು. ಪ್ರಕರಣ ದಾಖಲಿಸಿಕೊಂಡಿದ್ದ ಅರಕಲಗೂಡು ಪೊಲೀಸರು ಮೊಬೈಲ್ ಲೊಕೇಷನ್ ಸುಳಿವಿನ ಮೇಲೆ ಕಳ್ಳರನ್ನ ಬಂಧಿಸಿದ್ದಾರೆ.
ಇದನ್ನೂ ಓದಿ: ನವೀನ್ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ: ಬಿ ಎಸ್ ಯಡಿಯೂರಪ್ಪ
KL Rahul: ಕೊನೆಗೂ ಪಂಜಾಬ್ ಕಿಂಗ್ಸ್ ತಂಡದಿಂದ ಹೊರನಡೆದ ಕಾರಣ ತಿಳಿಸಿದ ಕೆಎಲ್ ರಾಹುಲ್
Published On - 6:53 pm, Mon, 21 March 22