KL Rahul: ಕೊನೆಗೂ ಪಂಜಾಬ್ ಕಿಂಗ್ಸ್ ತಂಡದಿಂದ ಹೊರನಡೆದ ಕಾರಣ ತಿಳಿಸಿದ ಕೆಎಲ್ ರಾಹುಲ್

IPL 2022: ರವಿಚಂದ್ರನ್ ಅಶ್ವಿನ್ ನಿರ್ಗಮನದ ನಂತರ ರಾಹುಲ್ ಪಂಜಾಬ್ ಕಿಂಗ್ಸ್‌ಗೆ ಎರಡು ಸೀಸನ್​ನಲ್ಲಿ ನಾಯಕತ್ವ ವಹಿಸಿದ್ದರು. ಅಲ್ಲದೆ ಸಾಕಷ್ಟು ರನ್ ಗಳಿಸಿ ಮಿಂಚಿದ್ದರು.

KL Rahul: ಕೊನೆಗೂ ಪಂಜಾಬ್ ಕಿಂಗ್ಸ್ ತಂಡದಿಂದ ಹೊರನಡೆದ ಕಾರಣ ತಿಳಿಸಿದ ಕೆಎಲ್ ರಾಹುಲ್
KL rahul
Follow us
| Updated By: ಝಾಹಿರ್ ಯೂಸುಫ್

Updated on: Mar 21, 2022 | 6:06 PM

ಐಪಿಎಲ್ ಸೀಸನ್ 15 ಗಾಗಿ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು, ಅದರಲ್ಲೂ ಹೊಸ ತಂಡದ ನಾಯಕನಾಗಿ ಕನ್ನಡಿಗ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಕಳೆದ ಸೀಸನ್​ನಲ್ಲೂ ರಾಹುಲ್ ನಾಯಕರಾಗಿದ್ದರು ಎಂಬುದು ವಿಶೇಷ. ಅಂದರೆ ಪಂಜಾಬ್ ಕಿಂಗ್ಸ್ ತಂಡವನ್ನು ಎರಡು ಸೀಸನ್​ನಲ್ಲಿ ಮುನ್ನಡೆಸಿದ್ದ ರಾಹುಲ್ ಈ ಬಾರಿ ತಂಡದಿಂದ ಹೊರ ಬಂದಿದ್ದರು. ಅಲ್ಲದೆ ಮೆಗಾ ಹರಾಜಿಗೂ ಮುನ್ನ ಲಕ್ನೋ ಸೂಪರ್ ಜೈಂಟ್ಸ್​ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಇದಾಗ್ಯೂ ಪಂಜಾಬ್ ಕಿಂಗ್ಸ್​ ತಂಡದಿಂದ ಯಾಕಾಗಿ ಹೊರಬಂದಿದ್ದೇನೆ ಎಂಬುದನ್ನು ರಾಹುಲ್ ಎಲ್ಲೂ ಸ್ಪಷ್ಟಪಡಿಸಿರಲಿಲ್ಲ. ಇದೀಗ ಮೊದಲ ಬಾರಿಗೆ ರಾಹುಲ್ ಮನಬಿಚ್ಚಿ ಮಾತನಾಡಿದ್ದಾರೆ.

ರವಿಚಂದ್ರನ್ ಅಶ್ವಿನ್ ನಿರ್ಗಮನದ ನಂತರ ರಾಹುಲ್ ಪಂಜಾಬ್ ಕಿಂಗ್ಸ್‌ಗೆ ಎರಡು ಸೀಸನ್​ನಲ್ಲಿ ನಾಯಕತ್ವ ವಹಿಸಿದ್ದರು. ಅಲ್ಲದೆ ಸಾಕಷ್ಟು ರನ್ ಗಳಿಸಿ ಮಿಂಚಿದ್ದರು. ಇದಾಗ್ಯೂ ತಮ್ಮ ನಾಯಕತ್ವದಿಂದ ಪ್ರಭಾವ ಬೀರಲು ಸಾಧ್ಯವಾಗಿರಲಿಲ್ಲ . ಅಷ್ಟೇ ಅಲ್ಲದೆ ತಂಡವನ್ನು ಪ್ಲೇಆಫ್‌ಗೆ ಕರೆದೊಯ್ಯಲು ವಿಫಲರಾಗಿದ್ದರು. ಇದಾಗ್ಯೂ ರಾಹುಲ್ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲು ಪಂಜಾಬ್ ಬಯಸಿದ್ದರೂ, ಆ ಆಫರ್ ಅನ್ನು ಕೆಎಲ್ಆರ್​ ಒಪ್ಪಿರಲಿಲ್ಲ. ಇದಕ್ಕೆ ಮುಖ್ಯ ಕಾರಣ, ಮತ್ತಷ್ಟು ಅವಕಾಶವನ್ನು ಎದುರು ನೋಡಲು ನಿರ್ಧರಿಸಿರುವುದು ಎಂದು ರಾಹುಲ್ ತಿಳಿಸಿದ್ದಾರೆ.

ತಂಡವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು. ನಾನು ನಾಲ್ಕು ವರ್ಷಗಳ ಕಾಲ ಪಂಜಾಬ್ ಕಿಂಗ್ಸ್​ ತಂಡದ ಜೊತೆ ಇದ್ದೆ. ತಂಡದ ಜೊತೆ ಉತ್ತಮ ಸಮಯವನ್ನು ಕಳೆದಿದ್ದೆ. ಇದಾಗ್ಯೂ ನನಗಾಗಿ ಇನ್ನೇನು ಕಾದಿದೆ. ಹೊಸ ಅವಕಾಶವನ್ನು ಎದುರು ನೋಡಲು ನಾನು ಬಯಸಿದ್ದೆ. ಹೀಗಾಗಿ ತಂಡದಿಂದ ಹೊರಬರುವ ನಿರ್ಧಾರವನ್ನು ತೆಗೆದುಕೊಂಡೆ. ನನ್ನ ಕ್ರಿಕೆಟ್ ಕೆರಿಯರ್​ನಲ್ಲಿ ಬೇರೇನಾದರೂ ಮಾಡಬಹುದೇ ಎದುರು ನೋಡುತ್ತಿದ್ದೇನೆ. ಹೀಗಾಗಿ ಕೆಲ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಾಗುತ್ತದೆ. ಅದರಂತೆ ಪಂಜಾಬ್ ಕಿಂಗ್ಸ್​ ತಂಡದಿಂದ ಹೊರಬಂದು ಹೊಸ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದಾಗಿ ರಾಹುಲ್ ತಿಳಿಸಿದ್ದಾರೆ.

ಇದೀಗ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅತ್ತ ಕೆಎಲ್ ರಾಹುಲ್ ನಿರ್ಗಮನದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್​ಗೆ ನಾಯಕನ ಪಟ್ಟ ನೀಡಿದೆ. ಅದರಂತೆ ಈ ಬಾರಿಯ ಐಪಿಎಲ್​ನಲ್ಲಿ ಎರಡು ತಂಡಗಳಲ್ಲಿ ಕನ್ನಡಿಗರು ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

(KL rahul reveals the reason of leaving punjab kings before the ipl 2022)