ನವೀನ್ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ದುಃಖ ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ: ಬಿ ಎಸ್ ಯಡಿಯೂರಪ್ಪ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಮುತವರ್ಜಿಯಿಂದಾಗಿ ನವೀನ್ ದೇಹವನ್ನು ಭಾರತಕ್ಕೆ ತರುವುದು ಸಾಧ್ಯವಾಗಿದೆ ಎಂದು ಹೇಳಿದ ಯಡಿಯೂರಪ್ಪನವರು, ನವೀನ್ ಸಾವು ಕೇವಲ ಕುಟುಂಬ ಮತ್ತು ಕನ್ನಡಿಗರನ್ನು ಮಾತ್ರ ದುಃಖದಲ್ಲಿ ಮುಳುಗಿಸಿಲ್ಲ, ಇಡೀ ದೇಶ ಅವರಿಗಾಗಿ ಶೋಕಿಸುತ್ತಿದೆ ಎಂದರು.
ರಷ್ಯನ್ ಸೇನೆ ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಕೆಲವೇ ದಿನಗಳ ಬಳಿಕ ಅಲ್ಲಿನ ಖಾರ್ಕಿವ್ ನಗರದ ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 4 ನೇ ವರ್ಷದ ವಿದ್ಯಾರ್ಥಿಯಾಗಿದ್ದ ನಮ್ಮ ಕನ್ನಡದ ಹುಡುಗ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gyangoudar) ಬಲಿಯಾದ ಮೂರು ವಾರಗಳ ನಂತರ ಅವರ ಪಾರ್ಥೀವ ಶರೀರ ಸೋಮವಾರ ಬೆಳಗ್ಗೆ ಭಾರತಕ್ಕೆ ತರಲಾಯಿತು. ನವೀನ್ ದೇಹ ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣಕ್ಕೆ (airport) ಆಗಮಿಸಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಅಲ್ಲಿ ಹಾಜರಿದ್ದರು. ವಿಮಾನ ನಿಲ್ದಾಣದಿಂದ ದೇಹವನ್ನು ಅಂಬ್ಯುಲೆನ್ಸ್ ನಲ್ಲಿ ನವೀನ್ ಸ್ವಗ್ರಾಮ ರಾಣೆಬೆನ್ನೂರು ಬಳಿಯಿರುವ ಚಳಗೇರಿಗೆ ತೆಗೆದುಕೊಂಡು ಹೋಗಲಾಯಿತು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬೆಂಗಳೂರಲ್ಲಿ ಸೋಮವಾರದಂದು ಮೃತ ನವೀನ್ ಅವರ ಆತ್ಮಕ್ಕೆ ಶಾಂತಿ ಕೋರಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಯಡಿಯೂರಪ್ಪನವರು, ಉಕ್ರೇನಲ್ಲಿ ಯುದ್ಧ ಶುರುವಾದ ಮೇಲೆ ಆಕಸ್ಮಿಕವಾಗಿ ಮರಣ ಹೊಂದಿದ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಅಂತ ಹೇಳಿದರು ಮತ್ತು ಅವರ ಅಗಲಿಕೆಯ ನೋವು ಭರಿಸಲು ಅವರ ಕುಟುಂಬದ ಸದಸ್ಯರಿಗೆ ದೇವರು ಶಕ್ತಿ ನೀಡಲಿ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿಶೇಷ ಮುತವರ್ಜಿಯಿಂದಾಗಿ ನವೀನ್ ದೇಹವನ್ನು ಭಾರತಕ್ಕೆ ತರುವುದು ಸಾಧ್ಯವಾಗಿದೆ ಎಂದು ಹೇಳಿದ ಯಡಿಯೂರಪ್ಪನವರು, ನವೀನ್ ಸಾವು ಕೇವಲ ಕುಟುಂಬ ಮತ್ತು ಕನ್ನಡಿಗರನ್ನು ಮಾತ್ರ ದುಃಖದಲ್ಲಿ ಮುಳುಗಿಸಿಲ್ಲ, ಇಡೀ ದೇಶ ಅವರಿಗಾಗಿ ಶೋಕಿಸುತ್ತಿದೆ ಎಂದರು.
ಇದೇ ಹೇಳಿಕೆಯನ್ನು ಯಡಿಯೂರಪ್ಪನವರು ಆಂಗ್ಲ ಭಾಷೆಯಲ್ಲೂ ಓದಿ ಹೇಳಿದರು.