ಹಾಸನದಲ್ಲಿ ಹೈವೋಲ್ಟೇಜ್ ರೇಸ್: ಶರವೇಗದಲ್ಲಿ ಮುನ್ನುಗ್ಗಿದ ರೈಡರ್ಸ್!

ಹಾಸನದಲ್ಲಿ ಹೈವೋಲ್ಟೇಜ್ ರೇಸ್: ಶರವೇಗದಲ್ಲಿ ಮುನ್ನುಗ್ಗಿದ ರೈಡರ್ಸ್!

ಹಾಸನ: ಕೆಲವ್ರಿಗೆ ಕ್ಯೂರಿಯಾಸಿಟಿ.. ಇನ್ನೂ ಕೆಲವ್ರಿಗೆ ಖುಷಿ.. ಜೊತೆಗೆ ಗೆಲುವಿನ ನಗೆ ಬೀರೋ ತವಕ. ಹೀಗೆ ಪ್ರತಿಯೊಬ್ರು ತಮ್ದೇ ಆದ ಮೂಡ್​ನಲ್ಲಿದ್ರು. ಯಾರಾಗ್ತಾನೇ ಕಿಂಗ್ ಅನ್ನೋ ಲೆಕ್ಕಾಚಾರದಲ್ಲೇ ಬ್ಯುಸಿಯಾಗೋಗಿದ್ರು. ಯಾಕಂದ್ರೆ ಅಲ್ಲೊಂದು ಹೈವೋಲ್ಟೇಜ್ ರೇಸ್ ಶುರುವಾಗಿತ್ತು. ಕಲಿಗಳ ಖದರ್​ಗೆಂದೇ ಸಿದ್ಧವಾಗಿರುವ ಅಖಾಡ. ಸುತ್ತಮುತ್ತ ಕೇಕೆ ಶಿಳ್ಳೆಗಳ ಉದ್ಘಾರ. ಅಷ್ಟೇ.. ನೋಡ ನೋಡುತ್ತಿದ್ದಂತೆಯೇ ಶರವೇಗದ ವೀರರು ಫೀಲ್ಡಿಗಿಳ್ದಿದ್ರು. ರುಽಂಯ್ ರುಽಂಯ್ ಅಂತಾ ಮುನ್ನುಗ್ಗಿದ್ರು. ಅವ್ರ ಸಾಹಸಮಯ ಟ್ಯಾಲೆಂಟ್​ಗೆ ಟ್ರ್ಯಾಕ್ ತುಂಬಾ ಧೂಳೆದ್ದಿತ್ತು. ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ! […]

sadhu srinath

|

Feb 24, 2020 | 11:25 AM

ಹಾಸನ: ಕೆಲವ್ರಿಗೆ ಕ್ಯೂರಿಯಾಸಿಟಿ.. ಇನ್ನೂ ಕೆಲವ್ರಿಗೆ ಖುಷಿ.. ಜೊತೆಗೆ ಗೆಲುವಿನ ನಗೆ ಬೀರೋ ತವಕ. ಹೀಗೆ ಪ್ರತಿಯೊಬ್ರು ತಮ್ದೇ ಆದ ಮೂಡ್​ನಲ್ಲಿದ್ರು. ಯಾರಾಗ್ತಾನೇ ಕಿಂಗ್ ಅನ್ನೋ ಲೆಕ್ಕಾಚಾರದಲ್ಲೇ ಬ್ಯುಸಿಯಾಗೋಗಿದ್ರು. ಯಾಕಂದ್ರೆ ಅಲ್ಲೊಂದು ಹೈವೋಲ್ಟೇಜ್ ರೇಸ್ ಶುರುವಾಗಿತ್ತು.

ಕಲಿಗಳ ಖದರ್​ಗೆಂದೇ ಸಿದ್ಧವಾಗಿರುವ ಅಖಾಡ. ಸುತ್ತಮುತ್ತ ಕೇಕೆ ಶಿಳ್ಳೆಗಳ ಉದ್ಘಾರ. ಅಷ್ಟೇ.. ನೋಡ ನೋಡುತ್ತಿದ್ದಂತೆಯೇ ಶರವೇಗದ ವೀರರು ಫೀಲ್ಡಿಗಿಳ್ದಿದ್ರು. ರುಽಂಯ್ ರುಽಂಯ್ ಅಂತಾ ಮುನ್ನುಗ್ಗಿದ್ರು. ಅವ್ರ ಸಾಹಸಮಯ ಟ್ಯಾಲೆಂಟ್​ಗೆ ಟ್ರ್ಯಾಕ್ ತುಂಬಾ ಧೂಳೆದ್ದಿತ್ತು.

ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ! ಕ್ಷಣ ಕ್ಷಣಕ್ಕೂ ರೋಮಾಂಚನ.. ನೋಡೋ ಕಂಗಳಿಗೆ ಅದೆಂಥದ್ದೋ ಪುಳಕ. ಒಮ್ಮೆ ಇಲ್ಲಿ ಮತ್ತೊಮ್ಮೆ ಅಲ್ಲಿ ಅನ್ನುವಂತೆ ಮಿಂಚಿ ಮರೆಯಾಗ್ತಿದ್ದ ಬೈಕ್​ಗಳಿಗೆ ಎಲ್ರೂ ಫಿದಾ ಆಗಿದ್ರು. ರಾಕೆಟ್ ಸ್ಪೀಡ್​ನಲ್ಲಿ ಸೌಂಡ್ ಮಾಡ್ಕೊಂಡು ಹೋಗ್ತಿದ್ದ ರೈಡರ್ಸ್​ ಪವರ್​ ಕಂಡು ಖುಷ್ ಆಗಿದ್ರು.

ಇಂಥಾದ್ದೊಂದು ಹೈವೋಲ್ಟೇಜ್ ರೇಸ್​ಗೆ ಸಾಕ್ಷಿಯಾಗಿದ್ದು ಹಾಸನ ಹೊರವಲಯದ ಬೇಲೂರು ರಸ್ತೆ. ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಜಿಲ್ಲೆಗಳಿಂದ 80ಕ್ಕೂ ಹೆಚ್ಚು ಸ್ಪರ್ಧಿಗಳು ಮೈದಾನದಲ್ಲಿ ಖದರ್ ತೋರಿಸಿದ್ರು. ಸುಮಾರು 800 ಮೀಟರ್ ಟ್ರ್ಯಾಕ್​ನಲ್ಲಿ ಒಂದೊಂದು ವಿಭಾಗದಲ್ಲಿ 20ಕ್ಕೂ ಹೆಚ್ಚುಸವಾರರು ಒಂದೇಬಾರಿಗೆ ಮೈದಾನದಲ್ಲಿ ಗೆಲುವಿಗಾಗಿ ಪೈಪೋಟಿ ನಡೆಸಿದ್ರು.

ಇನ್ನು ರೇಸ್​ನಲ್ಲಿ ಬಿಗಿನಿಂಗ್ ಕ್ಲಾಸ್, ಓಪನ್ ಕ್ಲಾಸ್, 4ಸ್ಟ್ರೋಕ್ ಓಪನ್ ಕ್ಲಾಸ್, ಎಕ್ಸ್​​ಪರ್ಟ್ ಕ್ಲಾಸ್, ಇಂಡಿಯನ್ ಓಪನ್ ಕ್ಲಾಸ್, ಟಿವಿಎಸ್ ಕ್ಲಾಸ್, ಸ್ಕೂಟರ್ ಕ್ಲಾಸ್ ಹೀಗೆ ಹಲವು ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡ್ಲಾಗಿತ್ತು. ಹಾಸನ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ತಮಿಳುನಾಡು ಮತ್ತು ಕೇರಳಗಳಿಂದಲೂ ಕೂಡ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿದ್ದ ಹಲವು ರೇಸರ್​ಗಳು ಭಾಗಿಯಾಗಿದ್ರು.

Follow us on

Related Stories

Most Read Stories

Click on your DTH Provider to Add TV9 Kannada