ಬೆಳ್ಳಂಬೆಳಗ್ಗೆ 2 ಕಂಟೈನರ್​ ಮುಖಾಮುಖಿ: ಸ್ಥಳದಲ್ಲೇ ಇಬ್ಬರ ದಾರುಣ ಸಾವು

  • TV9 Web Team
  • Published On - 8:03 AM, 25 Feb 2020
ಬೆಳ್ಳಂಬೆಳಗ್ಗೆ 2 ಕಂಟೈನರ್​ ಮುಖಾಮುಖಿ: ಸ್ಥಳದಲ್ಲೇ ಇಬ್ಬರ ದಾರುಣ ಸಾವು

ಹಾಸನ: ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಎರಡು ಕಂಟೈನರ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ಆಲೂರು ತಾಲೂಕಿನ ಸಿಂಗಾಪುರ ಬಳಿ ಸಂಭವಿಸಿದೆ. ಸಕಲೇಶಪುರ ತಾಲೂಕಿನ ಜಾತಹಳ್ಳಿಯ ದಿಲೀಪ್(25) ಹಾಗೂ ಅಂಚೆಹಳ್ಳಿ ಗ್ರಾಮದ ಚಂದ್ರು(26) ಮೃತ ದುರ್ದೈವಿಗಳು.

ಮುಂಜಾನೆ 5 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 75ರ ಸಿಂಗಾಪುರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒಂದು ಕಂಟೈನರ್​ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಮತ್ತೊಂದು ಕಂಟೈನರ್​ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಕಂಟೈನರ್ ಒಳಗೆ ಸಿಲುಕಿಕೊಂಡಿರುವ ಮೃತದೇಹಗಳನ್ನ ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.