ದಾವಣಗೆರೆಯಲ್ಲಿ ಕಾರು-ಬೈಕ್ ಡಿಕ್ಕಿ; ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರ ದುರ್ಮರಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 02, 2022 | 1:22 PM

ನಗರದ ಪಿಬಿ ರಸ್ತೆಯ ಗೋಕುಲ್ ಹೋಟೆಲ್ ಬಳಿ ಕಾರು-ಬೈಕ್​ ನಡುವೆ ಡಿಕ್ಕಿ ಸಂಭವಿಸಿ ಕೆಬಿ ಬಡಾವಣೆಯ ಜೀವನಕುಮಾರ್(26) ಹಾಗೂ ದಯಾನಂದ(27) ಮೃತ ಪಟ್ಟಿದ್ದಾರೆ.

ದಾವಣಗೆರೆಯಲ್ಲಿ ಕಾರು-ಬೈಕ್ ಡಿಕ್ಕಿ; ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರ ದುರ್ಮರಣ
ದಾವಣಗೆರೆ
Follow us on

ದಾವಣಗೆರೆ: ಒಂದೇ ದಿನ ನಗರದಲ್ಲಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿದೆ. ಪಿಬಿ ರಸ್ತೆಯ ಗೋಕುಲ್ ಹೋಟೆಲ್ ಬಳಿ ಹರಿಹರದ ಕಡೆಯಿಂದ ಬರುತ್ತಿದ್ದ ಕಾರು-ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಯುವಕರಾದ ಜೀವನ ಕುಮಾರ್ (26), ದಯಾನಂದ(27) ಸಾವನ್ನಪ್ಪಿದ್ದಾರೆ. ಇನ್ನು ಅದೇ ವೇಳೆಯಲ್ಲಿ ಪಿಬಿ ರಸ್ತೆಯ ಜಿಎಂಐಟಿ ಕಾಲೇಜ್ ಬಳಿ ಮತ್ತೊಂದು ಅಪಘಾತವಾಗಿದ್ದು, ಕೆ.ಎಸ್​.ಆರ್​.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಅಂಜನೇಯ ಎನ್ನುವವರಿಗೆ ಗಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕೆ.ಎಸ್​.ಆರ್​.ಟಿ.ಸಿ ಚಾಲಕನ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಉತ್ತರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಮದ್ದು ಸಿಡಿದು ನಾಯಿ ಸಾವು; ಅದೃಷ್ಟವಶಾತ್​ ತಪ್ಪಿದ ಭಾರಿ ಅನಾಹುತ

ಹಾಸನ: ಸಕಲೇಶಪುರ ತಾಲೂಕಿನ ಚಂಗಡಹಳ್ಳಿ ಬಳಿ ಈ ಘಟನೆ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ನಾಯಿಯ ಮುಖ ಛಿದ್ರಗೊಂಡಿದೆ. ಲೋಕೇಶ್‌ಗೌಡ ಎಂಬುವರ ಜಮೀನಿನ ಬಳಿ ಇಟ್ಟಿದ್ದ ಕಿಡಿಗೇಡಿಗಳು ಕಾಡು ಪ್ರಾಣಿ ಬೇಟೆಗಾಗಿ ಆಹಾರದಲ್ಲಿ ಸಿಡಿ ಮದ್ದು ಇರಿಸಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸಕಲೇಶಪುರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಚೈತನ್ಯ ಮತ್ತು ಅಧಿಕಾರಿಗಳು ಭೇಟಿ ನೀಡಿದ್ದು, ಸಿಡಿಮದ್ದು ಇಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಸ್ನಾನ ಮಾಡುತ್ತಿರುವ ದೃಶ್ಯ ಸೆರೆಹಿಡಿದು ಲಕ್ಷಾಂತರ ರೂಪಾಯಿ ಪೀಕಿಸಿದ ಹಾಸನದ ಪೇಸ್​ಬುಕ್ ಗೆಳತಿ; ಆ ಹಣದಲ್ಲೇ ಐಷಾರಾಮಿ ಮನೆ ನಿರ್ಮಾಣ

ಹಾಸನದಲ್ಲಿ ಎರಡು ಚಿರತೆಗಳನ್ನು ಕೊಂದು ಉಗುರುಗಳು ಹಾಗೂ ಮೂಳೆ ಮಾರಾಟಕ್ಕೆ ಯತ್ನ; ಆರೋಪಿಗಳ ಬಂಧನ

ಹಾಸನ: ಜಿಲ್ಲೆಯಲ್ಲಿ ಡಿವೈಎಸ್‌ಪಿ ಉದಯಭಾಸ್ಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬೇಲೂರು ತಾಲೂಕಿನ ಹಳೇಬೀಡು ಹೋಬಳಿ, ಕೋಮಾರನಹಳ್ಳಿಯಲ್ಲಿ ಚಿರತೆಯನ್ನು ಕೊಂದು ಅದನ್ನು ತಿಪ್ಪೆಯಲ್ಲಿ ಹೂತಿದ್ದು, ಅದಕ್ಕೂ ಮುನ್ನ ಅದರ ಉಗುರು ತೆಗೆದು ಮಾರಾಟ ಮಾಡಲು ಯತ್ನ ಮಾಡಿದ್ದಾರೆ. ಸೆಕ್ಯುರಿಟಿ ಗಾರ್ಡ್ ಮೋಹನ್ ಹಾಗೂ ಕಾಂತರಾಜು ಬಂಧಿತರು.

ಇನ್ನು ಮತ್ತೊಂದು ಪ್ರಕರಣದಲ್ಲಿ ಆಲೂರು ತಾಲೂಕಿನ, ಮಾದೀಹಳ್ಳಿಯಲ್ಲಿ ಚಿರತೆ ಕೊಂದು ಅದರ ನಾಲ್ಕು ಕಾಲು ಕತ್ತರಿಸಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಮಂಜೇಗೌಡ ಮತ್ತು ರೇಣುಕಾಕುಮಾರ್ ಎಂಬುವವರನ್ನು ಬಂಧಿಸಿದ‌ ಪೊಲೀಸರು, ಆರೋಪಿಗಳಿಂದ ಚಿರತೆ ಕಾಲಿನಲ್ಲಿದ್ದ 18 ಉಗುರುಗಳು, ಒಂದು ಓಮಿನಿ ಕಾರು, 2 ಬೈಕ್ ಸೇರಿದಂತೆ ಒಟ್ಟು 7 ಮೊಬೈಲ್​ನ್ನು ವಶಪಡಿಸಿಕೊಂಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ