AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಮದುವೆ ನಿಶ್ಚಯವಾಗಿದ್ದ ಯುವಕನ ಜೊತೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ಸಾವು

ಬಾಲಕಿ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರೊ ಗಾಯದ ಗುರುತು ಪತ್ತೆಯಾಗಿದೆ. ಗಾಯದ ಗುರುತು ಇರೋ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ಹೆಚ್ಚಿದೆ.

ಹಾಸನ: ಮದುವೆ ನಿಶ್ಚಯವಾಗಿದ್ದ ಯುವಕನ ಜೊತೆ ತೆರಳಿದ್ದ ಅಪ್ರಾಪ್ತೆ ಅನುಮಾನಾಸ್ಪದ ಸಾವು
ಮೃತ ಬಾಲಕಿ ಮತ್ತು ದಿನೇಶ್
Follow us
TV9 Web
| Updated By: ಆಯೇಷಾ ಬಾನು

Updated on:Nov 30, 2022 | 2:55 PM

ಹಾಸನ: ಮದುವೆ ನಿಶ್ಚಯವಾಗಿದ್ದ ಹುಡುಗನ ಜೊತೆ ತೆರಳಿದ್ದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯಲ್ಲಿ ನಡೆದಿದೆ. ಕೂಡ್ಲೂರು ಗ್ರಾಮದ ದಿನೇಶ್ ಜೊತೆ ಎರಡು ತಿಂಗಳ ಹಿಂದೆ 16 ವರ್ಷದ ಬಾಲಕಿಗೆ ಮದುವೆ ನಿಶ್ಚಯ ಮಾಡಲಾಗಿತ್ತು. ಆದ್ರೆ ನ.28ರಂದು ಮನೆಗೆ ಬಂದು ದಿನೇಶ್ ಬಾಲಕಿಯನ್ನು ಕರೆದೊಯ್ದಿದ್ದ.

ಸೋಮವಾರ ಮಧ್ಯಾಹ್ನ 2.30ಕ್ಕೆ ರಾಮನಾಥಪುರ ಜಾತ್ರೆಗೆ ಹೋಗುವುದಾಗಿ ಕುಟುಂಬಸ್ಥರಿಗೆ ಹೇಳಿ ಬಾಲಕಿಯನ್ನು ಕರೆದೊಯ್ದಿದ್ದ. ಇದಾದ ಬಳಿಕ ಅಂದು ಸಂಜೆ 4ಕ್ಕೆ ಬಾಲಕಿಯ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ವಿಷ ಸೇವಿಸಿದ್ದಾಳೆ ಎಂದು ದಿನೇಶ್ ಕಡೆಯವರು ತಿಳಿಸಿದ್ದಾರೆ. ಹಾಸನದ ಆಸ್ಪತ್ರೆಗೆ ಕರೆದೊಯ್ಯುವಾಗ ಅಪ್ರಾಪ್ತ ಬಾಲಕಿ ಮೃತಪಟ್ಟಿದ್ದಾಳೆ. ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಮೇಲೆ ಕುಡಿದು ತೂರಾಡುತ್ತಿದ್ದ ವ್ಯಕ್ತಿ ಕೈಯಲ್ಲಿದ್ದ ಬ್ಯಾಗ್​ಗಳಲ್ಲಿ ರೂ. 22 ಲಕ್ಷ ನಗದು ಮತ್ತು ಒಂದೂವರೆ ಕೇಜಿ ಚಿನ್ನ!

ತಾನೂ ಕೂಡ ವಿಷಸೇವಿಸಿ ಆಸ್ಪತ್ರೆಗೆ ದಾಖಲಾಗಿರುವ ದಿನೇಶ್​​

ಇನ್ನು ಮತ್ತೊಂದೆಡೆ ದಿನೇಶ್ ಕೂಡ ವಿಷಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ದಿನೇಶ್​ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚೈಲ್ಡ್ ಲೈನ್ ಗೆ ಬಂದ ಅಪರಿಚಿತ ಕರೆ ಆಧರಿಸಿ ಪೋಷಕರಿಂದ ಮಾಹಿತಿ ಪಡೆದು ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಘಟನೆ ಬಗ್ಗೆ ತನಿಖೆಗೆ ಎಸ್ಪಿಗೆ ದೂರು ನೀಡಿದ್ದಾರೆ. ಎಸ್ಪಿ ಹಾಗು ಮಕ್ಕಳ ದೌರ್ಜನ್ಯ ತಡೆ ವಿಶೇಷ ಪೊಲೀಸ್ ಅಧಿಕಾರಿಗೂ ದೂರು ನೀಡಲಾಗಿದೆ. ಬಾಲಕಿ ಸಾವಿನ ಬಗ್ಗೆ ಅನುಮಾನ ಇದ್ದು ಸೂಕ್ತ ತನಿಖೆ ನಡೆಸಲು ಪೋಷಕರು ಮನವಿ ಮಾಡಿದ್ದಾರೆ.

ಬಾಲಕಿ ಮೃತ ದೇಹದ ಮೇಲೆ ಪತ್ತೆಯಾಯ್ತು ಅನುಮಾನ ಹೆಚ್ಚಿಸುವ ಗುರುತು

ಬಾಲಕಿ ಮೃತದೇಹದ ಮೇಲೆ ಗಾಯದ ಗುರುತು, ಕುತ್ತಿಗೆಯಲ್ಲಿ ಪೆಟ್ಟಾಗಿರೊ ಗಾಯದ ಗುರುತು ಪತ್ತೆಯಾಗಿದೆ. ಗಾಯದ ಗುರುತು ಇರೋ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ಹೆಚ್ಚಿದೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಿಸಲಾಗಿದೆ.

Published On - 2:55 pm, Wed, 30 November 22