ಕಾಡಾನೆ ದಾಳಿಯಿಂದ ಮೃತಪಟ್ಟವರ ಮನೆಗೆ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್ ಭೇಟಿ; ಕುಟುಂಬಕ್ಕೆ ಕೆಲಸದ ಭರವಸೆ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಕಾಫಿ ಬೆಳೆಗಾರ ಕೃಷ್ಣೇಗೌಡ(63) ಅವರ ಮನೆಗೆ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್ ಭೇಟಿ ನೀಡಿದ್ದಾರೆ.
ಹಾಸನ: ಹಾಸನ ಜಿಲ್ಲೆ ಸಕಲೇಶಪುರ (Sakleshpura) ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ಕಾಫಿ (Coffee) ಬೆಳೆಗಾರ ಕೃಷ್ಣೇಗೌಡ(63) ಅವರ ಮನೆಗೆ ಕೇಂದ್ರ ಸಚಿವ ಕೃಷ್ಣಪಾಲ್ ಗುರ್ಜಾರ್ (Central Minister Krishan Pal Gurjar) ಭೇಟಿ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಈಗಾಗಲೇ ಸರ್ಕಾರ ಪರಿಹಾರ ನೀಡಿದೆ. ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರಿ (Government Job) ಕೆಲಸ ನೀಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತೆ ಎಂದು ಭರವಸೆ ನೀಡಿದರು.
ಇದನ್ನು ಓದಿ: ಮಂಗಳೂರು: ಭಾರೀ ಮಳೆಗೆ ಮನೆ ಮೇಲೆ ಏಕಾಏಕಿ ಜರಿದು ಬಿದ್ದ ಗುಡ್ಡ – ಇಬ್ಬರ ರಕ್ಷಣೆ, ಇಬ್ಬರಿಗಾಗಿ ಹುಡುಕಾಟ
ಎರಡು ವರ್ಷದಲ್ಲಿ ಕಾಡಾನೆಗಳ ದಾಳಿಗೆ 15 ಜನ ಮೃತಪಟ್ಟಿದ್ದಾರೆ. ಕಾಡಾನೆಗಳ ಹಾವಳಿ ತಡೆ ಬಗ್ಗೆ ಜಿಲ್ಲೆಯ ಅರಣ್ಯ ಅದಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕಾಡಾನೆಗಳನ್ನು ಸ್ಥಳಾಂತರ ಮಾಡಿ ವಾಪಸ್ ಬರದಂತೆ ಕ್ರಮ ಕೈಗೊಳ್ಳಲಾಗುವುದು. ಹಿಂದೆ 20 ಆನೆಗಳನ್ನ ಸ್ಥಳಾಂತರ ಮಾಡಲಾಗಿತ್ತು, ಆದರೆ ಈಗ ಆನೆಗಳು ವಾಪಸ್ ಬಂದಿವೆ. ಆನೆಗಳನ್ನು ಸ್ಥಳಾಂತರ ಮಾಡಿ ಬಳಿಕ ಅವು ವಾಪಸ್ ಬರದಂತೆ ರೈಲ್ಚೆ ಇಲಾಖೆ ಸಹಯೋಗದಲ್ಲಿ ರೈಲ್ಚೆ ಬ್ಯಾರಿಕೇಡ್ ಹಾಕಲಾಗುತ್ತದೆ ಎಂದು ತಿಳಿಸಿದರು.
ಇದನ್ನು ಓದಿ: ಚಂದ್ರಶೇಖರ ಗುರೂಜಿ ಬರ್ಬರ ಹತ್ಯೆ ಪ್ರಕರಣ: ಹಂತಕರಿಗೆ ಕನಿಷ್ಟ ಜೀವಾವಧಿ ಶಿಕ್ಷೆ ಪಕ್ಕಾ, ಗಲ್ಲು ಶಿಕ್ಷೆಗೆ ಛಾನ್ಸ್ ಇಲ್ಲವಾ?
ಈ ಬಗ್ಗೆ ರೈಲ್ವೆ ಸಚಿವರ ಜೊತೆಗೆ ಚರ್ಚೆ ಮಾಡಿ ಈ ಬಗ್ಹೆ ಪರಿಹಾರ ಕಂಡುಕೊಳ್ಳಲಾಗುತ್ತೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸೇರಿ ಕಾಡಾನೆ ಹಾವಳಿ ತಡೆಯಲು ಕ್ರಮ ವಹಿಸುತ್ತೇವೆ. ಜನರ ಜೀವ ನಮಗೆ ಬಹಳ ಮುಖ್ಯವಾಗಿದೆ ಜನರ ಸಮಸ್ಯೆ ಬಗೆಹರಿಸೋದು ಕೇಂದ್ರ ಹಾಗು ರಾಜ್ಯ ಸರ್ಕಾರದ ಕರ್ತವ್ಯ ಆಗಿದೆ ಎಂದರು.
Published On - 9:41 pm, Wed, 6 July 22