ಹಾಸನ: ಕಾಡ್ಗಿಚ್ಚು (Fire Accident) ನಂದಿಸಲು ಹೋಗಿದ್ದ ನಾಲ್ವರು ಅರಣ್ಯ ಸಿಬ್ಬಂದಿ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿರುವಂತಹ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿ ನಡೆದಿದೆ. ಆರ್‌ಆರ್‌ಟಿ ಸಿಬ್ಬಂದಿಯಾದ ತುಂಗೇಶ್ ಹಾಗೂ ಮಹೇಶ್‌ಗೆ ಗಾಯಗಳಾಗಿದ್ದು, ಡಿಆರ್‌ಎಫ್‌ಒ ಮಂಜುನಾಥ್, ಫಾರೆಸ್ಟರ್ ಸುಂದರೇಶ್ ಗಂಭೀರ ಗಾಯಗಳಾಗಿದ್ದು ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಅರಣ್ಯದಿಂದ 5 ಕಿ.ಮೀ ದೂರ ಗ್ರಾಮಸ್ಥರು ಹೊತ್ತುತಂದಿದ್ದಾರೆ. ಸದ್ಯ ಗಾಯಾಳುಗಳಿಗೆ ಸಕಲೇಶಪುರ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪ ಪಶ್ಚಿಮಘಟ್ಟದ ಕಾಡಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಕಾಡ್ಗಿಚ್ಚನ್ನು ನಂದಿಸಲು ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿಗಳು ಹೋಗಿದ್ದು, ಈ ವೇಳೆ ಬೆಂಕಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲೇಔಟ್ ಪರವಾನಗಿ ನೀಡಲು ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಬೆಂಗಳೂರು: ನಗರದ ಅರಮನೆ ಮೈದಾನದ 4 ಮತ್ತು 5ನೇ ಗೇಟ್‌ನ ಮುಂಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೂರು ಕಾರುಗಳಿಗೆ ಬೆಂಕಿ ತಗುಲಿದ್ದು, 2 ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 1 ಕಾರು ಭಾಗಶಃ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: How To: ಮೊಬೈಲ್ ಕಳೆದುಹೋಗಿದೆಯೇ? ತಪ್ಪದೇ ಈ ಕೆಲಸ ಮಾಡಿ; ವಿಡಿಯೋ ಶೇರ್ ಮಾಡಿದ ಡಿಜಿಪಿ
ಮನೆಯ ಭಾಗಶಃ ಗೋಡೆ ಹಾಗೂ ಗೋಡೌನ್ ಬೆಂಕಿಗೆ ಆಹುತಿಯಾಗಿರುವ ಘಟನೆ ಚಾಮರಾಜಪೇಟೆ ವಿಠ್ಠಲನಗರದ ಜಿಂಕೆ ಪಾರ್ಕ್ ಬಳಿ ನಡೆದಿದೆ. ಮೊದಲು ಪ್ಲವರ್ ಡೆಕೊರೇಟ್ ಗೋಡೌನ್ಗೆ ಬೆಂಕಿ ತಗುಲಿದೆ. ನಂತರ ಬೆಂಕಿ ವ್ಯಾಪಿಸಿ ಮೊದಲ ಮಹಡಿಯ ಪ್ಯಾಸೆಜ್ನಲ್ಲಿದ್ದ ಗ್ಯಾಸ್ ಸಿಲಿಂಡರ್ಗೆ ತಗುಲಿದೆ. ಪರಿಣಾಮ ಸಿಲಿಂಡರ್ ಸ್ಪೋಟಗೊಂಡಿದ್ದು, ಮನೆಯ ಭಾಗಶಃ ಗೋಡೆ ಸುಟ್ಟು ಕರಕಲಾಗಿದೆ. ಅಧೃಷ್ಟವಶಾವತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡು ಅಗ್ನಿ ಶಾಮಕ ವಾಹನ, 20 ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:49 pm, Thu, 16 February 23