ಹಾಸನದಲ್ಲಿ ಅನರ್ಹಗೊಂಡ ನಗರಸಭೆ ಸದಸ್ಯನ ಮೇಲೆ‌ ಮಾರಣಾಂತಿಕ ಹಲ್ಲೆ; ಐವರು ಅರೆಸ್ಟ್

| Updated By: ಆಯೇಷಾ ಬಾನು

Updated on: Mar 21, 2022 | 4:08 PM

ಜೆಡಿಎಸ್ ನಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅರಸೀಕೆರೆ ನಗರಸಭೆ ಸದಸ್ಯ ಹರ್ಷ ಅನರ್ಹಗೊಂಡಿದ್ದರು. ಇದೇ ವಿಚಾರವಾಗಿ ನಿನ್ನೆ ಹಲ್ಲೆ ಕೂಡ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಹೋಟೆಲ್ನಲ್ಲಿ ಊಟ ಮಾಡುವ ವೇಳೆ ಏಕಾ ಏಕಿ ದಾಳಿ ಮಾಡಿ ಹಲ್ಲೆ ಮಾಡಲಾಗಿದೆಯಂತೆ.

ಹಾಸನದಲ್ಲಿ ಅನರ್ಹಗೊಂಡ ನಗರಸಭೆ ಸದಸ್ಯನ ಮೇಲೆ‌ ಮಾರಣಾಂತಿಕ ಹಲ್ಲೆ; ಐವರು ಅರೆಸ್ಟ್
ಹಾಸನದಲ್ಲಿ ಅನರ್ಹಗೊಂಡ ನಗರಸಭೆ ಸದಸ್ಯನ ಮೇಲೆ‌ ಮಾರಣಾಂತಿಕ ಹಲ್ಲೆ
Follow us on

ಹಾಸನ: ಅನರ್ಹಗೊಂಡ ನಗರಸಭೆ ಸದಸ್ಯ ಹರ್ಷವರ್ಧನ್ ಮೇಲೆ‌ ಮಾರಣಾಂತಿಕ ಹಲ್ಲೆ(Murder Attempt) ನಡೆಸಲಾಗಿದೆ. ಜೆಡಿಎಸ್ನಿಂದ(JDS) ಗೆದ್ದು ಬಿಜೆಪಿಗೆ(BJP) ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಶಾಸಕ ಶಿವಲಿಂಗೇಗೌಡ ಅವರ ಆಪ್ತ ಸಮೀವುಲ್ಲಾ ಕುಮ್ಮಕ್ಕಿನಿಂದ ಹಲ್ಲೆ ಮಾಡಿಸಲಾಗಿದೆ ಎಂದು ದೂರು ದಾಖಲಿಸಲಾಗಿದೆ. ಘಟನೆ ಸಂಬಂಧ ರಾಘು, ಜಗ್ಗು, ಪ್ರವೀಣ್ ಸೇರಿ ಐವರನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ.

ಜೆಡಿಎಸ್ ನಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅರಸೀಕೆರೆ ನಗರಸಭೆ ಸದಸ್ಯ ಹರ್ಷ ಅನರ್ಹಗೊಂಡಿದ್ದರು. ಇದೇ ವಿಚಾರವಾಗಿ ನಿನ್ನೆ ಹಲ್ಲೆ ಕೂಡ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ನಿನ್ನೆ ಹೋಟೆಲ್ನಲ್ಲಿ ಊಟ ಮಾಡುವ ವೇಳೆ ಏಕಾ ಏಕಿ ದಾಳಿ ಮಾಡಿ ಹಲ್ಲೆ ಮಾಡಲಾಗಿದೆಯಂತೆ. ಜೆಡಿಎಸ್ ಬೆಂಬಲಿಗರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಶಾಸಕ ಶಿವಲಿಂಗೇಗೌಡ ಮತ್ತು ಅವರ ಆಪ್ತ ಸಮಿವುಲ್ಲಾ ಕುಮ್ಮಕ್ಕಿನಿಂದ ಹಲ್ಲೆ ಎಂದು ದೂರಿನಲ್ಲಿ ಉಲ್ಲೇಖಿಸಾಗಿದೆ. ನಿನ್ನೆ ರಾತ್ರಿ ಚಾಕು, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದು ತಲೆ ಕುತ್ತಿಗೆ ಬೆನ್ನಿನ ಭಾಗಗಳಿಗೆ ಇರಿದು ಕೊಲೆಗೆ ಯತ್ನಿಸಿದ್ದಾರೆ. ಸದ್ಯ ಗಾಯಾಳು ಹರ್ಷವರ್ಧನ್ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೋಟೆಲ್ ಒಳಗೆ ಗಲಾಟೆ ನಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಊಟಕ್ಕೆ ಕುಳಿತವರ ಮೇಲೆ ಏಕಾ ಏಕಿ ಹಲ್ಲೆಗೆ ಯತ್ನ ಮಾಡಲಾಗಿದೆ. ಈ ವೇಳೆ ಪ್ರತಿರೋಧ ತೋರಿದಾಗ ಹಲವರು ಸೇರಿ ಹರ್ಷವರ್ಧನ್ ಮೇಲೆ ಅಟ್ಯಾಕ್ ಮಾಡಿದ್ದಾರೆ. ಘಟನೆ ಸಂಬಂಧ ರಾಘು, ಜಗ್ಗು, ಪ್ರವೀಣ್ ಸೇರಿ ಐವರನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಹರ್ಷವರ್ಧನ್ ವಿರುದ್ಧವೂ ದೂರು ದಾಖಲಾಗಿದೆ. ತಮ್ಮ ಮೇಲೆ‌ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಹಲ್ಲೆ ಆರೋಪಿ ರಾಘು ನೀಡಿದ ದೂರು ಆಧರಿಸಿ ಹರ್ಷವರ್ಧನ್ ವಿರುಧ್ದ ಎಫ್ಐಆರ್ ದಾಖಲಾಗಿದೆ. ಪರಸ್ಪರ ದೂರು ಪ್ರತಿದೂರು ದಾಖಲಿಸಿಕೊಂಡ ಅರಸೀಕೆರೆ ನಗರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಕೆಲಸದ ಅವಧಿ ವಿಸ್ತರಣೆ ಮಾಡಿದ್ದಕ್ಕೆ ಆಕ್ರೋಶ; ಹಾಸಿಗೆ ದಿಂಬು, ಕುಟುಂಬ ಸಹಿತ ಕಚೇರಿಗೆ ಬರುತ್ತೇವೆ ಎಂದ ಸಿಬ್ಬಂದಿ!

ಅಡಿಕೆ ನಿಷೇಧ ಮಾಡದಂತೆ ಕೇಂದ್ರಕ್ಕೆ ಮನವಿ; ಅಡಿಕೆ ಬೆಳೆಗಾರರಿಗೆ ಸಮಾಧಾನಕರ ಸುದ್ದಿ ಕೊಟ್ಟ ಆರಗ ಜ್ಞಾನೇಂದ್ರ