AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತದ ರಾಜ್ ಘಾಟ್ ಅರಸೀಕೆರೆಯ ಗಾಂಧಿ ಚಿತಾಭಸ್ಮ ಸ್ಮಾರಕಕ್ಕೆ ಸರ್ಕಾರ ಕಲ್ಪಿಸಬೇಕಿದೆ ಕಾಯಕಲ್ಪ

ಗಾಂಧೀಜಿ ಚಿತಾಭಸ್ಮವನ್ನು ದೆಹಲಿಯ ರಾಜ್ ಘಾಟ್ ನಲ್ಲಿಟ್ಟು ಸಂರಕ್ಷಣೆ ಮಾಡಿ ಅಲ್ಲಿ ಗಾಂದಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಹೀಗೆ ಗಾಂದಿಜಿಯವರ ಚಿತಾಭಸ್ಮ ಇರೋ ಕರ್ನಾಟಕದ ಏಕೈಕ ಸ್ಥಳ ಹಾಸನ ಜಿಲ್ಲೆಯ ಅರಸೀಕೆರೆ ನಗರ. ಅರಸೀಕೆರೆಯ ಗಾಂದಿ ಸ್ಮಾರಕವನ್ನು ದಕ್ಷಿಣ ಭಾರತದ 'ರಾಜ್‌ಘಾಟ್‌' ಎಂದೇ ಕರೆಯಲಾಗುತ್ತದೆ.

ದಕ್ಷಿಣ ಭಾರತದ ರಾಜ್ ಘಾಟ್ ಅರಸೀಕೆರೆಯ ಗಾಂಧಿ ಚಿತಾಭಸ್ಮ ಸ್ಮಾರಕಕ್ಕೆ ಸರ್ಕಾರ ಕಲ್ಪಿಸಬೇಕಿದೆ ಕಾಯಕಲ್ಪ
ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಗಾಂಧಿ ಚಿತಾಭಸ್ಮ ಸ್ಮಾರಕ
TV9 Web
| Updated By: Rakesh Nayak Manchi|

Updated on:Jan 30, 2023 | 8:54 PM

Share

ಹಾಸನ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅಹಿಂಸಾ ಮಾರ್ಗದ ಪ್ರತಿಪಾದಕ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (M.K.Gandhi) ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಇವರು 1948ರಲ್ಲಿ ಗುಂಡಿನ ದಾಳಿಗೆ ಬಲಿಯಾದರು. ಬಳಿಕ ಇವರ ಚಿತಾಭಸ್ಮವನ್ನು ದೆಹಲಿಯ ರಾಜ್ ಘಾಟ್​ನಲ್ಲಿಟ್ಟು ಸಂರಕ್ಷಣೆ ಮಾಡಿ ಅಲ್ಲಿ ಗಾಂಧಿ ಸ್ಮಾರಕ (Gandhi Ashes Memorial) ನಿರ್ಮಾಣ ಮಾಡಲಾಗಿದೆ. ಹೀಗೆ ಗಾಂಧೀಜಿಯವರ ಚಿತಾಭಸ್ಮ ಇರುವ ಕರ್ನಾಟಕದ ಏಕೈಕ ಸ್ಥಳ ಹಾಸನ ಜಿಲ್ಲೆಯ ಅರಸೀಕೆರೆ ನಗರ ಎನ್ನೋದು ಕನ್ನಡಿಗರ ಹೆಮ್ಮೆ. ಅರಸೀಕೆರೆಯ ಗಾಂದಿ ಸ್ಮಾರಕವನ್ನು ದಕ್ಷಿಣ ಭಾರತದ ‘ರಾಜ್‌ಘಾಟ್‌’ (South Indian Rajghat) ಎಂದೇ ಕರೆಯಲಾಗುತ್ತದೆ. ಆದರೆ ಗಾಂಧೀಜಿ ಚಿತಾಭಸ್ಮವಿರುವ ಪುಣ್ಯ ಜಾಗಕ್ಕೆ ಸೂಕ್ತ ಮಾನ್ಯತೆ ಸಿಕ್ಕಿಲ್ಲ ಅನ್ನೋ ಕೊರಗು ಇಲ್ಲಿನ ಜನರಿಗೆ ಇದ್ದೇ ಇದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ನಮ್ಮನ್ನ ದಾಸ್ಯಕ್ಕೆ ತಳ್ಳಿದ್ದ ಆಂಗ್ಲರ ವಿರುದ್ಧ ಜನರನ್ನು ಒಗ್ಗೂಡಿಸಿ ಹೋರಾಟ ಮಾಡಿ ಬ್ರಿಟಿಷ್ ದಾಸ್ಯದಿಂದ ವಿಮೋಚನೆ ಮಾಡಿದ ಮಹಾತ್ಮನನ್ನು ಸ್ಮರಿಸುವ ಅವರ ಹುಟ್ಟಿದ ದಿನ ಅಕ್ಟೋಬರ್ 2ರಂದು ದೆಹಲಿಯ ರಾಜ್‌ಘಾಟ್‌ನಲ್ಲಿ ನಾನಾ ಕಾರ್ಯಕ್ರಮಗಳು ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ರಾಜ್ಯದ ರಾಜ್ ಘಾಟ್ ಎಂದೇ ಪ್ರಸಿದ್ದವಾಗಿರುವ ಅರಸೀಕೆರೆಯ ಗಾಂಧಿ ಸ್ಮಾರಕದಲ್ಲಿ ಮಾತ್ರ ಇಂತಹ ಮಹತ್ವದ ಕಾರ್ಯಕ್ರಮ ನಡೆಯುವುದಿಲ್ಲ. ಕೇವಲ ಸಣ್ಣಪ್ರಮಾಣದಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ.

ಅರಸೀಕೆರೆ ನಗರದಿಂದ ಮೈಸೂರಿಗೆ ತೆರಳುವ ರಸ್ತೆಯಲ್ಲಿ ಕೇವಲ 2 ಕಿ.ಮೀ. ದೂರ ಸಾಗಿದರೆ ಹಬ್ಬನಘಟ್ಟ ಬಳಿ ಕಸ್ತೂರ್‌ಬಾ ಗಾಂಧಿ ಸ್ಮಾರಕ ಟ್ರಸ್ಟ್‌ ಕಣ್ಣಿಗೆ ಕಾಣುತ್ತದೆ. ಸಾಕಷ್ಟು ವಿಶಾಲವಾದ ಜಾಗದಲ್ಲಿ ಹರಡಿಕೊಂಡಿರುವ ಗಾಂಧಿ ಸ್ಮಾರಕ ಟ್ರಸ್ಟ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ, ಸರ್ಕಾರ ಇನ್ನಾದರೂ ಈ ಬಗ್ಗೆ ಆಧ್ಯತೆ ನಿಡಬೇಕು ಅನ್ನೋದು ಜನರ ಒತ್ತಾಯವಾಗಿದೆ.

ಇದನ್ನೂ ಓದಿ: ಗಾಂಧಿ ಚಿತಾಭಸ್ಮ ಸ್ಮಾರಕ: 1947ರಿಂದಲೂ ದಕ್ಷಿಣ ಭಾರತದ ‘ರಾಜ್‌ಘಾಟ್‌’ ಅರಸೀಕೆರೆಯಲ್ಲಿದೆ! ಆದ್ರೆ ಸರ್ಕಾರದಿಂದ ಸಿಕ್ಕಿಲ್ಲ ಸೂಕ್ತ ಮಾನ್ಯತೆ

ಗಾಂಧಿ ಸ್ಮಾರಕದಲ್ಲಿ ಗಾಂಧೀಜಿ ಮತ್ತು ಕಸ್ತೂರ್‌ಬಾ ಅವರ ಜೀವನ ಚರಿತ್ರೆ ತಿಳಿಸುವ ದಂಡಿಯಾತ್ರೆಯ 8 ಶಿಲ್ಪಗಳ ಕಲಾಕೃತಿ, ಕಸ್ತೂರ್‌ಬಾ ಅವರು ಚರಕದಿಂದ ನೂಲು ತೆಗೆಯುತ್ತಿರುವ 8 ಅಡಿ ಎತ್ತರದ ಪುತ್ಥಳಿ, ಕಸ್ತೂರ್‌ಬಾ ಮತ್ತು ಗಾಂಧೀಜಿಯವರು 1915ರ ಸ್ವಾತಂತ್ರ್ಯಪೂರ್ವದಲ್ಲಿ ಭಾರತಕ್ಕೆ ಆಗಮಿಸಿದ್ದಾಗಿನ ಜೋಡಿ ಚಿತ್ರಗಳು, ದ್ಯಾನಾಸಕ್ತ ಗಾಂಧೀಜಿ, ಕಸ್ತೂರ್‌ಬಾ ತಮ್ಮ ಮೊಮ್ಮಕ್ಕಳ ಜೊತೆ ಇರುವ ಕಲಾಕೃತಿ, ಗಾಂಧೀಜಿ ಅವರು ತಮ್ಮ ಸಹಾಯಕರಾದ ಅನು ಮತ್ತು ಅಬ್ಬಾ ಅವರೊಂದಿಗೆ ಇರುವ ಪ್ರತಿಕೃತಿಗಳು ಹೀಗೆ ಹತ್ತಾರು ಆಕರ್ಷಣೆಗಳು ಇಲ್ಲಿದ್ದರೂ ಇಲ್ಲಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಇಲ್ಲದೆ ಜನರು ಕೂಡ ಇತ್ತ ಸುಳಿಯುವುದಿಲ್ಲ. ಗಾಂದಿಜಿಯವರ ಜೀವನ ಸಾಧನೆ ಹೋರಾಟವನ್ನು ಇಂದಿನ ಪೀಳಿಗೆಗೆ ತಿಳಿಸುವ ದೃಷ್ಟಿಯಿಂದ ಗಾಂಧಿ ಸ್ಮಾರಕ ಮತ್ತಷ್ಟು ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಆಗಬೇಕಿದೆ.

ಸ್ಮಾರಕದ ಹಿಂದೆ ಇದೆ ಮಹಿಳೆಯೊಬ್ಬರ ಪರಿಶ್ರಮ

1946ರಲ್ಲಿ ಕಸ್ತೂರ್‌ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಅನ್ನು ಗ್ರಾಮೀಣ ಪ್ರದೇಶಗಳ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಾಧಿಸಲು, ಆಸ್ಪತ್ರೆಗಳು, ವೃದ್ಧಾಶ್ರಮ, ಶಾಲೆಗಳು, ಮಹಿಳೆಯರ ಸಬಲೀಕರಣಕ್ಕೆ ಈ ಟ್ರಸ್ಟ್‌ನ್ನು ಸ್ಥಾಪಿಸಲಾಗಿತ್ತು. ಅಂದು ಎಚ್‌.ದಾಸಪ್ಪ ಅವರು ಕೇಂದ್ರದ ಸಚಿವರಾಗಿದ್ದ ಸಂದರ್ಭದಲ್ಲಿ ಅವರ ಪತ್ನಿ ಯಶೋಧರ ದಾಸಪ್ಪ ಅವರು ಕೂಡ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಇವರು ಗಾಂಧೀಜಿ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಅವರು ರಾಜ್ಯ ಸರಕಾರದಿಂದ 1947ರಲ್ಲಿ ಅರಸೀಕೆರೆಯ ಈ ಸ್ಥಳದಲ್ಲಿ ಸುಮಾರು 85 ಎಕರೆ ಜಾಗವನ್ನು ಟ್ರಸ್ಟ್‌ನ ಸ್ಥಾಪನೆಗಾಗಿ ಮಂಜೂರು ಮಾಡಿಸಿಕೊಂಡಿದ್ದರು.

ನಂತರ 1948 ರಲ್ಲಿ ಗಾಂಧೀಜಿ ಅವರು ಮರಣ ಹೊಂದಿದ ನಂತರ ಅವರ ಚಿತಾಭಸ್ಮವನ್ನು ದಿಲ್ಲಿಯಿಂದ ಇಲ್ಲಿಗೆ ತಂದು ಒಂದು ಸಮಾಧಿಯನ್ನೂ ನಿರ್ಮಾಣ ಮಾಡಿದರು. 1944 ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಧ್ಯಪ್ರದೇಶದ ಇಂಧೂರಿನಲ್ಲಿರುವ ಕಸ್ತೂರ್​ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​​​ನ ಅಂಗ ಸಂಸ್ಥೆಯಾಗಿದೆ. ಇದು ದೇಶಾದ್ಯಂತ 27 ಕೇಂದ್ರಗಳನ್ನು ಹೊಂದಿದೆ. ಗಾಂಧೀಜಿಯವರ ಅನುಯಾಯಿಯಾಗಿದ್ದ ಕರ್ನಾಟಕದ ದಿಟ್ಟ ಧೀಮಂತ ಮಹಿಳೆ ಯಶೋದರಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಗಿ ದೆಹಲಿಯ ರಾಜ್‌ಘಾಟ್, ಗುಜರಾತಿನ ಸಬರಾಮತಿ ಆಶ್ರಮ ಹೊರತುಪಡಿಸಿದರೆ ಗಾಂಧೀಜಿ ಚಿತಾಭಸ್ಮವಿರುವ ಏಕೈಕ ಸ್ಥಳ ಅರಸೀಕೆರೆ ಎಂಬುದೇ ಹೆಮ್ಮೆಯ ಸಂಗತಿ. ಹಾಗಾಗಿಯೇ ಇದನ್ನು 3ನೇ ರಾಜ್ ಘಾಟ್ ಎಂದು ಕರೆಯಲಾಗುತ್ತದೆ.

ಕಳೆದ ಹಲವು ವರ್ಷಗಳಿಂದ ಈ ಕೇಂದ್ರದಲ್ಲಿ ಕೆಲ ಸಂಘ ಸಂಸ್ಥೆಗಳಿಂದ ಗಾಂಧಿಯವರನ್ನು ಸ್ಮರಿಸುವ ಹಲವು ಚಟುವಟಿಕೆಗಳು ಆರಂಭಗೊಂಡಿವೆಯಾದರೂ ಇಲ್ಲಿ ಸ್ಮಾರಕ ಇರುವ ಬಗ್ಗೆ ಸೂಕ್ತ ಪ್ರಚಾರದ ಕೊರತೆಯಿಂದ ದೇಶದ ಮೂರನೇ ರಾಜ್ ಘಾಟ್, ದಕ್ಷಿಣದ ರಾಜ್ ಘಾಟ್ ಎಂದು ಕರೆಸಿಕೊಳ್ಳುವ ಮಹಾತ್ಮಗಾಂದಿಯವರನ್ನು ಸ್ಮರಿಸುವ ಪ್ರಮುಖ ಸ್ಥಳ ಜನರಿಂದ ದೂರವಾಗಿದೆ. ಸರ್ಕಾರ ಈ ಕೇಂದ್ರವನ್ನ ಅಭಿವೃದ್ಧಿ ಮಾಡುವ ಜೊತೆಗೆ ಈ ಸ್ಮಾರಕದ ಮೂಲಕ ಗಾಂಧಿ ವಿಚಾರಧಾರೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂಬುದು ಎಲ್ಲರ ಆಶಯ.

ವರದಿ: ಮಂಜುನಾಥ್ ಕೆ.ಬಿ, ಟಿವಿ9 ಹಾಸನ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Mon, 30 January 23

Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ