ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಹಾಸನಾಂಬ ದೇಗುಲಕ್ಕೆ 6 ಕೋಟಿ ರೂ. ಆದಾಯ

| Updated By: ವಿವೇಕ ಬಿರಾದಾರ

Updated on: Nov 15, 2023 | 3:04 PM

1 ಸಾವಿರ ರೂ. ಬೆಲೆಯ 30,989 ಟಿಕೆಟ್, 300 ರೂ. ಬೆಲೆಯ 78,348 ಟಿಕೆಟ್ ಮಾರಾಟವಾಗಿವೆ. ಹಾಗೂ 60 ರೂ. ಮೊತ್ತದ 1,13,729 ಲಾಡು ಮಾರಾಟವಾಗಿವೆ. ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ದೇವಾಲಯಕ್ಕೆ ಇಷ್ಟೊಂದು ಆದಾಯ ಹರಿದುಬಂದಿದೆ.

ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಹಾಸನಾಂಬ ದೇಗುಲಕ್ಕೆ 6 ಕೋಟಿ ರೂ. ಆದಾಯ
ಹಾಸನಾಂಬ
Follow us on

ಹಾಸನ ನ.15: ಈ ವರ್ಷ ಹಾಸನಾಂಬೆಯ (Hasanamba) ಗರ್ಭಗುಡಿ ಬಾಗಿಲು ಗುರುವಾರ (ನವೆಂಬರ್​​ 2) ರಂದು ತೆರೆಯಲಾಗಿತ್ತು. ನವೆಂಬರ್ 3 ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದೇವಿಯ ದರ್ಶನ ಪಡೆಯಲು ಕೊನೆಯದಿನವಾದ ಇಂದು (ನವೆಂಬರ್​ 15) ಭಕ್ತರ ದಂಡೇ ಹಾಸನದತ್ತ ಹರಿದು ಬಂದಿತ್ತು. ದೇಶದ ವಿವಿಧಡೆಗಳಿಂದ ಭಕ್ತರು ಆಗಮಿಸಿದ್ದರು. ಆದರೆ ಕೊನೆಯದಿವಾದ ಹಿನ್ನೆಲೆಯಲ್ಲಿ ದರ್ಶನಕ್ಕೆ ಅವಕಾಶ ಇರಲಿಲ್ಲ. ಮಧ್ಯಾಹ್ನ 12 ಗಂಟೆಗೆ ಬಾಗಿಲು ಮುಚ್ಚಲಾಯ್ತು.

ಕಳೆದ 12 ದಿನಗಳಲ್ಲಿ 13 ಲಕ್ಷ ಜನರು ಹಾಸನಾಂಬೆ ದರ್ಶನ ಪಡೆದಿದ್ದು, ನ.14 ರಾತ್ರಿ 10 ಗಂಟೆಯವರೆಗೆ 6,13,17,160 ರೂ. ಹಣ ಸಂಗ್ರಹವಾಗಿದೆ. ಹಾಸನಾಂಬ ಜಾತ್ರಾ ಮಹೋತ್ಸವ ಇತಿಹಾಸದಲ್ಲೇ ಈ ಬಾರಿ ಅತಿ ಹೆಚ್ಚು ಹಣ ಸಂಗ್ರಹವಾಗಿದೆ. ಹಾಗಿದ್ದರೇ ಯಾವ ಯಾವುದರಿಂದ ಸಂಗ್ರಹವಾಗಿದೆ ಇಲ್ಲಿದೆ ಓದಿ

  • ವಿಶೇಷ ದರ್ಶನದ 1 ಸಾವಿರ ರೂ. ಬೆಲೆಯ 30,989 ಟಿಕೆಟ್​ ಮಾರಾಟವಾಗಿದ್ದು, 3 ಕೋಟಿ 09 ಲಕ್ಷದ 89 ಸಾವಿರ ರೂ. ಆದಾಯ ಬಂದಿದೆ.
  • ವಿಶೇಷ ದರ್ಶನದ 300 ರೂ. ಬೆಲೆಯ 78,348 ಟಿಕೆಟ್‌ ಮಾರಾಟವಾಗಿದ್ದು 2 ಕೋಟಿ 35 ಲಕ್ಷದ 04 ಸಾವಿರದ 400 ರೂ. ಆದಾಯ ದೇವಸ್ಥಾನಕ್ಕೆ ಹರಿದು ಬಂದಿದೆ.
  • 60 ರೂ. ಬೆಲೆಯ 1,13,729 ಲಾಡು ಮಾರಾಟದಿಂದ 68,23,760 ರೂ. ಆದಾಯ ಸಂಗ್ರಹವಾಗಿದೆ.
  • ಒಟ್ಟು 6 ಕೋಟಿ 13 ಲಕ್ಷದ 17 ಸಾವಿರದ 160 ರೂ. ದಾಖಲೆ ಮೊತ್ತ ಸಂಗ್ರಹವಾಗಿದೆ.

ಇದನ್ನೂ ಓದಿ: ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್‌, ಮುಂದಿನ ವರ್ಷ ಅಮ್ಮನ ದರ್ಶನೋತ್ಸವಕ್ಕೆ ದಿನಾಂಕವೂ ಫಿಕ್ಸ್

ಹಾಸನಾಂಬ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ಈ ಬಾರಿ ದೇವಾಲಯಕ್ಕೆ ಇಷ್ಟೊಂದು ಆದಾಯ ಹರಿದುಬಂದಿದೆ. ಬುಧವಾರ ಮಧ್ಯಾಹ್ನ 12 ಗಂಟೆ ನಂತರ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:47 pm, Wed, 15 November 23