ಹಾಸನ: ಇಲ್ಲಿನ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲಿಗೆ ಪೂಜೆ ವಿಚಾರವಾಗಿ ನಾಳೆ ಅರ್ಚಕರು, ಸಂಬಂಧಪಟ್ಟವರ ಜೊತೆ ಸಭೆ ನಡೆಸುತ್ತೇನೆ. ಪೂಜೆಯ ಹಿನ್ನೆಲೆ, ಅವಶ್ಯಕತೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಜಗದೀಶ್ ಭಾನುವಾರ ಹೇಳಿಕೆ ನೀಡಿದ್ದಾರೆ. ಹಣದ ಆಸೆಗೆ ಸಾರ್ವಜನಿಕರಿಗೆ ನಿತ್ಯ ಹಾಸನಾಂಬೆ ದರ್ಶನ ನೀಡಲಾಗುತ್ತಿದೆಯಾ ಎಂಬ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಹಾಸನಾಂಬೆ ಗರ್ಭಗುಡಿ ಬಾಗಿಲಿಗೆ ನಿತ್ಯ ಅಲಂಕಾರ ಪೂಜೆ ಮಾಡಲಾಗುತ್ತಿದೆ ಎನ್ನಲಾಗಿತ್ತು.
ಈ ಬಗ್ಗೆ ದೇಗುಲಕ್ಕೆ ಭೇಟಿ ನೀಡಿದ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಜಗದೀಶ್ ದೇಗುಲದ ಅರ್ಚಕರಿಂದ ಮಾಹಿತಿ ಪಡೆದಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದಲ್ಲಿ ಈ ವರ್ಷ ಹೊಸ ರೀತಿಯಲ್ಲಿ ಕಳಸ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ ಎನ್ನಲಾಗಿತ್ತು. ಹೊಸ ರೀತಿಯ ಪೂಜೆಗೆ ಕೆಲ ಭಕ್ತರು ಆಕ್ಷೇಪಿಸಿದ್ದರು.
ಹಾಸನಾಂಬೆ ದೇಗುಲದ ದ್ವಾರಕ್ಕೆ ಪೂಜೆ ಮಾಡುತ್ತಿದ್ದೇವೆ. ವಂಶ ಪಾರಂಪರ್ಯವಾಗಿ ಪೂಜೆ ನಡೆದುಕೊಂಡು ಬಂದಿದೆ. ಆದರೆ ಈ ಮೊದಲು ಅಲಂಕಾರವನ್ನು ಮಾಡುತ್ತಿರಲಿಲ್ಲ. ಇದೀಗ ಚೆನ್ನಾಗಿ ಕಾಣಲಿ ಎಂದು ಅಲಂಕಾರ ಮಾಡುತ್ತಿದ್ದೇವೆ. ದೇವಾಲಯ ಬೆಳಗ್ಗೆಯಿಂದ ಸಂಜೆವರೆಗೆ ಓಪನ್ ಇರಲ್ಲ ಎಂದು ಹಾಸನಾಂಬೆ ದೇಗುಲದ ಅರ್ಚಕ ನಾಗರಾಜ್ ಹೇಳಿಕೆ ನೀಡಿದ್ದಾರೆ. ದೇಗುಲದ ಗರ್ಭಗುಡಿ ಬಾಗಿಲಿಗೆ ಪೂಜೆ ವಿಚಾರವಾಗಿ ಸ್ಪಷ್ಟನೆ ನೀಡಲಾಗಿದೆ.
ಇದನ್ನೂ ಓದಿ: ಹಾಸನಾಂಬೆ ದೇಗುಲದ ಗರ್ಭಗುಡಿಯ ಮುಂದೆ ಪ್ರತಿರೂಪವಿಟ್ಟು ಪೂಜೆ; ಅರ್ಚಕರ ನಡೆಗೆ ಭಕ್ತರ ಅಸಮಾಧಾನ
ಇದನ್ನೂ ಓದಿ: ಹಾಸನದಲ್ಲಿ ವೈದ್ಯ ವಿದ್ಯಾರ್ಥಿನಿ ಹಣೆ, ಕುತ್ತಿಗೆಗೆ ಮುತ್ತಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಅಸೋಸಿಯೇಟ್ ಪ್ರೊಫೆಸರ್ ಸಸ್ಪೆಂಡ್