ಹಾಸನದಲ್ಲಿ ವೈದ್ಯ ವಿದ್ಯಾರ್ಥಿನಿ ಹಣೆ, ಕುತ್ತಿಗೆಗೆ ಮುತ್ತಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಅಸೋಸಿಯೇಟ್ ಪ್ರೊಫೆಸರ್ ಸಸ್ಪೆಂಡ್

ಹಾಸನದಲ್ಲಿ ವೈದ್ಯ ವಿದ್ಯಾರ್ಥಿನಿ ಹಣೆ, ಕುತ್ತಿಗೆಗೆ ಮುತ್ತಿಟ್ಟು ಲೈಂಗಿಕ ದೌರ್ಜನ್ಯ ಎಸಗಿದ ಅಸೋಸಿಯೇಟ್ ಪ್ರೊಫೆಸರ್ ಸಸ್ಪೆಂಡ್
ಅಮಾನತುಗೊಂಡ ಅಸೋಸಿಯೇಟ್ ಪ್ರೊಫೆಸರ್ ಡಾ.ಹೆಚ್ ಸಿ ಲೋಕೇಶ್

ತರಬೇತಿಯಲ್ಲಿದ್ದ ಕೆಲಸ ನಿರತ ವೈದ್ಯೆ ಮೇಲೆ ಜನವರಿ 12ರಂದು ಆರೋಪಿ ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಜನವರಿ 13ಕ್ಕೆ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ.

TV9kannada Web Team

| Edited By: sandhya thejappa

Jan 25, 2022 | 2:34 PM

ಹಾಸನ: ಜಿಲ್ಲೆಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಒಬ್ಬರ ಕರ್ಮಕಾಂಡ ಬಯಲಾಗಿದೆ. ಕೆಲಸ ನಿರತ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ (Sexual harassment) ಎಸಗಿ, ಈ ವಿಚಾರ ಬಾಯಿ ಬಿಡಬೇಡ ಎಂದು ಬೆದರಿಸಿರುವ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಆರೋಪ ಸಾಬೀತಾಗಿರುವ ಹಿನ್ನೆಲೆ ಹಾಸನ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನ ಪ್ರೊಫೆಸರ್ ಡಾ.ಹೆಚ್ ಸಿ ಲೋಕೇಶ್​ನನ್ನು ಅಮಾನತುಗೊಳಿಸಲಾಗಿದೆ. ಜತೆಗೆ ಇಲಾಖೆಯ ವಿಚಾರಣೆ ನಡೆಸುವಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದಾರೆ. 3 ವಾರಗಳಲ್ಲಿ ಪ್ರಕರಣದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

ತರಬೇತಿಯಲ್ಲಿದ್ದ ಕೆಲಸ ನಿರತ ವೈದ್ಯೆ ಮೇಲೆ ಜನವರಿ 12ರಂದು ಆರೋಪಿ ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಜನವರಿ 13ಕ್ಕೆ ಸಂತ್ರಸ್ತ ವೈದ್ಯ ವಿದ್ಯಾರ್ಥಿನಿ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಮಾಹಿತಿ ನೀಡಿದ್ದಾರೆ. ಹಿಮ್ಸ್ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಆರ್ ಎಂ ಸುರೇಶ್ ಪ್ರಕರಣದ ಬಗ್ಗೆ ಕೂಲಂಕುಷ ವಿಚಾರಣೆ ನಡೆಸುತ್ತಿದ್ದಾರೆ.

ಜನವರಿ 13ರಂದು ಮಹಿಳಾ ಸಿಬ್ಬಂದಿ ಉಪಸ್ಥಿತಿಯಲ್ಲಿ ಸಂತ್ರಸ್ತೆ ಹೇಳಿಕೆ ಪಡೆದು ವಿಚಾರಣೆ ನಡೆಸಲಾಗಿದೆ. ಜನವರಿ 14ರಂದು ಹಿಮ್ಸ್ ನಿರ್ದೇಶಕರಿಗೆ ಈ ಬಗ್ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಾ.ಆರ್ ಎಮ್ ಸುರೇಶ್ ಕೋರಿದ್ದರು. ಜನವರಿ 19ರಂದು ಆರೋಪಿಯನ್ನು ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

ಲಿಫ್ಟ್​ನಲ್ಲಿ ವಿದ್ಯಾರ್ಥಿ ಹಣೆಗೆ ಮುತ್ತಿಟ್ಟ ಆರೋಪಿ: ವೈದ್ಯೆ ವಿದ್ಯಾರ್ಥಿನಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಆರೋಪಿ ಓರ್ವ ವಿದ್ಯಾರ್ಥಿನಿ ಮೇಲೆ ಬೇರೆ ವಿದ್ಯಾರ್ಥಿಗಳ ಎದುರೇ ದೇಹ ಸ್ಪರ್ಶ ಮಾಡಿದ್ದಾನೆ. ಅನುಚಿತ ವರ್ತನೆ ಬಳಿಕ ಸಂಜೆ 5ಕ್ಕೆ ಅದೇ ಯುವ ವಿದ್ಯಾರ್ಥಿನಿ ಕರೆದು ಬಲವಂತವಾಗಿ ಚುಂಬಿಸಿದ್ದನಂತೆ. ಲಿಫ್ಟ್​ನಲ್ಲಿ ಯಾರೂ ಇಲ್ಲದಿದ್ದಾಗ ವಿದ್ಯಾರ್ಥಿನಿ ಹಣೆ, ಕುತ್ತಿಗೆ ಭಾಗಕ್ಕೆ ಬಲವಂತವಾಗಿ ಮುತ್ತಿಟ್ಟಿದ್ದನಂತೆ. ಲೈಂಗಿಕ ಕಿರುಕುಳ ನಡೆಸಿದ್ದಲ್ಲದೇ ಖಾಲಿ ಕೋಣೆಗೆ ಬಾ ಅಂತಾ ದುಂಬಾಲು ಬಿದ್ದಿದ್ದನಂತೆ.

ತಾನು ಬರಲ್ಲ ಎಂದ ವೈದ್ಯೆ ವಿದ್ಯಾರ್ಥಿನಿಗೆ ನೀನು ದೂರು ಕೊಟ್ಟರೆ ನಿನ್ನ ಮರ್ಯಾದೆ ಹೋಗುತ್ತೆ ಅಂತಾ ಹೇಳಿದ್ದನಂತೆ. ವಿಚಾರಣೆ ವೇಳೆ ಸಂತ್ರಸ್ತ ವಿದ್ಯಾರ್ಥಿನಿ ಈ ಎಲ್ಲ ಮಾಹಿತಿಯನ್ನು ನೀಡಿದ್ದಾರೆ.

ಡಾ.ಲೋಕೇಶ್ ಎಂಬುವವರ ವಿರುದ್ಧ ದೂರು ಬಂದಿದ್ದು, ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿಯವರು ಲೋಕೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಆಂತರಿಕ ದೂರು ಮಹಿಳಾ ಸಮಿತಿಯಲ್ಲೂ ತನಿಖೆ ನಡೆಯುತ್ತೆ. ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ. ಪಿಜಿ ನರ್ಸಿಂಗ್ ವೈದ್ಯೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ದೂರು ಬಂದಿದೆ. ಮೂರು ವಾರದೊಳಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ತನಿಖೆ ನಡೆಸಿ ವರದಿ ಸಲ್ಲಿಸುತ್ತೇವೆ. ಈ ಬಗ್ಗೆ ಈ ವರೆಗೆ ಯಾವುದೇ ದಾಖಲೆ ಆಗಲಿ ದೂರಾಗಲಿ ನಮಗೆ ನೀಡಿಲ್ಲ. ತನಿಖೆಗೆ ನೇಮಕ ಮಾಡಿರುವ ಆದೇಶ ನಿನ್ನೆ ಬಂದಿದೆ ಅಂತ ತನಿಖಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಹೇಳಿದರು.

ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ

ಇದನ್ನೂ ಓದಿ

ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಸರಿ, ಬಿಳಿ, ಹಸಿರಿನ ಮೇಕಪ್​ ಹೀಗಿರಲಿ; ಇಲ್ಲಿದೆ ಸಿಂಪಲ್​ ಟಿಪ್ಸ್​​

Air India: ಟಾಟಾ ಸಮೂಹಕ್ಕೆ ಜನವರಿ 27ನೇ ತಾರೀಕಿನಂದು ಏರ್​ ಇಂಡಿಯಾದ ಹಸ್ತಾಂತರ ಸಾಧ್ಯತೆ

Follow us on

Related Stories

Most Read Stories

Click on your DTH Provider to Add TV9 Kannada