AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಟಾಟಾ ಸಮೂಹಕ್ಕೆ ಜನವರಿ 27ನೇ ತಾರೀಕಿನಂದು ಏರ್​ ಇಂಡಿಯಾದ ಹಸ್ತಾಂತರ ಸಾಧ್ಯತೆ

ಏರ್​ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಯು ಜನವರಿ 27ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Air India: ಟಾಟಾ ಸಮೂಹಕ್ಕೆ ಜನವರಿ 27ನೇ ತಾರೀಕಿನಂದು ಏರ್​ ಇಂಡಿಯಾದ ಹಸ್ತಾಂತರ ಸಾಧ್ಯತೆ
ರತನ್ ಟಾಟಾ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jan 25, 2022 | 11:28 AM

Share

ಈ ವಾರಾಂತ್ಯದ ಹೊತ್ತಿಗೆ (ಜನವರಿ 27) ಏರ್​ ಇಂಡಿಯಾವನ್ನು (Air India) ಸರ್ಕಾರವು ಟಾಟಾ ಸಮೂಹಕ್ಕೆ (Tata Group) ಹಸ್ತಾಂತರಿಸುವ ಸಾಧ್ಯತೆ ಇದೆ. ಜನವರಿ 27ರ ಹೊತ್ತಿಗೆ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ, ಎಂದು ಸೋಮವಾರದಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂಬುದಾಗಿ ಎನ್​ಡಿಟಿವಿ ವರದಿ ಮಾಡಿದೆ. “ಏರ್​ ಇಂಡಿಯಾದ ಬಂಡವಾಳ ಹಿಂತೆಗೆತವನ್ನು ಜನವರಿ 27ಕ್ಕೆ ನಿರ್ಧರಿಸಲಾಗಿದೆ. ಜನವರಿ 20ನೇ ತಾರೀಕಿಗೆ ಅನ್ವಯ ಆಗುವಂತೆ ಮುಕ್ತಾಯದ ಬ್ಯಾಲೆನ್ಸ್​ ಶೀಟ್​ ಅನ್ನು ಜನವರಿ 24ಕ್ಕೆ ಒದಗಿಸಲಾಗುವುದು. ಆ ಮೂಲಕ ಟಾಟಾ ಸಮೂಹದಿಂದ ಅದರ ಪರಿಶೀಲನೆ ಮಾಡಬಹುದು. ಏನಾದರೂ ಬದಲಾವಣೆಗಳು ಇದ್ದಲ್ಲಿ ಬುಧವಾರದಂದು (ಜನವರಿ 25) ಜಾರಿಗೆ ಬರುತ್ತದೆ,” ಎಂದು ಏರ್​ ಇಂಡಿಯಾ ಹಣಕಾಸು ನಿರ್ದೇಶಕರಾದ ವಿನೋದ್ ಹೆಜಮಾಡಿ ಅವರು ಉದ್ಯೋಗಿಗಳಿಗೆ ಕಳುಹಿಸಿರುವ ಇಮೇಲ್​ನಲ್ಲಿ ತಿಳಿಸಿದ್ದಾರೆ.

“ಬಂಡವಾಳ ಹಿಂತೆಗೆತದ ಪ್ರಕ್ರಿಯೆಗೆ ನಾವು ಬೆಂಬಲ ನೀಡುತ್ತಾ ಇಲ್ಲಿಯವರೆಗೆ ಅಮೋಘವಾಗಿ ನಮ್ಮ ಕೆಲಸ ಮಾಡಿದ್ದೇವೆ. ಮುಂದಿನ ಮೂರು ದಿನಗಳು ನಮ್ಮ ಇಲಾಖೆಗೆ ಭಾರೀ ಕೆಲಸ ಇರುತ್ತದೆ ಮತ್ತು ಬಂಡವಾಳ ಹಿಂತೆಗೆತದ ಈ ಮೂರ್ನಾಲ್ಕು ದಿನಗಳು ನಿಮ್ಮಿಂದ ನೀಡುವುದಕ್ಕೆ ಸಾಧ್ಯವಿರುವ ಅತ್ಯುತ್ತಮ ಕೊಡುಗೆಯನ್ನು ನೀಡಬೇಕು ಅಂತ ಕೇಳಿಕೊಳ್ಳುತ್ತೇನೆ,” ಎಂದು ಹೆಜಮಾಡಿ ಹೇಳಿದ್ದಾರೆ. ಸಿಬ್ಬಂದಿಯ ಸಹಕಾರವನ್ನು ಕೋರುತ್ತಾ, “ನಮಗೆ ನೀಡಿರುವ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ನಾವು ತಡರಾತ್ರಿಗಳಲ್ಲೂ ಕೆಲಸ ಮಾಡಬೇಕಾಗಬಹುದು. ಆದ್ದರಿಂದ ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಕಾರ ಕೋರುತ್ತಿದ್ದೇನೆ,” ಎಂದಿದ್ದಾರೆ.

ಏರ್​ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಒಂದು ವೇಳೆ ಯಾವುದಾದರೂ ಕಾರಣಕ್ಕೆ ಬಂಡವಾಳ ಹಿಂತೆಗೆತ ಪ್ರಕ್ರಿಯೆಯು ಜನವರಿ 27ರಿಂದ ಮುಂದಕ್ಕೆ ಹೋದರೆ ಆ ನಂತರ ತಿಂಗಳ ಕೊನೆಯ ತನಕ ಮಾಡಬೇಕಾಗುತ್ತದೆ ಎಂದಿದ್ದಾರೆ. ಟಾಟಾ ಸನ್ಸ್​ ಪ್ರೈವೇಟ್ ಲಿಮಿಟೆಡ್​ನ ಸಂಪೂರ್ಣ ಒಡೆತನದ ಟಾಲೆಸ್ ಪ್ರೈವೇಟ್ ಲಿಮಿಟೆಡ್ ಕಳೆದ ವರ್ಷ ಸರ್ಕಾರಿ ಒಡೆತನದ ಏರ್​ ಇಂಡಿಯಾದಲ್ಲಿ ಶೇ 100ರಷ್ಟು ಈಕ್ವಿಟಿ ಪಾಲನ್ನು ಖರೀದಿಸಲು ಯಶಸ್ವಿಯಾಗಿತ್ತು. ಇದರ ಜತೆಗೆ ಏರ್​ ಇಂಡಿಯಾದ ಷೇರಿನ ಪಾಲು ಹೊಂದಿರುವ AIXL ಮತ್ತು ಏರ್ ಇಂಡಿಯಾ SATS ಏರ್​ಪೋರ್ಟ್​ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (AISATS) ಸಹ ಖರೀದಿಸಿತು.

ಇದನ್ನೂ ಓದಿ: ಏರ್ ಇಂಡಿಯಾ ಹೂಡಿಕೆ ಹಿಂಪಡೆಯುವಿಕೆ ವಿರುದ್ಧ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್​

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ