Pradhan Mantri Vaya Vandana Yojana: ಹಿರಿಯ ನಾಗರಿಕರಿಗೆ ವರ್ಷಕ್ಕೆ 1.11 ಲಕ್ಷ ರೂ. ಪೆನ್ಷನ್ ಬರಬಹುದಾದ ಸ್ಕೀಮ್ ಇದು
ಹಿರಿಯ ನಾಗರಿಕರಿಗಾಗಿ ಇರುವ ಈ ಯೋಜನೆ ಮೂಲಕ ವರ್ಷಕ್ಕೆ 1.11 ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆಯಬಹುದು. ಈ ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಹಿರಿಯ ನಾಗರಿಕರಿಗೆ ಇರುವ ಸಾಮಾಜಿಕ ಭದ್ರತಾ ಯೋಜನೆಯಾದ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) ಖರೀದಿ ಬೆಲೆ/ಚಂದಾದಾರಿಕೆ ಮೊತ್ತದ ಮೇಲೆ ಖಚಿತ ಆದಾಯದ ಆಧಾರದ ಖಚಿತವಾದ ಕನಿಷ್ಠ ಪಿಂಚಣಿ ನೀಡುವ ಉದ್ದೇಶದಿಂದ ರೂಪುಗೊಂಡಿದೆ. 2020ರ ಜೂನ್ನಲ್ಲಿ ಕೇಂದ್ರ ಸಂಪುಟವು ಪ್ರಧಾನ ಮಂತ್ರಿ ವಯ ವಂದನಾ ಯೋಜನೆಯನ್ನು ಮಾರ್ಚ್ 31, 2023ರ ವರೆಗೆ, ಅಂದರೆ 31 ಮಾರ್ಚ್ 2020ರ ನಂತರದ ಮೂರು ವರ್ಷಗಳವರೆಗೆ ವಿಸ್ತರಿಸುವುದಾಗಿ ಘೋಷಣೆ ಮಾಡಿತು.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಪಿಂಚಣಿ ಪ್ರಯೋಜನಗಳು ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC)ಗೆ ಸರ್ಕಾರದ ಖಾತ್ರಿಯ ಆಧಾರದ ಮೇಲೆ ಚಂದಾದಾರಿಕೆ ಮೊತ್ತಕ್ಕೆ ಜೋಡಣೆ ಮಾಡಲಾದ ಖಚಿತವಾದ ಪಿಂಚಣಿ/ರಿಟರ್ನ್ ಒದಗಿಸುವ ಮೂಲಕ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ಆದಾಯ ಭದ್ರತೆಯನ್ನು ಈ ಯೋಜನೆಯು ಒದಗಿಸುತ್ತದೆ. ಈ ಯೋಜನೆಯ ಅಡಿಯಲ್ಲಿ ಹೂಡಿಕೆಯ ಗರಿಷ್ಠ ಮಿತಿ 15 ಲಕ್ಷ ರೂಪಾಯಿಗಳಾಗಿದ್ದು, ಮಾಸಿಕ ಪಿಂಚಣಿ 10,000 ರೂಪಾಯಿ. ಈ ಯೋಜನೆಯು 10 ವರ್ಷಗಳವರೆಗೆ ವಾರ್ಷಿಕ ಶೇ 8ರಷ್ಟು ಖಚಿತವಾದ ಆದಾಯ ಒದಗಿಸುತ್ತದೆ.
ಡಿಫರೆನ್ಷಿಯಲ್ ರಿಟರ್ನ್, ಅಂದರೆ ಎಲ್‌ಐಸಿಯಿಂದ ಉತ್ಪತ್ತಿ ಆಗುವ ಆದಾಯ ಮತ್ತು ವಾರ್ಷಿಕವಾಗಿ ಶೇ 8ರಷ್ಟು ಖಚಿತವಾದ ಆದಾಯದ ಮಧ್ಯೆ ವ್ಯತ್ಯಾಸವನ್ನು ವಾರ್ಷಿಕ ಆಧಾರದ ಮೇಲೆ ಭಾರತ ಸರ್ಕಾರವು ಸಬ್ಸಿಡಿಯಾಗಿ ಭರಿಸುತ್ತದೆ. ಖರೀದಿ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಮಾಸಿಕ/ತ್ರೈಮಾಸಿಕ/ಅರ್ಧವಾರ್ಷಿಕ/ವಾರ್ಷಿಕ ಆಧಾರದಲ್ಲಿ 10 ವರ್ಷಗಳ ಪಾಲಿಸಿ ಅವಧಿಯಲ್ಲಿ ಪ್ರತಿ ಅವಧಿಯ ಅಂತ್ಯದಲ್ಲಿ ಪಿಂಚಣಿ ಪಾವತಿಸಲಾಗುತ್ತದೆ. ವಾರ್ಷಿಕ 12,000 ರೂಪಾಯಿಗಳ ಪೆನ್ಷನ್ಗಾಗಿ ಕನಿಷ್ಠ ಹೂಡಿಕೆ 1,56,658 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ ಮತ್ತು ಈ ಯೋಜನೆಯಡಿ ತಿಂಗಳಿಗೆ ಕನಿಷ್ಠ 1000 ರೂಪಾಯಿಗಳ ಪಿಂಚಣಿ ಮೊತ್ತವನ್ನು ಪಡೆಯಲು ಯೋಜನೆ ಅಡಿಯಲ್ಲಿ 1,62,162 ರೂಪಾಯಿಗಳಿಗೆ ಪರಿಷ್ಕರಿಸಲಾಗಿದೆ.
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಕನಿಷ್ಠ ಮತ್ತು ಗರಿಷ್ಠ ಖರೀದಿ ಬೆಲೆ ಒಂದು ದೊಡ್ಡ ಮೊತ್ತದ ಇಡಿಗಂಟಿನ ಖರೀದಿ ಬೆಲೆಯನ್ನು ಪಾವತಿಸುವ ಮೂಲಕ ಯೋಜನೆ ಖರೀದಿಸಬಹುದು. ಪಿಂಚಣಿದಾರರಿಗೆ ಪಿಂಚಣಿ ಮೊತ್ತ ಅಥವಾ ಖರೀದಿ ಬೆಲೆಯನ್ನು ಆಯ್ಕೆ ಮಾಡಲು ಅವಕಾಶವಿದೆ. ಪಿಂಚಣಿಯ ವಿವಿಧ ವಿಧಾನಗಳ ಅಡಿಯಲ್ಲಿ ಕನಿಷ್ಠ ಮತ್ತು ಗರಿಷ್ಠ ಖರೀದಿ ಬೆಲೆ ಈ ಕೆಳಗಿನಂತಿರುತ್ತದೆ:
ಕನಿಷ್ಠ ಗರಿಷ್ಠ ಪಿಂಚಣಿ ವಿಧಾನ; ಕನಿಷ್ಠ ಖರೀದಿ ಬೆಲೆ ಗರಿಷ್ಠ ಖರೀದಿ ಬೆಲೆ ವಾರ್ಷಿಕ- ರೂ. 1,56,658 ರೂ. 14,49,086 ಅರ್ಧವಾರ್ಷಿಕ- ರೂ. 1,59,574 ರೂ. 14,76,064 ತ್ರೈಮಾಸಿಕ- ರೂ. 1,61,074 ರೂ. 14,89,933 ಮಾಸಿಕ- ರೂ. 1,62,162 ರೂ. 15,00,000
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಅರ್ಹತಾ ಷರತ್ತುಗಳು, ಗರಿಷ್ಠ, ಕನಿಷ್ಠ ಪಿಂಚಣಿ ಮೊತ್ತ ಎ) ಕನಿಷ್ಠ ಪ್ರವೇಶ ವಯಸ್ಸು: 60 ವರ್ಷಗಳು (ಪೂರ್ಣಗೊಂಡಿರಬೇಕು)
ಬಿ) ಗರಿಷ್ಠ ಪ್ರವೇಶ ವಯಸ್ಸು: ಯಾವುದೇ ಮಿತಿಯಿಲ್ಲ
ಸಿ) ಪಾಲಿಸಿ ಅವಧಿ: 10 ವರ್ಷಗಳು
d) ಕನಿಷ್ಠ ಪಿಂಚಣಿ: ತಿಂಗಳಿಗೆ 1,000 ರೂ. ಪ್ರತಿ ತ್ರೈಮಾಸಿಕಕ್ಕೆ 3,000 ರೂ.
ಅರ್ಧ ವರ್ಷಕ್ಕೆ 6,000 ರೂ.
ವರ್ಷಕ್ಕೆ 12,000 ರೂ
ಇ) ಗರಿಷ್ಠ ಪಿಂಚಣಿ : ತಿಂಗಳಿಗೆ 9,250 ರೂ.
ಪ್ರತಿ ತ್ರೈಮಾಸಿಕಕ್ಕೆ 27,750 ರೂ
ಅರ್ಧ ವರ್ಷಕ್ಕೆ 55,500 ರೂ
ವರ್ಷಕ್ಕೆ 1,11,000 ರೂ
ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಮೇಲಿನ ತೆರಿಗೆ ಈ ಯೋಜನೆಯು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ಪಡೆದಿದೆ. ಯೋಜನೆಯಲ್ಲಿ ಮಾಡಿದ ಠೇವಣಿಗಳಿಗೆ ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆದರೆ ಠೇವಣಿಯ ಮೇಲೆ ಗಳಿಸಿದ ಬಡ್ಡಿಯು ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿಲ್ಲ. ಮೂಲದಲ್ಲಿ ತೆರಿಗೆ ಕಡಿತದ ನಿಬಂಧನೆಗಳು (TDS) ಯೋಜನೆಗೆ ಅನ್ವಯಿಸುತ್ತವೆ.
ಇದನ್ನೂ ಓದಿ: Post Office Scheme: ಪೋಸ್ಟ್ ಆಫೀಸ್ನ ಈ ಸ್ಕೀಮ್ನಲ್ಲಿ 50 ಸಾವಿರ ರೂಪಾಯಿ ಇಟ್ಟರೆ 3300 ರೂ. ಪೆನ್ಷನ್
Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ