Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ

ಇನ್ನು ಮುಂದೆ ಇಪಿಎಫ್​ಒ ಪಿಂಚಣಿಯು ನಿರ್ದಿಷ್ಟ ದಿನಾಂಕಕ್ಕೆ ಮುಂಚಿತವಾಗಿಯೇ ಪಿಂಚಣಿ ಖಾತೆದಾರರ ಖಾತೆಗೆ ಜಮೆ ಆಗುತ್ತದೆ. ಈ ಹೊಸ ನಿಯಮದ ಬಗ್ಗೆ ವಿವರ ಇಲ್ಲಿದೆ.

Pension Rule: ಪೆನ್ಷನ್ ನಿಯಮದಲ್ಲಿ ಭಾರೀ ಬದಲಾವಣೆ; ಇನ್ಮುಂದೆ ಈ ದಿನಕ್ಕೂ ಮೊದಲೇ ಖಾತೆಗೆ ಬರಲಿದೆ ಪಿಂಚಣಿ
ಸಾಂದರ್ಭಿಕ ಚಿತ್ರ
Follow us
| Updated By: Praveen Sahu

Updated on:Jan 20, 2022 | 10:56 PM

ಪಿಂಚಣಿದಾರರು ಸಮಯಕ್ಕೆ ಸರಿಯಾಗಿ ತಮ್ಮ ಪೆನ್ಷನ್ ತಲುಪದಿರುವ ಬಗ್ಗೆ ಹೇಳಿಕೊಂಡಿದ್ದ ದೂರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್​ಒ (Employees Provident Fund Organisation) ಗಮನ ಹರಿಸಿದೆ. ಇದು ನಿರ್ದಿಷ್ಟವಾಗಿ ಎಂಪ್ಲಾಯೀಸ್ ಪೆನ್ಷನ್ ಸ್ಕೀಮ್ ಅಥವಾ ಇಪಿಎಸ್​ ಅಡಿ ನೋಂದಣಿ ಆದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಆಗಿದೆ. ಮಾರ್ಗದರ್ಶಿ ಸೂತ್ರದ ಪ್ರಕಾರ, ಪ್ರತಿ ವೇತನದಾರರು ಯಾರೆಲ್ಲ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಪಡೆಯುತ್ತಾರೋ ಅಂಥವರು ಇಪಿಎಸ್ ನೀತಿಯಲ್ಲಿ ಬರುತ್ತಾರೆ. ಆದರೂ ಈಚೆಗೆ ಪೆನ್ಷನ್​ದಾರರ ಖಾತೆಗೆ ಯಾವಾಗ ಈ ಹಣ ಕ್ರೆಡಿಟ್ ಆಗುತ್ತದೋ ಇಪಿಎಫ್​ಒ ಮಾರ್ಗದರ್ಶಿ ಸೂತ್ರ ಈಚೆಗೆ ಬದಲಾಯಿಸಿತು. ಏಕೆಂದರೆ ಸಮಯಕ್ಕೆ ಸರಿಯಾಗಿ ತಮ್ಮ ಪಿಂಚಣಿ ಪಡೆಯುವುದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ಇಪಿಎಫ್​ಒ ಗಮನಕ್ಕೆ ಬಂದಿತ್ತು.

ಇಪಿಎಫ್​ಒದಿಂದ ಈ ವರ್ಷ ಜನವರಿ 13ನೇ ತಾರೀಕಿನಂದು ಸುತ್ತೋಲೆ ಹೊರಡಿಸಲಾಯಿತು. ಅದರಲ್ಲಿ ಹೇಳಿರುವಂತೆ, ಇಪಿಎಸ್ 95 ಪಿಂಚಣಿದಾರ ಖಾತೆಗಳಿಗೆ ಪ್ರತಿ ತಿಂಗಳ ಕೊನೆ ವರ್ಕಿಂಗ್ ಡೇ ಒಳಗೆ ಕ್ರೆಡಿಟ್ ಮಾಡಿರಬೇಕು. ಪಿಂಚಣಿ ವಿತರಣೆ ಪ್ರಾಧಿಕಾರದ ಜತೆಗಿನ ಪ್ರಸ್ತುತ ಒಪ್ಪಂದದಂತೆ, ಪೆನ್ಷನ್ ಅನ್ನು ತಿಂಗಳ ಮೊದಲ ವರ್ಕಿಂಗ್ ಡೇ ಕ್ರೆಡಿಟ್ ಮಾಡಲಾಗುವುದು ಅಥವಾ ಯಾವುದೇ ಕಾರಣಕ್ಕೂ ತಿಂಗಳ 5ನೇ ದಿನವನ್ನೂ ದಾಟಿಸುವುದಿಲ್ಲ. ಆದರೆ ಜನವರಿ 13ರ ಸುತ್ತೋಲೆಯಲ್ಲಿ ಇಪಿಎಫ್​ಒ ತಿಳಿಸಿರುವಂತೆ, ಈ ವಿಷಯದ ಬಗೆಗಿನ ಕಾಳಜಿಯನ್ನು ಪರಾಮರ್ಶಿಸಲಾಗಿದೆ.

“ಈ ವಿಚಾರವನ್ನು ಪಿಂಚಣಿ ವಿಭಾಗದಿಂದ ಪರಿಶೀಲನೆ ಮಾಡಲಾಗಿದೆ ಹಾಗೂ ಆರ್​ಬಿಐ ಸೂಚನೆಯನ್ನು ಗಮನದಲ್ಲಿ ಇಟ್ಟುಕೊಂಡು, ಎಲ್ಲ ಕ್ಷೇತ್ರಾಧಿಕಾರಿಗಳು ಬ್ಯಾಂಕ್ ರಿಕನ್ಸಿಲಿಯೇಷನ್ ಸ್ಟೇಟ್​ಮೆಂಟ್​ಗಳನ್ನು ಬ್ಯಾಂಕ್​ಗಳಿಗೆ ಹೇಗೆ ಕಳುಹಿಸಬೇಕು ಅಂದರೆ, ಪಿಂಚಣಿದಾರರ ಖಾತೆಗೆ ಪಿಂಚಣಿಯು ಆಯಾ ತಿಂಗಳ ಕೊನೆ ವರ್ಕಿಂಗ್ ಡೇಗೂ ಮೊದಲು ಕ್ರೆಡಿಟ್​ ಆಗಿದೆ ಎಂಬುದನ್ನು ಖಾತ್ರಿಪಡಿಸಬೇಕು (ಮಾರ್ಚ್​ ತಿಂಗಳು ಇದಕ್ಕೆ ಹೊರತಾಗಿದ್ದು, ಆ ತಿಂಗಳದು ಏಪ್ರಿಲ್ 1 ಅಥವಾ ಆ ನಂತರ ಕ್ರೆಡಿಟ್ ಮಾಡಬಹುದು),” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

“”ಇನ್ನೂ ಮುಂದುವರಿದು, ಇದೇ ವೇಳೆ ಖಾತ್ರಿ ಪಡಿಸಬೇಕಾದ ಮತ್ತೊಂದು ಸಂಗತಿ ಏನೆಂದರೆ, ವಾಸ್ತವ ಪೆನ್ಷನ್​ ಅನ್ನು ಆಯಾ ವಿತರಣೆ ಬ್ಯಾಂಕ್​ಗಳಿಗೆ ಪೆನ್ಷನ್ ಖಾತೆಗಳಿಗೆ ಕ್ರೆಡಿಟ್ ಆಗಬೇಕಾದ ಎರಡು ದಿನಕ್ಕೆ ಮೊದಲು ಕಳುಹಿಸಬಾರದು,” ಎಂದು ಕೇಂದ್ರ ಸರ್ಕಾರದ ಬೆಂಬಲ ಇರುವ ಇಪಿಎಫ್​ಒ ಸುತ್ತೋಲೆಯಲ್ಲಿ ಹೇಳಿದೆ. ಇದರ ಪ್ರಕಾರವಾಗಿ ಮೇಲ್ಕಂಡ ಸೂಚನೆಗಳನ್ನು ಕಡ್ಡಾಯ ನಿಯಮಾವಳಿ ಎಂಬಂತೆ ಪರಿಗಣನೆಗೆ ತೆಗೆದುಕೊಂಡು, ಎಲ್ಲ ಕಚೇರಿಗಳು ಅಗತ್ಯ ಮಾರ್ಗದರ್ಶನ/ನಿರ್ದೇಶನವನ್ನು ಪಿಂಚಣಿ ವಿತರಣೆ ಬ್ಯಾಂಕ್​ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಅನುಷ್ಠಾನ ಖಾತ್ರಿಗೆ ಸಲಹೆ ನೀಡಬೇಕು ಎನ್ನಲಾಗಿದೆ. ಪ್ರತಿ ತಿಂಗಳು ಈ ಪೆನ್ಷನ್ ಮೇಲೆ ಅವಲಂಬಿತರಾಗಿರುವ ಪಿಂಚಣಿದಾರರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.

ಈ ಹಿಂದೆಯೇ ಹೇಳಿದಂತೆ ಯಾರೆಲ್ಲ ಇಪಿಎಫ್ ಸದಸ್ಯರೋ ಅವರು ಇಪಿಎಸ್​ಗೆ ಅರ್ಹರು. ಯಾರೆಲ್ಲ ಸಿಬ್ಬಂದಿ ತಿಂಗಳಿಗೆ ಮೂಲವೇತನ ಮತ್ತು ತುಟ್ಟಿ ಭತ್ಯೆ 15 ಸಾವಿರ ಅಥವಾ ಅದಕ್ಕಿಂತ ಕಡಿಮೆ ಗಳಿಸುತ್ತಾರೋ ಅಂಥವರು ಕಡ್ಡಾಯವಾಗಿ ಎಂಪ್ಲಾಯೀಸ್ ಪೆನ್ಷನ್ ಸ್ಕೀಮ್ ಸೇರ್ಪಡೆ ಆಗಬೇಕು. ಎಲ್ಲ ಖಾಸಗಿ ವಲಯದ ಉದ್ಯೋಗಿಗಳು 58 ವರ್ಷ ತುಂಬಿದ ಮೇಲೆ ಈ ಯೋಜನೆ ಅಡಿಯಲ್ಲಿ ಪೆನ್ಷನ್ ಪಡೆಯುತ್ತಾರೆಯೇ ಎಂಬುದನ್ನು ಇದು ಖಾತ್ರಿಪಡಿಸುತ್ತದೆ. ಪ್ರತಿ ತಿಂಗಳು ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆ ವೇತನದ ತಲಾ ಶೇ 12ರಷ್ಟು ಪ್ರಾವಿಡೆಂಟ್ ಫಂಡ್ ಅಥವಾ ಇಪಿಎಫ್​ಗೆ ಜಮೆ ಆಗುತ್ತದೆ. ಆದರೆ ಉದ್ಯೋಗಿ ಕೊಡುಗೆ ಶೇ 12ರಷ್ಟು ಸಂಪೂರ್ಣವಾಗಿ ಇಪಿಎಫ್​ಗೆ ಹೋಗುತ್ತದೆ. ಉದ್ಯೋಗದಾತರ ಶೇ 8.33ರಷ್ಟು ಕೊಡುಗೆ ಇಪಿಎಸ್​ಗೆ ಹೋಗುತ್ತದೆ.

ಇದನ್ನೂ ಓದಿ: EPFO: ಇಪಿಎಫ್​ಒದಿಂದ ಎಕ್ಸ್​ಗ್ರೇಷಿಯಾ ಮರಣ ಪರಿಹಾರ ನಿಧಿ ರೂ. 4.20 ಲಕ್ಷದಿಂದ 8 ಲಕ್ಷಕ್ಕೆ ವಿಸ್ತರಣೆ

Published On - 7:54 pm, Thu, 20 January 22