AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್

ಯುನಿಲಿವರ್ ಕಂಪೆನಿಯಿಂದ 1500 ಮ್ಯಾನೇಜ್​ಮೆಂಟ್ ಉದ್ಯೋಗದ ಕಡಿತದ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Job Cut: 1500 ಮ್ಯಾನೇಜ್​ಮೆಂಟ್ ಉದ್ಯೋಗ ಕಡಿತದ ಘೋಷಣೆ ಮಾಡಿದ ಯುನಿಲಿವರ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jan 25, 2022 | 11:38 PM

Share

ಯುನಿಲಿವರ್ (Unilever) ಮಂಗಳವಾರದಂದು ಘೋಷಣೆ ಮಾಡಿರುವಂತೆ ಸುಮಾರು 1,500 ಮ್ಯಾನೇಜ್‌ಮೆಂಟ್ ಉದ್ಯೋಗಗಳನ್ನು ಕಡಿತಗೊಳಿಸಲಿದೆ (Job Cut). ಕಂಪೆನಿಯೊಂದರ ಸ್ವಾಧೀನದ ಬಿಡ್ ವಿಫಲವಾದ ನಂತರ ಷೇರುದಾರರ ಕಳವಳವನ್ನು ನಿವಾರಿಸುವ ನಿಟ್ಟಿನಲ್ಲಿ ಕಂಪೆನಿಯು ಈ ಗುರಿಯನ್ನು ಹೊಂದಿದೆ ಮತ್ತು ಪ್ರಭಾವಿ ಹೂಡಿಕೆದಾರರು ಈ ಕನ್ಸ್ಯೂಮರ್ ಗೂಡ್ಸ್ ಕಂಪೆನಿಯಲ್ಲಿ ಪಾಲನ್ನು ಹೆಚ್ಚು ಹೊಂದಿದ್ದಾರೆ. ಪ್ರಪಂಚದಾದ್ಯಂತ ಸುಮಾರು 1,49,000 ಜನರನ್ನು ನೇಮಿಸಿಕೊಂಡಿರುವ ಡೌ ಸೋಪ್ ಮತ್ತು ಮ್ಯಾಗ್ನಮ್ ಐಸ್ ಕ್ರೀಮ್ ತಯಾರಕ ಕಂಪೆನಿಯಾದ ಯುನಿಲಿವರ್ ಮಂಗಳವಾರದಂದು ತನ್ನ ವ್ಯವಹಾರವನ್ನು ಐದು ಹೊಸ ವಿಭಾಗಗಳಾಗಿ ಆಯೋಜಿಸುವುದಾಗಿ ಹೇಳಿತು – ಸೌಂದರ್ಯ ಮತ್ತು ಯೋಗಕ್ಷೇಮ, ವೈಯಕ್ತಿಕ ಆರೈಕೆ, ಮನೆಯ ಆರೈಕೆ, ಪೋಷಣೆ ಮತ್ತು ಐಸ್ ಕ್ರೀಮ್ ಇವೇ ಆ 5 ವಿಭಾಗಗಳು.

“ನಮ್ಮ ಹೊಸ ಸಾಂಸ್ಥಿಕ ಮಾದರಿಯನ್ನು ಕಳೆದ ವರ್ಷದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಐದು ವರ್ಗ-ಕೇಂದ್ರಿತ ವ್ಯಾಪಾರ ಗುಂಪುಗಳಿಗೆ ಬದಲಾವಣೆ ಮಾಡಿಕೊಳ್ಳುವುದರಿಂದ ಗ್ರಾಹಕ ಮತ್ತು ಚಾನೆಲ್ ಟ್ರೆಂಡ್‌ಗಳಿಗೆ ಹೆಚ್ಚು ಸ್ಪಂದಿಸಲು, ಜತೆಗೆ ಸ್ಪಷ್ಟ ಹೊಣೆಗಾರಿಕೆಯೊಂದಿಗೆ ನಮಗೆ ಸಾಧ್ಯವಾಗುತ್ತದೆ,” ಎಂದು ಸಿಇಒ ಅಲನ್ ಜೋಪ್ ಹೇಳಿದ್ದಾರೆ. ಯುನಿಲಿವರ್ ಷೇರುಗಳು ಕಳೆದ ವರ್ಷದಲ್ಲಿ ಸುಮಾರು ಶೇ 13ರಷ್ಟು ಕುಸಿದಿದೆ. ಕಳೆದ ವಾರ 50 ಶತಕೋಟಿ ಪೌಂಡ್‌ಗಳಿಗೆ (67 ಶತಕೋಟಿ ಡಾಲರ್) ಗ್ಲಾಕ್ಸೊ ಸ್ಮಿತ್‌ಕ್ಲೈನ್‌ನ ಗ್ರಾಹಕ ಆರೋಗ್ಯ ವ್ಯವಹಾರವನ್ನು ಖರೀದಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕೈ ಬಿಟ್ಟಿದೆ.

ಪ್ರಭಾವಿ ಹೂಡಿಕೆದಾರ ನೆಲ್ಸನ್ ಪೆಲ್ಟ್ಜ್‌ನ ಟ್ರೈಯಾನ್ ಪಾಲುದಾರರು ವಿಶ್ವದ ಎರಡನೇ ಅತಿದೊಡ್ಡ ವೈಯಕ್ತಿಕ ಆರೈಕೆ ಉತ್ಪನ್ನಗಳ ತಯಾರಕರಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದಾರೆ ಎಂಬ ವರದಿಗಳ ನಂತರ ಈ ಪ್ರಕಟಣೆಯು ಬಂದಿದೆ.

ಇದನ್ನೂ ಓದಿ: Work From Home: 18ಕ್ಕೂ ಹೆಚ್ಚು ತಿಂಗಳ ನಂತರ ಮತ್ತೆ ಆಫೀಸಿಗೆ ಬರಬೇಕಂದರೆ ಉದ್ಯೋಗಿಗಳು- ಉದ್ಯೋಗದಾತರು ಏನಂತಾರೆ?

Published On - 11:37 pm, Tue, 25 January 22

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ