Updated on: Jan 25, 2022 | 11:55 AM
ಕಣ್ಣಿನ ಮೇಲ್ಬಾಗ ಮತ್ತು ಕೆಳಭಾಗದಲ್ಲಿ ಬಿಳಿಬಣ್ಣದ ಐಲೇನರ್ ಹಚ್ಚಿರಿ. ಣ್ಣಿನ ಕೆಳಗೆ ಬಿಳಿ ಬಣ್ಣದ ಕಾಜಲ್ ಅನ್ನು ಬಳಸಿದ ಬಳಿಕ ಲೈಟ್ ಆಗಿ ಹಸಿರು ಬಣ್ಣದ ಶೇಡ್ ನೀಡಿ. ಬಿಳಿ ಬಣ್ಣದ ಕಾಜಲ್ ನಿಮ್ಮ ಕಣ್ಣನ್ನು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಹಸಿರು ಬಣ್ಣ ನಿಮ್ಮ ಕಣ್ಣನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಸಿಂಪಲ್ ಮೆಕಪ್ ಅಂದರೆ ಕೇಸರಿ, ಬಿಳಿ, ಹಸಿರು ಬಣ್ಣಗಳಲ್ಲಿ ಕಣ್ಣುಗಳ ಮೇಲೆ ತ್ರಿವರ್ಣ ಧ್ವಜವನ್ನು ಚಿತ್ರಿಸಿಕೊಳ್ಳುವುದು. ಇದೂ ಕೂಡ ನಿಮ್ಮ ಕಣ್ಣುಗಳನ್ನು ಡಿಫರೆಂಟ್ ಆಗಿ ಕಾಣುವಂತೆ ಮಾಡುತ್ತದೆ.
ಈ ಬಾರಿ ಗಣರಾಜ್ಯೋತ್ಸವದಂದು ನೀವು ಕಣ್ಣ ಗುಡ್ಡೆಗಳನ್ನು ನೀಲಿಯಾಗಿ ಕಾಣುವಂತೆ ಮಾಡಿಕೊಳ್ಳಬಹುದು. ಬಿಳಿ ಬಣ್ಣದ ಕಾಜಲ್ ಹಚ್ಚಿರಿ. ಜತೆಗೆ ಮುಖ್ಯವಾಗಿ ತುಟಿಗಳನ್ನು ಅಂದಗೊಳಿಸಿ. ತುಟಿಗಳಿಗೆ ಬೋಲ್ಡ್ ಆರೆಂಜ್ ಬಣ್ಣದ ಲಿಪ್ಸ್ಟಿಕ್ ಹಚ್ಚಿ ಇದು ನಿಮ್ಮ ತುಟಿಗಳನ್ನು ಆಕರ್ಷಕವಾಗಿ ಕಾಣುತ್ತದೆ
ನೇಲ್ ಆರ್ಟ್ ಇತ್ತೀಚಿನ ದಿನಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ. ಹೀಗಾಗಿ ನೀವು ಈ ಬಾರಿ ಉಗುರುಗಳಿಗೂ ಕೇಸರಿ, ಬಿಳಿ, ಹಸಿರಿನ ಮೂಲಕ ಅಂದಗೊಳಿಸಿ. ಮೂರು ಬಣ್ಣಗಳಿಂದ ಉಗುರಿನ ಮೇಲೆ ಚಿತ್ರಿಸಿ ಡಿಫರೆಂಟ್ ಲುಕ್ ನೀಡಬಹುದು.
ಈ ಬಾರಿ ನೀವು ಕಣ್ಣುಗಳಿಗೆ ಮಾತ್ರವಲ್ಲ ತುಟಿಗಳಿಗೂ ಕೇಸರಿ, ಬಿಳಿ, ಹಸಿರಿನ ಬಣ್ಣವನನ್ನು ಹಚ್ಚಿ ಡಿಫರೆಂಟ್ ಆಗಿ ಕಾಣುವಂತೆ ಮಾಡಬಹುದು.
ಕಣ್ಣಿನ ಮೇಲ್ಭಾಗದಲ್ಲಿ ಕೇಸರಿ, ಬಿಳಿ, ಹಸಿರಿನ ಬಣ್ಣದ ಮೇಕಪ್ ಮೇಲೆ ಬಿಳಿ ಬಣ್ಣದ ಕಾಜಲ್ನಿಂದ ಸಣ್ಣ ಲೈನ್ ಎಳೆಯಿರಿ.