ಹಾಸನದಲ್ಲಿ ಆಗಸ್ಟ್ 30ರಿಂದ 9-10ನೇ ತರಗತಿ ಆರಂಭ; ಮೈಸೂರಿನಲ್ಲಿ ವಾರಾಂತ್ಯ ಕರ್ಫ್ಯೂವಿನಲ್ಲಿ ಬದಲಾವಣೆ ಇಲ್ಲ
ಹಾಸನದಲ್ಲಿ ಈಗಾಗಲೇ ಪಿಯುಸಿ ತರಗತಿಗಳು ಆರಂಭವಾಗಿದ್ದು, ಇದೀಗ 9 ಮತ್ತು 10ನೆ ತರಗತಿಗಳು ಸಹ ಆರಂಭವಾಗಲಿವೆ.
ಹಾಸನ: ಜಿಲ್ಲೆಯಲ್ಲಿ ಆಗಸ್ಟ್ 30ರಿಂದ 9-10ನೇ ತರಗತಿಗಳನ್ನು ಆರಂಭಿಸಲು ಜಿಲ್ಲಾಧಿಕಾರಿ ಆರ್. ಗಿರೀಶ್ ಅನುಮತಿ ನೀಡಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಕಡಿಮೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಅರ್ಧದಿನ ತರಗತಿಗಳು ನಡೆಯಲಿವೆ. ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ತರಗತಿಗಳು ನಡೆಯಲಿದ್ದು, ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12.50ರವರೆಗೆ ತರಗತಿ ನಡೆಯಲಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಪ್ರಕಟಿಸಿದ್ದಾರೆ. ಹಾಸನದಲ್ಲಿ ಈಗಾಗಲೇ ಪಿಯುಸಿ ತರಗತಿಗಳು ಆರಂಭವಾಗಿದ್ದು, ಇದೀಗ 9 ಮತ್ತು 10ನೆ ತರಗತಿಗಳು ಸಹ ಆರಂಭವಾಗಲಿವೆ.
ಮೈಸೂರು ಮಹತ್ವದ ಮಾಹಿತಿ ನಾಳೆ ಶನಿವಾರ 28/08/2021 ಹಾಗೂ ಭಾನುವಾರ 29/08/2021 ಮೈಸೂರು ಜಿಲ್ಲೆಯ ವೀಕೆಂಡ್ ಲಾಕ್‌ಡೌನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಅವಕಾಶ. ಹಾಲಿನ ಅಂಗಡಿಗಳಿಗೆ ರಾತ್ರಿ 8 ಗಂಟೆಯವರೆಗೂ ಅವಕಾಶ. ಹೋಟೆಲ್‌ನಲ್ಲಿ ಪಾರ್ಸೆಲ್‌ಗೆ ಅವಕಾಶ.
ಇದನ್ನೂ ಓದಿ:
ಹಸಿವಿನಿಂದ ತತ್ತರಿಸುತ್ತಿದೆ ಅಫ್ಘಾನಿಸ್ತಾನ; ಎಲ್ಲ 34 ಪ್ರಾಂತ್ಯಗಳಲ್ಲಿ ಭೀಕರ ಬರ
(Hassan 9th and 10th classes schools reopen by August 30th Mysuru no changes in Weekend Curfew)