ಹಾಸನ: ಆಗಿಲೆ ಗ್ರಾಮದ ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ

ಪ್ರೀತಿ ನಿರಾಕರಿಸಿದ್ದಕ್ಕೆ ಗೆಳತಿಯನ್ನೇ ಕ್ರೂರವಾಗಿ ಕೊಂದಿದ್ದಾನೆ ಪಾಗಲ್ ಪ್ರೇಮಿ. ಮಾತಾಡೋಕೆ ಕರೆದೊಯ್ದು ಕುಂತಿ ಬೆಟ್ಟ ಹತ್ತಿಸಿ, ಅಲ್ಲಿ ಕುತ್ತಿಗೆ ಸೀಳಿದ್ದವ ಅರೆಸ್ಟ್ ಆಗಿದ್ದಾನೆ. ಗೆಳೆಯನಿಂದಲೇ ಬಲಿಯಾದ ಚೆಲುವೆ ಇಂಜಿನಿಯರಿಂಗ್ ಓದುತ್ತಿದ್ದಳು . ಹಾಸನ ತಾಲ್ಲೂಕಿನ ಅಗಿಲೆ ಗ್ರಾಮದ ಸಮೀಪ ಇರೋ ಕುಂತಿ ಬೆಟ್ಟದ ತುದಿಗೆ ಕರೆದೊಯ್ದು ಸುಚಿತ್ರಾಳನ್ನ ಆಕೆಯ ಗೆಳೆಯ ತೇಜಸ್ ಎಂಬಾತನೆ ಬರ್ಬರವಾಗಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಹಾಸನ: ಆಗಿಲೆ ಗ್ರಾಮದ ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ
ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ
Follow us
ಮಂಜುನಾಥ ಕೆಬಿ
| Updated By: ಸಾಧು ಶ್ರೀನಾಥ್​

Updated on:Nov 17, 2023 | 11:21 AM

ಆಕೆ ಪ್ರತಿಭಾವಂತೆ.. ಮನೆಯಲ್ಲಿ ಬಡತನ ಇದ್ರೂ ಮಗಳು ಚೆನ್ನಾಗಿ ಓದಬೇಕು ಎನ್ನೋ ಹಂಬಲಕ್ಕೆ ಆಕೆಯೂ ಸಾಥ್​ ನೀಡಿದ್ದಳು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟ್ ಪಡೆದುಕೊಂಡು ಓದುತ್ತಿದ್ದಾಕೆ ಎಂದಿನಂತೆ ನಿನ್ನೆ ಗುರುವಾರ  ಕೂಡ ಮನೆಯಿಂದ ಕಾಲೇಜಿಗೆ ಹೊರಟಿದ್ದಳು, ಮಗಳು ಮಾಮೂಲಿಯಾಗಿ ಸಂಜೆ ಮನೆಗೆ ಮರಳುತ್ತಾಳೆಂಬ ನಿರೀಕ್ಷೆಯಲ್ಲಿದ್ದವರಿಗೆ ಬಂದಿತ್ತು ಅದೊಂದು ಬರ ಸಿಡಿಲ ಕರೆ. ಆ ಪಾಗಲ್ ಪ್ರೇಮಿ (crazy lover) ತನ್ನನ್ನು ಪ್ರೀತಿಸೋದಿಲ್ಲ ಎಂದಾಕೆಯ ಕುತ್ತಿಗೆಯನ್ನೇ ಸೀಳಿಬಿಟ್ಟಿದ್ದ. ಗೆಳೆಯನೇ ಹೀಗೆ ಪಾತಕಿ ಆಗಬಹುದು ಎಂಬ ನಿರೀಕ್ಷೆಯನ್ನೂ ಮಾಡದ ಆ ಚೆಲುವೆ ರಕ್ತದ ಮಡುವಿನಲ್ಲಿ ಉಸಿರು ಚೆಲ್ಲಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಗೆಳತಿಯನ್ನೇ ಕ್ರೂರವಾಗಿ ಕೊಂದಿದ್ದಾನೆ ಪಾಗಲ್ ಪ್ರೇಮಿ. ಮಾತಾಡೋಕೆ ಕರೆದೊಯ್ದು ಕುತ್ತಿಗೆ ಸೀಳಿದ್ದವ ಅರೆಸ್ಟ್. ಗೆಳೆಯನಿಂದಲೇ ಬಲಿಯಾದ ಇಂಜಿನಿಯರಿಂಗ್ ಚೆಲುವೆ. ಹೌದು ಹಾಸನ ಜಿಲ್ಲೆಯೆ ಬೆಚ್ಚಿಬೀಳುವಂತಾ ಬರ್ಬರ ಹತ್ಯೆಯೊಂದು ಹಾಸನ (Hassan) ತಾಲ್ಲೂಕಿನ ಅಗಿಲೆ ಗ್ರಾಮದ (Agile Village) ಸಮೀಪ ಇರೋ ಕುಂತಿ ಬೆಟ್ಟದಲ್ಲಿ ನಡೆದಿದೆ. ಬೆಟ್ಟದ ತುದಿಗೆ ಕರೆದೊಯ್ದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸುಚಿತ್ರಾ (20) ಳನ್ನ ಆಕೆಯ ಗೆಳೆಯ ತೇಜಸ್ ಎಂಬಾತನೆ ಬರ್ಬರವಾಗಿ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಎರಡನೆ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಸುಚಿತ್ರಾ ಇಂದು ಬೆಳಿಗ್ಗೆ ಮಾಮೂಲಿಯಾಗಿ ಕಾಲೇಜಿಗೆ ಹೋಗಿದ್ದಾಳೆ. ಮಧ್ಯಾಹ್ನದ ವೇಳೆಗೆ ಮಗಳ ಹತ್ಯೆಯಾಗಿರೋ ಬಗ್ಗೆ ಬಂದ ಬರ ಸಿಡಿಲಿನ ಸುದ್ದಿ ತಿಳಿದು ಸ್ಥಳಕ್ಕೆ ಹೋದ ಪೋಷಕರಿಗೆ ಮಗಳನ್ನ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿರೋದು ಪತ್ತೆಯಾಗಿದೆ. ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಕ್ರೂರಿಯನ್ನ ವಶಕ್ಕೆ ಪಡೆದುಕೊಂಡಿರೊ ಹಾಸನ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡಸುತ್ತಿದ್ದು ಪ್ರತಿಭಾವಂತೆಯನ್ನ ಕೊಂದ ನೀಚನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಪೋಷಕರು ಆಗ್ರಹಿಸಿದ್ದಾರೆ.

ಮೂಲತಃ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕವಳಗೆರೆ ಗ್ರಾಮದ ಲೋಕೇಶ್ ಹಾಗು ಪುಷ್ಪಾ ದಂಪತಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ರು, ತಾನು ಮಾಡೋದು ಡ್ರೈವರ್ ಕೆಲಸ ಮಡದಿ ಗಾರ್ಮೆಂಟ್ಸ್ ನಲ್ಲಿ ಕೂಲಿ ಮಾಡ್ತಾರೆ ಆದ್ರೆ ತನ್ನ ಮಕ್ಕಳಿಬ್ಬರು ಚನ್ನಾಗಿ ಓದಬೇಕು ಎನ್ನೋ ಮಹದಾಸೆಯಿಂದ ಹಾಸನದಲ್ಲಿ ಮನೆ ಮಾಡಿಕೊಂಡು ಮಕ್ಕಳನ್ನ ಚೆನ್ನಾಗಿ ಓದಿಸಿದ್ರು, ದೊಡ್ಡ ಮಗಳು ಸುಚಿತ್ರಾ ಕೂಡ ಚನ್ನಾಗಿ ಓದಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆದು ಚೆನ್ನಾಗಿಯೇ ಓದುತ್ತಿದ್ದಳು, ಇದೇ ಕಾಲೇಜಿನಲ್ಲಿ ಓದಿದ್ದ ಹಾಸನದವನೇ ಆದ ತೇಜಸ್ ಎಂಬಾತನ ಪರಿಚಿಯವಾಗಿ ಆತ್ಮೀಯತೆಯೂ ಇತ್ತು, ತೇಜಸ್ ಸುಚಿತ್ರಾಳನ್ನ ಇಷ್ಟಪಟ್ಟಿದ್ದನಂತೆ, ಆದ್ರೆ ನೀನು ನನಗೆ ಇಷ್ಟ ಇಲ್ಲ ಎಂದು ಸುಚಿತ್ರ ಹೇಳಿದ್ದಕ್ಕೆ ಕೆರಳಿದ್ದ ತೇಜಸ್ ಆಕೆಯನ್ನ ಮಾತನಾಡಲೆಂದು ಕುಂತಿ ಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Also Read:  ಶವ ಪತ್ತೆಯಾಗುತ್ತಿದ್ದಂತೆ ಜೀವ ಪಡೆದ ಮಿಸ್ಸಿಂಗ್ ಕೇಸ್! ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಎದುರೇ ಇನ್ನೊಂದು ಸಂಬಂಧ ಹೊಂದಿದ್ದ ಗಂಡ ಅರೆಸ್ಟ್ ಆದ

ಗುರುವಾರ ಬೆಳಿಗ್ಗೆ 11 ಗಂಟೆಗೆ ಬೈಕ್ ನಲ್ಲಿ ಕರೆದೊಯ್ದು ಬೆಟ್ಟದ ಮೇಲೆ ಕರೆದುಕೊಂಡು ಹೋಗಿದ್ದ ಪಾಪಿ ಅಲ್ಲಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದನಂತೆ, ಆದ್ರೆ ಆಕೆ ಅದಕ್ಕೆ ಒಪ್ಪದಿದ್ದಾಗ ನನಗೆ ಸಿಗದ ನೀನು ಯಾರಿಗೂ ಸಿಗೋದು ಬೇಡಾ ಎಂದು ಆಕೆಯ ಕುತ್ತಿಗೆ ಸೀಳಿದ್ದಾನೆ ಎನ್ನಲಾಗಿದೆ, ಕೊಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದವನನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಇನ್ಸಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ವೈದ್ಯಕೀಯ ಆಸ್ಪತ್ರೆಗ ಸ್ಥಳಾಂತರ ಮಾಡಿದ್ದು ಘಟನೆ ಬಗ್ಗೆ ಪೋಷಕರು ಕಣ್ಣೀರಿಡುತ್ತಿದ್ದಾರೆ.

ಒಟ್ನಲ್ಲಿ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಟ್ರೈನಿಂಗ್ ಮಾಡ್ತಿರೋ ತನ್ನ ಸೀನಿಯರ್ ಜೊತೆಗೆ ಸ್ನೇಹ ಮಾಡಿದ್ದ ಇಂಜಿನಿಯರಿಂಗ್ ಚೆಲುವೆ ಆತನನ್ನ ಇಷ್ಟಪಟ್ಟಿದ್ಲೋ ಇಲ್ಲವೋ ಗೊತ್ತಿಲ್ಲ, ಆದ್ರೆ ತೇಜಸ್ ಅಂತೂ ಆಕೆಯನ್ನ ಪ್ರೀತಿಸಿದ್ನಂತೆ ಅದಕ್ಕೆ ಹೇಳಿಕೊಳ್ಳೋಕೆ ಅಂತಾ ಕರೆದೊಯ್ದು ಆಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದಾನೆ ಎನ್ನೋ ಆರೋಪ ಕೇಳಿ ಬಂದಿದ್ದು ಆರೋಪಿಯನ್ನ ವಶಕ್ಕೆ ಪಡೆದಿರೊ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆ ಬಳಿಕ ಸತ್ಯ ಬಯಲಾಗಲಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Fri, 17 November 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ