ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ರೈತರ ಖೆಡ್ಡಾಗೆ ಬಿದ್ದ ಮರಿಯಾನೆ!

ಹೊಸಕೊಪ್ಪಲು ಗ್ರಾಮದಲ್ಲಿ ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿಯಾನೆ ಜನರೇ ತೋಡಿದ್ದ ಕಂದಕಕ್ಕೆ ಬೀಳುವ ಮೂಲಕ ಸೆರೆಸಿಕ್ಕಂತಾಗಿದೆ.

ರೈತರು-ಸರ್ಕಾರದ ಮಧ್ಯೆ ಸಂಘರ್ಷ: ಹಾಸನದಲ್ಲಿ ರೈತರ ಖೆಡ್ಡಾಗೆ ಬಿದ್ದ ಮರಿಯಾನೆ!
ಹಾಸನ: ಕಂದಕಕ್ಕೆ ಬಿದ್ದ ಮರಿ ಕಾಡಾನೆ
Follow us
TV9 Web
| Updated By: Rakesh Nayak Manchi

Updated on:Jan 02, 2023 | 10:32 AM

ಹಾಸನ: ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿ ಕಾಡಾನೆ (Baby Wild Elephant) ಜನರೇ ತೋಡಿದ್ದ ಕಂದಕ (Ditch)ಕ್ಕೆ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಉಪಟಳದಿಂದ (Menace of wild elephants) ರೋಸಿ ಹೋಗಿದ್ದ ಮಲೆನಾಡು ಭಾಗದ ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರ್ಕಾರಗಳು ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನಲೆ ಗ್ರಾಮಸ್ಥರು ಒಟ್ಟು ಸೇರಿ ಆನೆ ಸೆರೆಗೆ ದೊಡ್ಡ ಕಂದಕ ತೋಡಿದ್ದಾರೆ. ಸದ್ಯ ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಇಂದು ಮುಂಜಾನೆ ಮರಿಯಾನೆಯೊಂದು ಬಿದ್ದಿದೆ.

ಹೊಸಕೊಪ್ಪಲು ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಲೇ ಜೀವಿಸುತ್ತಿದ್ದಾರೆ. ಸರ್ಕಾರ ಶಾಶ್ವತ ಪರಿಹಾರ ನೀಡಲು ಮನಸ್ಸು ಮಾಡದ ಹಿನ್ನಲೆ ಕಾಡಾನೆ ಕೆಡವಲು ಜನರು ಕಂದಕ ತೋಡಿದ್ದರು. ಸದ್ಯ ಮರಿಯಾನೆ ಕಂದಕಕ್ಕೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: Wild Elephants Menace: ಸರ್ಕಾರಕ್ಕೆ ಸೆಡ್ಡು ಹೊಡೆದು, ಕಾಡಾನೆಯಿಂದ ಬೆಳೆ ರಕ್ಷಣೆಗಾಗಿ ಖೆಡ್ಡಾ ತೋಡಲು ಮುಂದಾದ ಹಾಸನ ರೈತರು

ಗ್ರಾಮಸ್ಥರು ಡಿ.26 ರಂದು ಕಂದಕವನ್ನು ತೋಡಿದ್ದರು. ಅದರ ಮೇಲೆ ಬಿದಿರು, ಸೊಪ್ಪು ಹಾಕಿ ಮುಚ್ಚಿ ಆನೆ ಖೆಡ್ಡಾಕ್ಕೆ ಕೆಡವಲು ಬೇಕಾದ ಎಲ್ಲಾ ತಂತ್ರ ರೂಪಿಸಿ ಸಿದ್ಧಪಡಿಸಲಾಗಿತ್ತು. ಇಂದು ಕಾಡಾನೆಯ ಮರಿಯೊಂದು ಖೆಡ್ಡಾಕ್ಕೆ ಬಿದ್ದಿದ್ದಾರೆ. ಕಾಡಾನೆ ಹಾವಳಿಯಿಂದ ಬೇಸತ್ತ ಜನರ ಪ್ರತಿರೋದಕ್ಕೆ ಅರಣ್ಯ ಇಲಾಖೆಯೂ ಬೆಚ್ಚಿಬಿದ್ದಿದೆ.

ಈ ಹಿಂದೆ ಕಾಡಾನೆಯೊಂದು ದಿಡೀರನೆ ಎದುರಿಗೆ ಬಂದ ಪರಿಣಾಮ ಬೈಕ್ ಬಿಟ್ಟು ಸವಾರ ಓಡಿ ಪ್ರಾಣ ಉಳಿಸಿಕೊಂಡ ಭಯಾನಕ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದಿತ್ತು. ರಸ್ತೆಯ ತಿರುವಿನಲ್ಲಿ ಒಂಟಿಸಲಗ ಬರುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರು ತಿರುವಿನಲ್ಲೇ ಆನೆಯನ್ನು ನೋಡಿ ವಾಹನ ಬಿಟ್ಟು ಸ್ಥಳದಿಂದ ಓಡಿಹೋಗಿದ್ದಾರೆ. ಕಾಡಾನೆ-ಯುವಕನ ವಿಡಿಯೋ ವೈರಲ್ ಆಗಿದೆ.

ಬೆಳ್ಳಂಬೆಳಗ್ಗೆ ಜಮೀನಿಗೆ ಲಗ್ಗೆ ಇಟ್ಟ ಆನೆ, ರೈತನಿಗೆ ಗಾಯ

ಚಾಮರಾಜನಗರ: ಬೆಳ್ಳಂಬೆಳಗ್ಗೆ ಆನೆಯೊಂದು ಜಮೀನಿಗೆ ಲಗ್ಗೆ ಇಟ್ಟು ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ನಡೆಸಿದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿಯಲ್ಲಿ ನಡೆದಿದೆ. ಆನೆ ದಾಳಿಯಿಂದ ಜಮೀನಿನಲ್ಲಿದ್ದ ರೈತ ದೇವರಾಜ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಸದ್ಯ ಜಮೀನನಲ್ಲಿಯೇ ಆನೆ ಬೀಡುಬಿಟ್ಟಿದ್ದು, ವಿಚಾರ ತಿಳಿಸಿದರೂ ಅರಣ್ಯಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 am, Mon, 2 January 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್