ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2023 | 5:14 PM

ನಂದಗೋಡನಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿ ಬೇಲೂರಿನ ಸೀನಿಯರ್​ ಸಿವಿಲ್ ಜಡ್ಜ್​​ ಆದೇಶ ಹೊರಡಿಸಿದೆ. ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು.

ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹಗೆ ಜಾಮೀನು
ವಿಕ್ರಂ ಸಿಂಹ
Follow us on

ಹಾಸನ, ಡಿಸೆಂಬರ್​ 31: ನಂದಗೋಡನಹಳ್ಳಿಯಲ್ಲಿ 126ಕ್ಕೂ ಹೆಚ್ಚು ಮರ ಕಡಿದು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹಗೆ ಜಾಮೀನು ನೀಡಿ ಬೇಲೂರಿನ ಸೀನಿಯರ್​ ಸಿವಿಲ್ ಜಡ್ಜ್​​ ಆದೇಶ ಹೊರಡಿಸಿದೆ. ವಿಕ್ರಂ ಪರ ವಕೀಲ ಚಂದ್ರೇಗೌಡ, ಧರ್ಮೇಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಹಾಸನ ‌ಜಡ್ಜ್​​​ ಮನೆಯಿಂದ ವಕೀಲರ ಜೊತೆ ವಿಕ್ರಂ ಸಿಂಹ ಹೊರಬಂದಿದ್ದಾರೆ.

ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಬಳಿ 126ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿತ್ತು. ವಿಕ್ರಂ ಸಿಂಹರನ್ನು ಇಂದು ಜಡ್ಜ್​​ ಮುಂದೆ ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದರು.

ಇದನ್ನೂ ಓದಿ: ವಿಕ್ರಂ ಸಿಂಹ ಬಂಧನ: ಸಂಸದ ಪ್ರತಾಪ್ ಸಿಂಹ ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಪ್ರಕರಣ ಸಬಂಧ ರಾಕೇಶ್ ಶೆಟ್ಟಿ, ಜಯಮ್ಮ ವಿರುದ್ಧ ಬೇಲೂರು ತಹಶೀಲ್ದಾರ್ ಮಮತಾ ನೀಡಿದ್ದ ದೂರು ಆಧರಿಸಿ FIR ದಾಖಲಾಗಿತ್ತು. ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪ ಹಿನ್ನೆಲೆ ವಿಕ್ರಂ ಸಿಂಹರನ್ನು ಅರೆಸ್ಟ್ ಮಾಡಲಾಗಿತ್ತು.

ವ್ಯವಸ್ಥಿತ ಪಿತೂರಿ: ವಿಕ್ರಂ ಸಿಂಹ ಕಿಡಿ

ನನ್ನ ವಿರುದ್ಧ ಎಷ್ಟು ಪಿತೂರಿ ಮಾಡ್ತಿದ್ದಾರೆ ಎಂಬುದನ್ನ ಟೈಮ್ ಬರಲಿ ಎಲ್ಲದನ್ನೂ ಹೇಳಲುತ್ತೇನೆ ಎಂದು ವಿಕ್ರಂ ಸಿಂಹ ಕಿಡಿ ಕಾರಿದ್ದಾರೆ. ಆರೋಗ್ಯ ತಪಾಸಣೆಗೆ ಕರೆತಂದ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೇಳಲು ತುಂಬಾ ವಿಷಯಗಳಿವೆ. ವ್ಯವಸ್ಥಿತವಾಗಿ ನನ್ನನ್ನ ಮುಗಿಸುವುದಕ್ಕಾಗಿ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಬ್ರದರ್​​ನ ಟಾರ್ಗೆಟ್​ ಮಾಡ್ತಿದ್ದಾರೆ, ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಪ್ರತಾಪ್ ಸಿಂಹ ಕಿಡಿ

ಪ್ರಕರಣ ಸಂಬಂಧ ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ನನ್ನ ಮುಗಿಸೋಕೆ ಎಲ್ಲಾ ಪ್ರಯತ್ನವೂ ಮಾಡುತ್ತಿದ್ದೀರಿ. ನಿಮ್ಮ ಮಗನನ್ನ ಸಂಸದನನ್ನಾಗಿ ಮಾಡಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೀರಿ. ನನ್ನ ವೃದ್ಧ ತಾಯಿ ಇದ್ದಾರೆ, ನನ್ನ ತಂಗಿ ಇದ್ದಾಳೆ ಅವರನ್ನೂ ನೀವು ಅರೆಸ್ಟ್ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:58 pm, Sun, 31 December 23