ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ: ಸಂಗೀತ ನಿರ್ದೇಶಕ ಹಂಸಲೇಖ

ಹಾಸನ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ರಾಷ್ಟ್ರಕವಿ ಕುವೆಂಪು 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಗೀತ ನಿರ್ದೇಶಕ ಹಂಸಲೇಖ, ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ. ಭಾರತ ಒಂದು ಒಕ್ಕೂಟವಾಗಿದ್ದು ಒಂದು ಪವಾಡ. ನಮಗೆ ಕನ್ನಡ ಭಾಷೆ ಹಕ್ಕಾಗಿ ಸಿಕ್ಕಿದ್ದು ಭಾಷಾವಾರು ಪ್ರಾಂತ್ಯದಿಂದ ಎಂದು ಹೇಳಿದ್ದಾರೆ.

ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ: ಸಂಗೀತ ನಿರ್ದೇಶಕ ಹಂಸಲೇಖ
ಸಂಗೀತ ನಿರ್ದೇಶಕ ಹಂಸಲೇಖ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Dec 30, 2023 | 9:56 PM

ಹಾಸನ, ಡಿಸೆಂಬರ್​ 30: ನಾವು ಇವತ್ತು ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಫೆ.28ರೊಳಗೆ ಕನ್ನಡ ನಾಮಫಲಕ ಕಡ್ಡಾಯಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಕನ್ನಡಕ್ಕೆ ಒಂದು ರೀತಿಯಲ್ಲಿ ಅಪಾಯ ಬಂದಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಹೇಳಿದ್ದಾರೆ. ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ರಾಷ್ಟ್ರಕವಿ ಕುವೆಂಪು 119ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ ಒಂದು ಕರುಳು ಇದೆ, ಆ ಕರುಳಿಗೆ ಕೊರಳಿದೆ, ಅದೇ ಕರಳು ಕೂಗಿದ ಗೀತೆಯೇ ನಮ್ಮ ನಾಡಗೀತೆ ಎಂದು ಹೇಳಿದ್ದಾರೆ.

ಹಿಂದೆಂದಿಗಿಂತಲೂ ನಾವು ಒಗ್ಗಟ್ಟಾಗಿದ್ದೇವೆ, ಒಂದಾಗಿದ್ದೇವೆ. ನಮ್ಮ ನಾಡಿನ‌ ಚಹರೆ ಏನು ಎಂದು ಗೊತ್ತಾಗಿರುವುದು ನಾಡಗೀತೆಯಿಂದ. ಭಾರತ ಒಂದು ಒಕ್ಕೂಟವಾಗಿದ್ದು ಒಂದು ಪವಾಡ. ನಮಗೆ ಕನ್ನಡ ಭಾಷೆ ಹಕ್ಕಾಗಿ ಸಿಕ್ಕಿದ್ದು ಭಾಷಾವಾರು ಪ್ರಾಂತ್ಯದಿಂದ. ಈಗ ದಿಶಾವನ್ನು ಭಾರತ ಮಾಡಲು ಎಲ್ಲಾ ಪ್ರಯತ್ನ ನಡೆಯುತ್ತಿದೆ. ಉತ್ತರ ಭಾರತದಲ್ಲಿ 700 ಲೋಕಸಭಾ ಕ್ಷೇತ್ರಗಳು ಆಗುತ್ತವೆ. ದಕ್ಷಿಣ ಭಾರತದಲ್ಲಿ ಕೇವಲ 117 ಕ್ಷೇತ್ರಗಳು ಮಾತ್ರ ಆಗುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ‘ಗೆಲೋರ್​ ಆಫ್​ ಮಿಸ್ಟ್ರಿಸ್​’ ಕೃತಿ ಬಿಡುಗಡೆ ಮಾಡಿದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಗಡೆ

ದಿಶಾ ಭಾರತ ಅಂದರೆ ಕನ್ನಡ, ತಮಿಳು, ತೆಲುಗು, ಮಲಯಾಳಂ ದಿಕ್ಕಿಲ್ಲದವರಾಗುತ್ತೇವೆ ನೆನಪಿಟ್ಟುಕೊಳ್ಳಿ.  ಒಕ್ಕೂಟ ಕೊಟ್ಟ ಕನ್ನಡದ ಹಕ್ಕಿನ ಪತ್ರವನ್ನು ಜೋಪಾನ ಮಾಡಬೇಕು. ಈ ಸಂಸ್ಥಾನ ಅತ್ಯಂತ ದೊಡ್ಡ ಸಂಸ್ಥಾನ ಧೈರ್ಯವಾಗಿ ಹೇಳುತ್ತೇನೆ. ಈ ಕ್ಷೇತ್ರದಿಂದ ಒಂದೇ ಒಂದು ವಿನಂತಿ ಮಾಡುತ್ತೇನೆ. ಆ ಸತ್ಪುರುಷನ ಅಭಯ ಎನ್ನುವ ಹೃದಯದ ಕಕ್ಷೆ ಕನ್ನಡಕ್ಕೆ ಬೇಕಾಗಿದೆ. ಈಗ ಭಾಷೆಯಿಂದ ನಮಗೆ ರಾಜ್ಯವಿರಬಹುದು ಮುಂದೆ ಬದಲಾಗಬಹುದು.

ರಾಷ್ಟ್ರಕವಿ ಕುವೆಂಪು ಅವರು ನಮ್ಮ ಚಹರೆ. ಮುಂದೆ ನಮ್ಮ‌ ನಾಡಗೀತೆ ಚಿಕ್ಕ ಚೊಕ್ಕದಾಗಿ ಕಚೇರಿಗಳಲ್ಲಿ ಸಂಗೀತಮಯವಾಗಿ, ಕೇಳುಗರಿಗೆ ಇಂಪಾಗಿ ಕರುಳಿನ ಕೊರಳಿನ ತಿರುಳು ನಾಡಿಗೆ ಪ್ರಸಿದ್ಧಿಯಾಗಲಿ. ಆ ಕವಿಯ ಮುಂದಿನ ಕೆಲಸಗಳನ್ನು ಮಾಡೋಣ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ