‘ಗೆಲೋರ್ ಆಫ್ ಮಿಸ್ಟ್ರಿಸ್’ ಕೃತಿ ಬಿಡುಗಡೆ ಮಾಡಿದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಗಡೆ
ಕುಮಾರಿ ಅಮನ ಜೆ.ಕುಮಾರ್ ಅವರ ‘ಗೆಲೋರ್ ಆಫ್ ಮಿಸ್ಟ್ರಿಸ್’ (Galore of Mysteries) ಎಂಬ ನಾಲ್ಕನೆ ಪುಸ್ತಕವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಗಡೆ ಅವರು ಶುಕ್ರವಾರ ಬಿಡುಗಡೆ ಮಾಡಿದರು.

ಬೆಂಗಳೂರು, ಡಿಸೆಂಬರ್ 29: ಕುಮಾರಿ ಅಮನ ಜೆ.ಕುಮಾರ್ ಅವರ ‘ಗೆಲೋರ್ ಆಫ್ ಮಿಸ್ಟ್ರಿಸ್’ (Galore of Mysteries) ಎಂಬ ನಾಲ್ಕನೆ ಪುಸ್ತಕವನ್ನು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಗಡೆ ಅವರು ಶುಕ್ರವಾರ ಬಿಡುಗಡೆ ಮಾಡಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರ ಸಂದೇಶವು ಈ ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಚಂದ್ರಯಾನ – 3ರ ಪ್ರಾಜೆಕ್ಟ್ ಡೈರೆಕ್ಟರ್ ಡಾ. ಪಿ.ವೀರ ಮುತ್ತುವೇಲ್ ಅವರು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ.
ಡಾ. ಲತಾ ಟಿ.ಎಸ್, ಹಾಗೂ ಜೈವಂತ್ ಕುಮಾರ್ ಅವರ ಮಗಳು ಕುಮಾರಿ ಅಮನ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಇದು ಅವರ ನಾಲ್ಕನೇ ಹಾಗೂ ಮೊದಲ ಕಾಲ್ಪನಿಕ ಬರವಣಿಗೆ (fiction writing) ಪುಸ್ತಕವಾಗಿದೆ. ಅಮನ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ ಸ್ಕೂಲ್ನಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಹಾರ್ವಡ್ ವಿಶ್ವ ವಿದ್ಯಾಲಯದಿಂದ “Masterpieces of World Literature” ಕೋರ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾಗತಿಕ ಹೆಲ್ತ್ ಕೇರ್ ಸಮ್ಮಿಟ್ ಆಯೋಜನೆ
ಅಮನರ ‘ಗೆಲೋರ್ ಆಫ್ ಮಿಸ್ಟ್ರಿಸ್’ ಪುಸ್ತಕವು, ಕವನ ಹಾಗೂ ಕಿರು ಕಥೆಗಳ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿರುತ್ತದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿದ್ದು, ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನೆಯ ಲೋಕಕ್ಕೆ ಕರೆದೊಯ್ಯುಲಿದೆ.
ಅಮನ 6ನೇ ತರಗತಿಯಲ್ಲಿದ್ದಾಗ ಇಂಗ್ಲಿಷ್ ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು, ಅವಳ ಪ್ರಥಮ ಕವನ ‘ಇಕೋಸ್ ಆಫ್ ಸೋಲ್ಫುಲ್ ಪೊಯಮ್ಸ್’ (Echoes of Soulful Poems), ಎರಡನೇಯದು ‘ವಲ್ಡ್ ಅಮಿಡಿಸ್ಟ್ ದ ವರ್ಡ್’ (World Amidst the Words) ಹಾಗೂ ‘ಲಫ್ಝೊನ್ ಕಿ ಮುಹ್ಫಿಲ್’ (Lafzon ki Mhfil) ಮೂರನೇ ಹಿಂದಿ ಕವನ ಸಂಕಲನವು ಈಗಾಗಲೇ ಅಮೇಜಾನ್, ಪ್ಲಿಪ್ ಕಾರ್ಟ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಲಭ್ಯವಿವೆ.
ಅಮನಳ ದಾಖಲೆಗಳು
- ಭಾರತದ ಕಿರಿಯ ಕವಯಿತ್ರಿ ಇಂಡಿಯಾ ಬುಕ್ ಆಪ್ ರೆಕಾಡ್ಸ್ -2021.
- ಏಷ್ಯಾ ಬುಕ್ ಆಪ್ ರೆಕಾಡ್ಸ್-2021 ಕಿರಿಯ ವಯಸ್ಸಿನಲ್ಲಿ ಕವಿತೆಗಳನ್ನು ಬರೆದಿರುವುದು.
- ಕೌಟಿಲ್ಯ ವರ್ಷದ ಕಿರಿಯ ಕವಿ ಪ್ರಶಸ್ತಿ – 2021 ಗೋವಾದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
- ನೋಬಲ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ನಲ್ಲಿ ಕಿರಿಯ ಕವಯಿತ್ರಿ ದಾಖಲೆ
- ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯ ಪ್ರವೇಶ 2022, ಸತತ ವರ್ಷಗಳಲ್ಲಿ ಕವನ ಸಂಕಲನ ಪುಸ್ತಕಗಳನ್ನು ಪ್ರಕಟಿಸಿದ ಕಿರಿಯ ಕವಿಯಿತ್ರಿ
- ಗೋಲ್ಡನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ 2022 ನಲ್ಲಿ ದಾಖಲೆ
- ವಂಡರ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ಸ್ ಕಿರಿಯ ಕವಯತ್ರಿ
- ಇಂಟರ್ನ್ಯಾಷನಲ್ ಬುಕ್ಅಪ್ ರೆಕಾರ್ಡ್ಸ್ ಕಿರಿಯ ಕವಿಯತ್ರಿ
ಇಲ್ಲಿಯವರೆಗೂ ಅಮನ ಇಂಗ್ಲಿಷ್ ಮತ್ತು ಹಿಂದಿಯಲ್ಲಿ 500 ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:48 pm, Fri, 29 December 23