ಮದ್ಯದಂಗಡಿಗಳಲ್ಲಿ ದರ ಪಟ್ಟಿ ಕಡ್ಡಾಯ ಅಳವಡಿಕೆಗೆ ಆಗ್ರಹ: ಅಧಿಕಾರಿಗೆ ಮನವಿ ಸಲ್ಲಿಸಲು ತೆರಳಿದ್ದಾಗ ವಾಗ್ವಾದ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 28, 2024 | 9:26 PM

ಮದ್ಯದಂಗಡಿಗಳಲ್ಲಿ ದರ ಪಟ್ಟಿ ಕಡ್ಡಾಯವಾಗಿ ಅಳವಡಿಸುವಂತೆ ಕರ್ನಾಟಕ ರಾಜ್ಯ ಮದ್ಯಪ್ರಿಯರ ಸಂಘಟನೆ ಆಗ್ರಹಿಸಿದೆ. ಈ ಕುರಿತಾಗಿ ಹಾಸನದ ಕೆ.ಆರ್.ಪುರಂ ಬಡಾವಣೆಯಲ್ಲಿರುವ ಅಬಕಾರಿ ಇಲಾಖೆ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಲು ತೆರಳಿದ್ದಾಗ ವಾಗ್ವಾದ ನಡೆದಿದೆ. ಅಬಕಾರಿ ಉಪ ನಿರ್ದೇಶಕ ಮೋತಿಲಾಲ್​ ವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದೆ. ಮನವಿ ಸಲ್ಲಿಸಲು ತೆರಳಿದ್ದಾಗ ಕೊಠಡಿಯಲ್ಲಿ ನಿಂದಿಸಿ ದೌರ್ಜನ್ಯ ಆರೋಪ ಮಾಡಲಾಗಿದೆ. ಅಬಕಾರಿ ಉಪ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಠಾಣೆಗೆ ದೂರು ನೀಡಲಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಅಧಿಕಾರಿಯಿಂದ ಪ್ರತಿ ದೂರು ನೀಡಲಾಗಿದೆ.

ಮದ್ಯದಂಗಡಿಗಳಲ್ಲಿ ದರ ಪಟ್ಟಿ ಕಡ್ಡಾಯ ಅಳವಡಿಕೆಗೆ ಆಗ್ರಹ: ಅಧಿಕಾರಿಗೆ ಮನವಿ ಸಲ್ಲಿಸಲು ತೆರಳಿದ್ದಾಗ ವಾಗ್ವಾದ
ಬಡಾವಣೆ ಪೊಲೀಸ್​​ ಠಾಣೆಗೆ ದೂರು
Follow us on

ಹಾಸನ, ಫೆಬ್ರವರಿ 28: ಮದ್ಯಪ್ರಿಯರಿಗೆ ಬಾರ್​ಗಳಲ್ಲಿ (liquor) ಸೂಕ್ತ ಸೌಲಭ್ಯ ನೀಡಬೇಕು, ಮದ್ಯಪ್ರಿಯರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ, ಮದ್ಯಪ್ರಿಯರಿಗೆ ಇನ್ಸೂರೆನ್ಸ್ ಸೌಲಭ್ಯ ಹೀಗೆ ಮದ್ಯಪ್ರಿಯರಿಗೆ ಹತ್ತು ಹಲವು ಸವಲತ್ತುಗಳ ಬೇಡಿಕೆಯಿಟ್ಟು ದೊಡ್ಡ ಸದ್ದು ಮಾಡಿದ್ದ ಕರ್ನಾಟಕ ರಾಜ್ಯ ಮದ್ಯಪ್ರಿಯರ ಸಂಘಟನೆ ಇದೀಗ ಎಲ್ಲಾ ಬಾರ್​ಗಳ ಎದುರು ದರಪಟ್ಟಿ ನಿಗದಿಮಾಡಬೇಕು ಎಂದು ಹೊರಾಟಕ್ಕೆ ಇಳಿದಿದೆ. ದರಪಟ್ಟಿ ನಿಗದಿಗೆ ಒತ್ತಾಯಿಸಿ ಮನವಿ ಸಲ್ಲಿಸಲು ತೆರಳಿದ್ದ ಸಂಘಟನೆ ಸದಸ್ಯರು ಹಾಗೂ ಅಧಿಕಾರಿಗಳ ನಡುವೆ ಜಟಾಪಟಿ ನಡೆದು ಪರಸ್ಪರ ದೂರು ಪ್ರತಿದೂರು ನೀಡಿದ್ದು ಅಧಿಕಾರಿ ಅಮಾನತಿಗೆ ಮದ್ಯಪ್ರಿಯರ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

ಕಳೆದ ಆರು ತಿಂಗಳ ಹಿಂದೆ ಮದ್ಯಪ್ರಿಯರಿಗೆ ಮದ್ಯದಂಗಡಿಯಲ್ಲಿ ವಿಶ್ರಾಂತಿಗೆ ಅವಕಾಶ. ಶುದ್ದ ಕುಡಿಯುವ ನೀರು, ವಿಮೆ, ಮಕ್ಕಳಿಗೆ ಸ್ಕಾಲರ್ ಶಿಪ್, ಶಿಕ್ಷಣದಲ್ಲಿ ಮೀಸಲಾತಿ, ಅತಿಹೆಚ್ಚು ಕುಡಿಯುವವರಿಗೆ ಡ್ರಾಪ್ ಸೌಲಭ್ಯ ಹೀಗೆ ಹತ್ತಾರು ಬೇಡಿಕೆ ಮುಂದಿಡ್ಡು ದೊಡ್ಡ ಸದ್ದು ಮಾಡಿದ್ದ ಮದ್ಯಪಾನ ಪ್ರಿಯರ ಸಂಘದ ಸದಸ್ಯರು ಇದೀಗ ಎಲ್ಲಾ ಮದ್ಯದಂಗಡಿಗಳಲ್ಲಿ ದರಪಟ್ಟಿ ಪ್ರದರ್ಶನ ಮಾಡಬೇಕು ಎನ್ನುವ ಹೋರಾಟಕ್ಕಿಳಿದಿದ್ದಾರೆ.

ಈ ಬಗ್ಗೆ ಹಾಸನ ಅಬಕಾರಿ ಇಲಾಖೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೆರಳಿದ್ದ ವೇಳೆ ತಮ್ಮ ಮೇಲೆ ದೌರ್ಜನ್ಯ ಮಾಡಲಾಗಿದೆ. ತಾವು ಕೊಟ್ಟಿದ್ದ ಮನವಿ ಬಗ್ಗೆ ವಿಚಾರಿಸಲು ಹೋದರೆ ಇಲಾಕೆಯ ಜಿಲ್ಲಾ ಅಧಿಕಾರಿ ಮೋತಿಲಾಲ್ ಅವರು ದುರ್ವರ್ತನೆ ತೋರಿದ್ದಾರೆ. ನಮ್ಮ ಮೇಲೆ ದಬ್ಬಾಳಿಗೆ ನಡೆಸಿ ನಮ್ಮ ವಿರುದ್ದವೇ ಪೊಲೀಸರಿಗೆ ದೂರು ನೀಡಿ ನಮ್ಮನ್ನ ಪೊಲೀಸರು ವಶಕ್ಕೆ ಪಡೆಯುವಂತೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಡ್ರೈ ಕ್ಲೀನಿಂಗ್​ಗೆ ನೀಡಿದ್ದ ಪ್ಯಾಂಟ್‌ ಹಿಂದಿರುಗಿಸದೇ ಸತಾಯಿಸಿದಕ್ಕೆ ದಂಡ ವಿಧಿಸಿದ ಹಾಸನ ಗ್ರಾಹಕರ ಕೋರ್ಟ್

ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳಲ್ಲಿ ಸರ್ಕಾರದ ನಿಯಮದ ಪ್ರಕಾರವೇ ದರಪಟ್ಟಿ ಪ್ರದರ್ಶನ ಮಾಡಲೇ ಬೇಕು ಎಂದು ಆಗ್ರಹಿಸಿದ್ದು ತಮ್ಮ ವಿರುದ್ದ ದೌರ್ಜನ್ಯ ಎಸಗಿದ ಅಧಿಕಾರಿ ಮೋತಿಲಾಲ್ ವಿರುದ್ದ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

ಸರ್ಕರವೇ ಮದ್ಯದ ದರ ನಿಗದಿಮಾಡುತ್ತೆ. ಅದನ್ನ ಮ್ಯಾಕ್ಸಿಮಮ್ ರೀಟೇಲ್ ದರದಲ್ಲಿ ಮಾರಾಟ ಮಾಡಲು ಕೂಡ ಅಂತಿಮ ದರ ನಿಗದಿ ಮಾಡಲಾಗುತ್ತೆ ಆದರೂ ಕೂಡ ಬಹುತೇಕ ವೈನ್ ಶಾಪ್​ಗಳಲ್ಲಿ ಒಂದೊಂದು ರೀತಿಯ ಮದ್ಯಕ್ಕೆ ಒಂದೊಂದು ದರ ನಿಗದಿ ಮಾಡಿ ಆ ದರದ ಮೇಲೆಯೂ 20ರಿಂದ 30 ರೂ ವರಗೆ ಹೆಚ್ಚುವರಿ ವಸೂಲಿ ಮಾಡಲಾಗುತ್ತೆ. ಇದಕ್ಕೆ ಯಾವುದೇ ಆಧಾರವಿಲ್ಲ. ಬಿಲ್ ಕೂಡ ನೀಡೋದಿಲ್ಲ, ಇದನ್ನ ತಡೆಯಿರಿ ಎಂದರೆ ನಮ್ಮನ್ನೇ ಬೆದರಿಸುತ್ತಾರೆ ಎಂದಿದ್ದಾರೆ.

ಎಲ್ಲಾ ಕಡೆ ದರಪಟ್ಟಿ ನಿಗದಿಮಾಡಿ ಎಂದರೆ ಬಾರ್ ಮಾಲೀಕರು ನಿಮ್ಮನ್ನ ಉಳಿಸೋದಿಲ್ಲ. ನೀವು ಸುಮ್ಮನೇ ಇರಿ ಎಂದು ಜೀವ ಬೆದರಿಗೆ ಹಾಕಿದ್ದಾರೆ, ಪ್ರಶ್ನೆ ಮಾಡಿದ ನಮ್ಮನ್ನೇ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದು ನಾವು ಕೂಡ ದೂರು ದಾಖಲು ಮಾಡಿದ್ದೇವೆ. ನಾವು ತಪ್ಪು ಮಾಡಿದ್ದರೆ ಅವರದೇ ಕಛೇರಿಯ ಸಿಸಿ ಕ್ಯಾಮೆರಾದಲ್ಲಿ ದೃಶ್ಯಾವಳಿ ಇದ್ದು ಕ್ರಮ ವಹಿಸಲಿ. ನಮ್ಮ ವಿರುದ್ದ ದೌರ್ಜನ್ಯ ಎಸಗಿರುವ ಅಧಿಕಾರಿ ವಿರುದ್ದ ಕಠಿಣ ಕ್ರಮ ಆಗದಿದ್ದರೆ ನಾಳೆಯಿಂದಲೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಾಸನ, ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ರೋಗಿಗಳು ಪರದಾಟ

ಅಧಿಕಾರಿಗಳು ಕರ್ತವ್ಯಕ್ಕೆ ಅಡ್ಡಿ ಎಂದು ಮದ್ಯಪಾನ ಪ್ರಿಯರ ವಿರುದ್ದ ದೂರು ನೀಡಿದರೆ ಹೋರಾಟಗಾರರು ಅಧಿಕಾರಿಗಳ ವಿರುದ್ದವೇ ದೂರು ನೀಡಿದ್ದಾರೆ. ದೂರು ಸ್ವೀಕಾರ ಮಾಡಿರುವ ಬಡಾವಣೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದೇ ಮೊದಲಬಾರಿಗೆ ಮದ್ಯಪಾನಪ್ರಿಯರ ಸಂಘಟನೆ ಹೆಸರಿನಲ್ಲಿ ಮದ್ಯಪಾನ ಪ್ರಿಯರಿಗೆ ಹಲವು ಬೇಡಿಕೆಗಳನ್ನ ಮುಂದಿಟ್ಟು ಹೋರಾಟ ಶುರುಮಾಡಿದ್ದಾರೆ. ಮೇಲ್ನೋಟಕ್ಕೆ ಇದು ನಗೆಪಾಟಲು ಎನಿಸಿದರು ಕೂಡ ಸರ್ಕಾರವೇ ರೂಪಿಸಿರುವ ಹಲವು ನೀತಿ ನಿಯಮಗಳನ್ನ ಬಹುತೇಕ ಬಾರ್​ಗಳಲ್ಲಿ ಪಾಲನೆ ಆಗುತ್ತಿಲ್ಲ ಎನ್ನುವ ಆರೋಪ ಇದ್ದೇ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Wed, 28 February 24