ಹಾಸನದಲ್ಲೊಂದು ಅಚ್ಚರಿ! ಸತ್ತ ಕೋಳಿಯ ಬಾಯಲ್ಲಿ ಬೆಂಕಿ, ಗ್ರಾಮಸ್ಥರೇ ಶಾಕ್

|

Updated on: Dec 26, 2024 | 7:34 PM

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹದಿಗೆ ಗ್ರಾಮದಲ್ಲಿ 15ಕ್ಕೂ ಹೆಚ್ಚು ಕೋಳಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಕೋಳಿಗಳಿಗೆ ವಿಷ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಚ್ಚರಿ ಎಂದರೆ ಸತ್ತ ಕೋಳಿಯ ಬಾಯಿಯಿಂದ ಬೆಂಕಿ ಬರುತ್ತಿದೆ. ಈ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ ಮತ್ತು ಅಧಿಕಾರಿಗಳ ತನಿಖೆಗೆ ಒತ್ತಾಯಿಸಿದ್ದಾರೆ.

ಹಾಸನ, ಡಿಸೆಂಬರ್​ 26: ಜಿಲ್ಲೆಯ ಸಕಲೇಶಪುರ ತಾಲೂಕಿನ ಸಮೀಪದ ಹದಿಗೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ವಾಸವಾಗಿರುವ ಗ್ರಾಮ. ಈ ಗ್ರಾಮದಲ್ಲಿ ಹೆಚ್ಚಾಗಿ ಕೋಳಿ (Chicken) ಸಾಕಣೆ ಮಾಡಿಕೊಂಡು ಜೀವನ ನಡೆಸುತ್ತಾರೆ. ಆದರೆ ಕಾರ್ಮಿಕರು ನಿತ್ಯದಂತೆ ತಮ್ಮ ಕೂಲಿ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ವಿಷ ಸೇವಿಸಿದ ಪರಿಣಾಮ 15ಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ. ಆದರೆ ಹೀಗೆ ಸಾವನ್ನಪ್ಪಿದ್ದ ಕೋಳಿಯ ಬಾಯಿಯಿಂದ ನಿಗೂಢವಾಗಿ ಬೆಂಕಿ ಹೊರಹೊಮ್ಮುತ್ತಿದೆ. ಇದು ಹದಿಗೆ ಗ್ರಾಮಸ್ಥರಿಗೆ ಆಶ್ಚರ್ಯ ಉಂಟು ಮಾಡಿದೆ.

ಗ್ರಾಮದ ರವಿ ಎಂಬುವವರಿಗೆ ಸೇರಿದ ಕೋಳಿಗಳು ಸಾವನ್ನಪ್ಪಿವೆ. ಕೋಳಿ ಸಾಕಾಣಿಕೆಯನ್ನು ಸಹಿಸದ ಕೆಲ ಕಿಡಿಗೇಡಿಗಳು, ಕೂಲಿ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ರಾಸಾಯನಿಕ ವಿಷವಿಟ್ಟು ಸಾಯಿಸಿರುವುದಾಗಿ ಆರೋಪ ಕೇಳಿಬಂದಿದೆ. ಹೀಗೆ ಸತ್ತ ಕೋಳಿಯ ಹೊಟ್ಟೆ ಭಾಗದಲ್ಲಿ ಜೋರಾಗಿ ಅದುವಿದಾಗ ಬೆಂಕಿ ಉಗುಳುತ್ತಿವೆ. ಸದ್ಯ ಸತ್ತ ಕೋಳಿ ಬಾಯಿಯಿಂದ ಬೆಂಕಿ ಬರುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ: ಅರ್ಜುನ ವೀರ ಮರಣಹೊಂದಿ ಇಂದಿಗೆ 1 ವರ್ಷ: ಸರ್ಕಾರದ ನಡೆಗೆ ಅಭಿಮಾನಿಗಳು ಬೇಸರ

ಹದಿಗೆ ಗ್ರಾಮದ ಜನರು ಕೋಳಿ ಸಾಕಾಣಿಕೆಯನ್ನು ಉಪ ಕಸುಬು ಮಾಡಿಕೊಂಡಿದ್ದಾರೆ. ಆದರೆ ಇದನ್ನು ಸಹಿಸದ ಕೆಲವರು ಕೋಳಿಗಳು ಮರಣ ಹೊಂದುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಪಾನಿಪುರಿ, ಗೋಬಿ ಅಂಗಡಿಯವರೇ ನಮಗಿಂತ ಸುಖವಾಗಿದ್ದಾರೆ: ತಹಶೀಲ್ದಾರ್ ನೋವಿನ ಮಾತು

ಇನ್ನು ಸತ್ತ ಕೋಳಿ ಬಾಯಿಯಿಂದ ಬೆಂಕಿ ಬರುತ್ತಿರುವ ವಿಡಿಯೋಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯ ಕಮೆಂಟ್​ ಮಾಡಿದ್ದಾರೆ. ಒಬ್ಬರು ನೆಟ್ಟಿಗರು ಹೇಳುವಂತೆ ಯಾರೋ ಕೋಳಿಗಳಿಗೆ ಫೊಸೇಟ್ (ರಾಸಾಯನಿಕ ವಿಷ) ಅನ್ನು ತಿನ್ನಿಸಿದ್ದಾರೆ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್​ ಮಾಡಿದ್ದು, ಅವು ಹಾನಿಕಾರಕ ರಾಸಾಯನಿಕವನ್ನು ಸೇವಿಸಿರಬಹುದು ಎಂದು ಹೇಳಿದ್ದಾರೆ. ಇನ್ನೊಬ್ಬರು ಚೀನಿಗಳ ರಾಶಿಚಕ್ರದಲ್ಲಿ ಡ್ರ್ಯಾಗನ್​​ ಕೋಳಿಯನ್ನು ನೋಡಿದ ನೆನಪಿಲ್ಲ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:19 pm, Thu, 26 December 24